ನವದೆಹಲಿ: 2027ರ ಋತುವಿನ ಐಪಿಎಲ್ (IPL) ಆಟಗಾರರ ಹರಾಜು (Auction) ಭಾರತದಲ್ಲಿ ನಡೆಯಲಿದ್ದು, ಕಳೆದ ಮೂರು ವರ್ಷಗಳಿಂದ ವಿದೇಶದಲ್ಲಿ ನಡೆದಿದ್ದ ಈ ಟೂರ್ನಿಯನ್ನು ಮತ್ತೆ ಸ್ವದೇಶಕ್ಕೆ ತರುವ ಉದ್ದೇಶ ಹೊಂದಿರುವುದಾಗಿ ಲೀಗ್ ಅಧ್ಯಕ್ಷ ಅರುಣ್ ಧುಮಾಲ್ (Arun Dhumal) ಹೇಳಿದ್ದಾರೆ.
ಈ ಕುರಿತು ಲೀಗ್ ಅಧ್ಯಕ್ಷ ಅರುಣ್ ಧುಮಾಲ್ ಮಾಹಿತಿ ನೀಡಿದ್ದು, ಮೂರು ಆವೃತ್ತಿಗಳನ್ನು ವಿದೇಶದಲ್ಲಿ ನಡೆಸಿದ ನಂತರ 2027ರ ಋತುವಿನ ಐಪಿಎಲ್ ಆಟಗಾರರ ಹರಾಜು ಭಾರತಕ್ಕೆ ಮರಳಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಟೂರ್ನಿಯನ್ನು ಮತ್ತೆ ಸ್ವದೇಶಕ್ಕೆ ತರುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದ ಬರಪೀಡಿತ ತಾಲೂಕುಗಳ ರೈತರಿಗೆ ರಿಲೀಫ್ – ಈ ವರ್ಷ ಬಲವಂತದ ಸಾಲ ವಸೂಲಾತಿ ಇಲ್ಲ

ಹಿಂದಿನ ಮೂರು ಹರಾಜುಗಳನ್ನು ದುಬೈ, ಜೆಡ್ಡಾ ಮತ್ತು ಅಬುಧಾಬಿಯಲ್ಲಿ ನಡೆಸಲಾಗಿದ್ದು, 2025ರ ಮೆಗಾ ಹರಾಜು ಜೆಡ್ಡಾದಲ್ಲಿ ನಡೆದಿತ್ತು. ಪ್ರತಿ ವರ್ಷ ನಾವು ಭಾರತದಲ್ಲಿ ಹರಾಜು ಪ್ರಕ್ರಿಯೆಗೆ ಪ್ರಯತ್ನಿಸುತ್ತೇವೆ, ಆದರೆ ಭಾರೀ ವಿವಾಹ ಋತುವಿನಲ್ಲಿ ನಮಗೆ ಸ್ಥಳ ಸಿಗುವುದಿಲ್ಲ. ಹಾಗಾಗಿ, ಈ ವರ್ಷವೂ ಹರಾಜು ಪ್ರಕ್ರಿಯೆ ಸಣ್ಣ ಪ್ರಮಾಣದಲ್ಲಿ ನಡೆಯುವುದರಿಂದ ಮತ್ತು ಆ ಸ್ಥಳವನ್ನು ನಾವು ಪಡೆಯುತ್ತೇವೆ ಎಂಬ ಭರವಸೆ ಇರುವುದರಿಂದ, ಈ ವರ್ಷವೂ ಇಲ್ಲಿಯೇ ನಡೆಸಬೇಕೆಂದು ನಾವು ಬಯಸುತ್ತೇವೆ ಎಂದು ಧುಮಾಲ್ ತಿಳಿಸಿದ್ದಾರೆ.
