– ಟಿ.ನರಸೀಪುರದಲ್ಲಿ ಗಣಪತಿ ಮೆರವಣಿಗೆ ಬಗ್ಗೆ ಇನ್‌ಸ್ಪೆಕ್ಟರ್ ಹೇಳಿಕೆ ವಿವಾದ
ಮೈಸೂರು: ಟಿ.ನರಸೀಪುರದಲ್ಲಿನ (T.Narasipura) ಮಸೀದಿ ರಸ್ತೆಗೆ ಗಣಪತಿ ಮೆರವಣಿಗೆ ಹೋಗಲು ನಮ್ಮ ಅಭ್ಯಂತರ ಇಲ್ಲ ಎಂದು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ (Mallikarjun Baladandi) ಸ್ಪಷ್ಟಪಡಿಸಿದರು.
ಮಸೀದಿ ಇರುವ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋದರೆ ಗ್ರಹಚಾರ ಬಿಡಿಸುತ್ತೇನೆ ಎಂಬ ಟಿ.ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ ಅವರು ವಾರ್ನಿಂಗ್ ಮಾಡಿದ್ದರು. ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಯಿತು. ಇನ್‌ಸ್ಪೆಕ್ಟರ್ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದರು. ಇದನ್ನೂ ಓದಿ: ಪೊಲೀಸ್ ಠಾಣೆಗೆ ನುಗ್ಗಿದ್ರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳಿಸುವ ವ್ಯವಸ್ಥೆ ಉಚಿತ: ಪ್ರತಾಪ್ ಸಿಂಹಗೆ ಪ್ರಿಯಾಂಕ್ ಖರ್ಗೆ ಟಾಂಗ್
ಪರಿಸ್ಥಿತಿ ಗಂಭೀರತೆ ಅರಿತ ಮೈಸೂರು ಎಸ್‌ಪಿ, ಅನುಮತಿ ಪಡೆದು ಯಾರು ಬೇಕಾದರೂ ಆ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಮಾಡಬಹುದು. ನಮ್ಮ ಇನ್‌ಸ್ಪೆಕ್ಟರ್ ಇದನ್ನು ಹೇಳುವ ಭರದಲ್ಲಿ ಬೇರೆ ಪದ ಬಳಸಿದ್ದಾರೆ. ಕಳೆದ ಬಾರಿ ಕೆಲವರು ಅನುಮತಿ ಇಲ್ಲದೆ ತಮಗೆ ಬೇಕಾದ ರಸ್ತೆಯಲ್ಲಿ ಗಣೇಶ ಮೆರವಣಿಗೆ ನಡೆಸಿದ್ದರು ಎಂದು ತಿಳಿಸಿದರು.
ಈ ಬಾರಿ ಅನುಮತಿ ಪಡೆದು ಮಾಡಲಿ ಎಂದು ಇನ್ಸ್ಪೆಕ್ಟರ್ ಹೇಳಿದ್ದಾರೆ. ಟಿ.ನರಸೀಪುರದ ಯಾವ ರಸ್ತೆಗೂ ನಮ್ಮ ನಿರ್ಬಂಧ ಇಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಸೀದಿ ಇರೋ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿಡಿಸ್ತೀನಿ: ಇನ್ಸ್‌ಪೆಕ್ಟರ್ ಧಮ್ಕಿ

