ಬಳ್ಳಾರಿ: ಬಿಜೆಪಿ ಚಲೋ(BJP Chalo) ವೇಳೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಕ್ಕೆ ಸೋಮಶೇಖರ ರೆಡ್ಡಿ(Somashekara Reddy), ರೇಣುಕಾಚಾರ್ಯ(Renukacharya) ಸೇರಿದಂತೆ 22 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಾದಯಾತ್ರೆ ಹಿನ್ನೆಲೆ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ವಾನುಮತಿಯಿಲ್ಲದೆ ಬಿಜೆಪಿ(BJP) ಬಾವುಟ ಹಾಗೂ ಬ್ಯಾನರ್ ಅಳವಡಿಸಲಾಗಿತ್ತು. ಕಾರ್ಯಕ್ರಮದ ಒಂದು ದಿನ ಮುಂಚೆಯೇ ಬ್ಯಾನರ್ ಮತ್ತು ಬಾವುಟವನ್ನು ಪಾಲಿಕೆ ಸಿಬ್ಬಂದಿ ತೆರವು ಮಾಡಿದ್ದರು.
ಸೆಪ್ಟೆಂಬರ್ 9ರಂದು ಬಿಜೆಪಿ ಪಾದಯಾತ್ರೆ ಬಳ್ಳಾರಿ(Ballari) ನಗರಕ್ಕೆ ಆಗಮಿಸಿತ್ತು. ಆಗ ಪಾದಯಾತ್ರೆ ಆಗಮಿಸುವ ಕೊಳಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಐಟಿಎಂ ಕಾಲೇಜಿನವರೆಗೆ ಮಾತ್ರ ಫ್ಲ್ಯಾಗ್ ಅಳವಡಿಸಲು ಅವಕಾಶ ನೀಡಲಾಗಿತ್ತು. ಯಾವುದೇ ಕಾರಣಕ್ಕೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್ ಕಟ್ಟದಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ನಿಷೇಧಾಜ್ಞೆ ಆದೇಶ ಹೊರಡಿಸಿದ್ದರು.
ಹೀಗಿದ್ದರೂ ನಿಯಮ ಮೀರಿ ಫ್ಲ್ಯಾಗ್, ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ನಿಯಮಬಾಹಿತವಾಗಿ ಅಳವಡಿಕೆ ಮಾಡಿದ್ದ ಬ್ಯಾನರ್ ಹಾಗೂ ಫ್ಲ್ಯಾಗ್ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದ್ದರು. ಇದನ್ನೂ ಓದಿ: ಕಾರು ಮಾಲೀಕನಿಗೆ ‘ಹೆಲ್ಮೆಟ್ ಧರಿಸಿಲ್ಲ’ ಅಂತ ನೋಟಿಸ್ ಕೊಟ್ಟ ಎಐ ಕ್ಯಾಮೆರಾ!
ಪೊಲೀಸರು ತಿಳಿ ಹೇಳಿದರೂ ಕೇಳದೇ ರಸ್ತೆ ಮೇಲೆ ಕುಳಿತು ವಾಹನಗಳನ್ನು ಅಡ್ಡಗಟ್ಟಿ ಬಿಜೆಪಿ ನಾಯಕರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದ ಹಿನ್ನೆಲೆ ಮಾಜಿ ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿ 22 ಜನರ ವಿರುದ್ಧ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಅರ್ ದಾಖಲಾಗಿದೆ.

