ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ (B.K.Hariprasad) ಮತ್ತೆ ಆರ್ಎಸ್ಎಸ್ (RSS) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಹರಿಪ್ರಸಾದ್, ಆರ್ಎಸ್ಎಸ್ ಆಕ್ಟೋಪಸ್ ಥರ, ಅದು ಎಲ್ಲೆಲ್ಲೂ ಇದೆ. ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮದಲ್ಲೂ ಈ ಆಕ್ಟೋಪಸ್ ಇದೆ. ದೇಶ ಹಾಳು ಮಾಡೋದು ಹೇಗೆ ಅಂತ ಹೇಳಿಕೊಡೋರು ಆರ್ಎಸ್ಎಸ್ನವ್ರು. ಸ್ವತಂತ್ರ ಭಾರತದ ಆಶಯಗಳಿಗೆ ವಿರೋಧ ಇರೋದನ್ನೇ ಹೇಳಿಕೊಡ್ತಾರೆ. ನಾವು ಕವಲು ದಾರಿಯಲ್ಲಿದ್ದೀವಿ. ಒಂದು ಕಡೆ ಆರ್ಎಸ್ಎಸ್ ಸಿದ್ಧಾಂತ, ಇನ್ನೊಂದು ಕಡೆ ಗಾಂಧಿ ಸಿದ್ಧಾಂತ. ಯಾವ ಕಡೆ ನಾವು ಹೋಗಬೇಕು ಅಂತ ಆಲೋಚನೆ ಮಾಡಬೇಕು ಎಂದು ಹೇಳಿದರು. ಇದನ್ನೂ ಓದಿ: ಮಸೀದಿ ರಸ್ತೆಗೆ ಗಣಪತಿ ಮೆರವಣಿಗೆ ಹೋಗಲು ನಮ್ಮ ಅಭ್ಯಂತರ ಇಲ್ಲ: ಮೈಸೂರು ಎಸ್ಪಿ
ಮೋಹನ್ ಭಾಗವತ್ ಅವರು ವಿದೇಶದಲ್ಲಿ ಹೋಗಿ, ಮುಸ್ಲಿಮರನ್ನು ವಿರೋಧಿಸೋರು ಹಿಂದೂಗಳೇ ಅಲ್ಲ ಅಂತಾರೆ. ಈ ಮಾತನ್ನು ಭಾರತದಲ್ಲಿ ಹೇಳಿ ಸ್ವಾಮಿ, ವಿದೇಶದಲ್ಲಿ ಹೇಳೋದಲ್ಲ. ಆರ್ಎಸ್ಎಸ್ನವ್ರು ಮೀಸಲಾತಿ ವಿರುದ್ಧ ಜೆನ್-ಝೀಗಳನ್ನು ಎತ್ತಿ ಕಟ್ಟಿದ್ದಾರೆ ಎಂದು ಆರೋಪಿಸಿದರು. ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಆರ್ಎಸ್ಎಸ್ ಕಾರ್ಯಕರ್ತ ಅಲ್ಲ ಅಂತ ವಾದ ಮಾಡಿದರು.
ಕಾರ್ಯಕರ್ತರು ಅಂತ ಮಾಡಿಕೊಂಡು ಅವರಿಂದ ಲಾಭ ಪಡೆದು ನಡು ನೀರಲ್ಲಿ ಬಿಟ್ಟು ಬಿಡ್ತಾರೆ. ಪ್ರಿಯಾಂಕ್ ಖರ್ಗೆಯವರು ಮಾಡಿರುವ ಆರೋಪಗಳೆಲ್ಲ ಸತ್ಯವೇ? ಆರ್ಎಸ್ಎಸ್ನವರು ಅಂಧ ಭಕ್ತರನ್ನು ಸೃಷ್ಟಿ ಮಾಡೋರು. ಸ್ವಯಂಸೇವಕರಿಗೆ ಮೂರು ತಿಂಗಳು, ಹೇಗೆ ಸುಳ್ಳು ಹೇಳಬೇಕು. ವದಂತಿ ಹೇಗೆ ಹಬ್ಬಿಸಬೇಕು ಅಂತ ತರಬೇತಿ ಕೊಡ್ತಾರೆ ಎಂದು ವಾಕ್ಸಮರ ನಡೆಸಿದರು. ಇದನ್ನೂ ಓದಿ: ಪೊಲೀಸ್ ಠಾಣೆಗೆ ನುಗ್ಗಿದ್ರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳಿಸುವ ವ್ಯವಸ್ಥೆ ಉಚಿತ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಟಾಂಗ್