ಸೆಪ್ಟೆಂಬರ್ 18ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಧುಮಾಲ್ ಅವರನ್ನು ಐಪಿಎಲ್ ಅಧ್ಯಕ್ಷರನ್ನಾಗಿ ಮರು ಆಯ್ಕೆ ಮಾಡಲಾಗುವುದು. ಬಿಸಿಸಿಐನ ಆದ್ಯತೆಯ ಸ್ಥಳದ ಲಭ್ಯತೆಯ ಆಧಾರದ ಮೇಲೆ ಹರಾಜಿನ ಆತಿಥೇಯ ನಗರವನ್ನು ನಿರ್ಧರಿಸಲಾಗುತ್ತದೆ.ಇದನ್ನೂ ಓದಿ: EPFO ವೇತನ ಮಿತಿ 25,000ಕ್ಕೆ ಏರಿಕೆ – 51 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ವಿಸ್ತರಣೆ

ಪರಿಶೀಲನೆಯಲ್ಲಿರುವ ಇಂಪ್ಯಾಕ್ಟ್ ಆಟಗಾರರ ನಿಯಮ:
ವಿವಾದಾತ್ಮಕ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಇತ್ತೀಚೆಗೆ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಯಿತು, ಬಿಸಿಸಿಐ ಫ್ರಾಂಚೈಸಿಗಳಿಂದ ಹೊಸ ಪ್ರತಿಕ್ರಿಯೆಯನ್ನು ಕೋರಿದೆ. ಈ ನಿಯಮವು ಪ್ರಸ್ತುತ 2027ರ ಋತುವಿನವರೆಗೆ ಜಾರಿಯಲ್ಲಿರಲು ನಿರ್ಧರಿಸಲಾಗಿದೆ, ಆದರೆ ಬಿಸಿಸಿಐ ಅದನ್ನು ಪರಿಶೀಲಿಸಲು ಮುಕ್ತವಾಗಿದೆ ಎಂದು ಧುಮಾಲ್ ಹೇಳಿದರು.
ಐಪಿಎಲ್ ಪಂದ್ಯದ ಯಾವುದೇ ಹಂತದಲ್ಲಿ ತಂಡಗಳು ಆಟಗಾರನನ್ನು ಬದಲಿಸಲು ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಅನುಮತಿಸುತ್ತದೆ. ಭಾರತದ ಏಕದಿನ ಮತ್ತು ಟೆಸ್ಟ್ ನಾಯಕ ಶುಭಮನ್ ಗಿಲ್, ಮಾಜಿ ನಾಯಕ ರೋಹಿತ್ ಶರ್ಮಾ, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಸೇರಿದಂತೆ ಹಲವಾರು ಪ್ರಮುಖ ಆಟಗಾರರು ಈ ನಿಯಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ನಿಯಮವು ನಿಜವಾದ ಆಲ್ ರೌಂಡರ್ಗಳ ಪಾತ್ರವನ್ನು ದುರ್ಬಲಗೊಳಿಸುತ್ತದೆ ಎಂಬುದು ಒಂದು ಕಳವಳ. ಐಪಿಎಲ್ 2026ಕ್ಕೂ ಮೊದಲು, ಹೆಚ್ಚಿನ ನಾಯಕರು ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ತಮ್ಮ ಆಕ್ಷೇಪಣೆಗಳನ್ನು ಬಿಸಿಸಿಐಗೆ ತಿಳಿಸಿದ್ದರು. ಏತನ್ಮಧ್ಯೆ, ಈ ವಾರ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಖೈರುಲ್ ಮಜುಂದಾರ್ ಕೂಡ ಧುಮಾಲ್ ಜೊತೆಗೆ ಐಪಿಎಲ್ ಆಡಳಿತ ಮಂಡಳಿಗೆ ಮರು ಆಯ್ಕೆಯಾಗಲಿದ್ದಾರೆ.ಇದನ್ನೂ ಓದಿ: ಪ್ರಶಸ್ತಿ ಬಗ್ಗೆ ಪ್ರಧಾನಿ ಮೋದಿಯವರೇ ಘೋಷಿಸಿದ್ದು ಖುಷಿಯಾಯ್ತು: ದಾದಾಸಾಹೇಬ್ ಫಾಲ್ಕೆ ಬಗ್ಗೆ ಅನಂತ್ ನಾಗ್ ರಿಯಾಕ್ಷನ್


