ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ಜೈಲು ಸೇರಿರುವ ದರ್ಶನ್ಗೆ (Actor Darshan) ಶಾಕ್ ಎದುರಾಗಿದ್ದು, ಸಿಸಿಹೆಚ್ 59ನೇ ಕೋರ್ಟ್ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿಯನ್ನು ಅಂಗೀಕಾರ ಮಾಡಿದೆ.
ಪ್ರದೋಷ್ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ನಟ ದರ್ಶನ್ ಮಾಫಿ ಸಾಕ್ಷಿ (Approver) ತಡೆ ಹಿಡಿಯುವಂತೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ, ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿಯನ್ನು ಅಂಗೀಕರಿಸಿದೆ. ಇದನ್ನೂ ಓದಿ: ಖ್ಯಾತ ನಟ ಅನಂತ್ ನಾಗ್ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ
ಇದೇ ವೇಳೆ ಕೋರ್ಟ್ ಆರೋಪಿ ಪ್ರದೋಷ್ಗೆ ಮಾಫಿ ಸಾಕ್ಷಿ ನಿಯಮಗಳನ್ನು ತಿಳಿಸಿದ್ದು, ಶೀಘ್ರದಲ್ಲೇ ದಿನಾಂಕವನ್ನು ನಿಗದಿ ಮಾಡಲಿದೆ.
ಈ ಹಿಂದೆ ಹೈಕೋರ್ಟ್ (High Court) ಸೆಷನ್ ಕೋರ್ಟ್ಗೆ ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ ಸಂಬಂಧ ನೀಡಿದ್ದ ಆದೇಶವನ್ನು ಮಾರ್ಪಡಿಸಿ, ಹೊಸ ಆದೇಶ ನೀಡುವಂತೆ ತಿಳಿಸಿತ್ತು, ಅದರಂತೆ ಇದೀಗ ಸೆಷನ್ ಕೋರ್ಟ್ ಹೊಸ ಆದೇಶ ಹೊರಡಿಸಿದೆ.ಇದನ್ನೂ ಓದಿ: ಪಾಕ್ ಮೂಲದ ಶಹಜಾದ್ ಭಟ್ಟಿ ನೆಟ್ವರ್ಕ್ ಉಗ್ರ ಸಂಘಟನೆ: ಕೇಂದ್ರ ಘೋಷಣೆ

