ಬೆಂಗಳೂರು: ಗಾಳಿ ಸುದ್ದಿಗೆ ನಾನು ಉತ್ತರ ಕೊಡಲು ಆಗಲ್ಲ. ಇಡಿ (ED) ಅವರು ಹೇಳಲಿ, ಇಂತಹ ಗುತ್ತಿಗೆಯಲ್ಲಿ ಲಂಚ ಪಡೆದಿದ್ದಾರೆ, ಆ ಹಣವನ್ನ ಇಲ್ಲಿ ಹೂಡಿಕೆ ಮಾಡಿದ್ದಾರೆ ಅಂತ ದಾಖಲೆ ಕೊಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ.
ಪಿಡಬ್ಲ್ಯೂಡಿ (PWD) ಇಲಾಖೆಯಲ್ಲಿ ಗುತ್ತಿಗೆ ನೀಡಲು ಲಂಚ ಪಡೆದು ಅದನ್ನು ಹೂಡಿಕೆ ಮಾಡಲಾಗಿದೆ ಎಂಬ ಇಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೆ ಇಂತಹ ನೂರು ಪ್ರೆಸ್ ನೋಟ್ ಬಿಡುಗಡೆ ಮಾಡಿದ್ದಾರೆ ಅಲ್ವಾ. ಕನ್ವಿಕ್ಷನ್ ರೇಟ್ ಬಗ್ಗೆ ನಾನು ಕೇಳುತ್ತಿರುವುದು. ಇದು ರಾಜಕೀಯ ಪ್ರೇರಿತ ದಾಳಿ. ಇದೇ ಯತ್ನಾಳ್ ಅವರು ವಿಜೆಯಂದ್ರ ಬಗ್ಗೆ ಆರೋಪ ಮಾಡಿಲ್ವ? ಇಡಿ, ಐಟಿ ದಾಳಿ ಆಗಿದಿಯಾ? ಪಾಸ್‌ಪೋರ್ಟ್ ತೆಗೆದು ನೋಡಿ ಯರ‍್ಯಾರು ಎಲ್ಲಿಗೆ ಹೋಗಿದ್ದಾರೆ ಅಂತ. ನಮ್ಮ ಪಾಸ್ ಪೋರ್ಟ್ ನಾವು ಕೋಡುತ್ತೇವೆ, ಬಿಜೆಪಿಯವರು ಕೊಡುತ್ತಾರಾ? ದುಬೈ, ಮಾರಿಷಸ್‌ಗೆ ಎಷ್ಟು ಸಲ ಹೋಗಿ ಬಂದಿದ್ದಾರೆ ಅಂತ ಕೊಡಲಿ ಎಲ್ಲರೂ. ಬಿಜೆಪಿ ಎಂಎಲ್‌ಎಗಳು, ಮಾಜಿ ಸಚಿವರು ಎಲ್ಲಾ ಪಾಸ್‌ಪೋರ್ಟ್ ಕೊಡ್ಲಿ, ಎಲ್ಲಾ ತನಿಖೆ ಆಗಲಿ, ನಾವು ಕೊಡುತ್ತೇವೆ ಎಂದರು. ಇದನ್ನೂ ಓದಿ: ಹೊಸನಗರ | ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್
ಕಾನೂನು ರೀತಿ ಹೂಡಿಕೆ ಮಾಡಿದ್ರೆ ಅಕ್ರಮ ಅಲ್ಲ. ಯಾವ ಗುತ್ತಿಗೆಯಲ್ಲಿ ಎಷ್ಟು ಲಂಚ ತೆಗೆದುಕೊಂಡಿದ್ದಾರೆ ತೋರಿಸಿ ಇಲ್ಲ ಅಂದ್ರೆ ಇಡಿ ಅವರದು ಇದು ಹಳೆ ಎಸ್‌ಒಪಿ ಹೆದರಿಸೋದು, ಬೆದರಿಸೋದು. ದೊಡ್ಡ ಉದಾಹರಣೆ ನಮ್ಮ ರಾಜ್ಯದಲ್ಲಿ ಸಿಎಂ ಅವರದ್ದು ಇದೆ. ಏನೇನು ಆಪಾದನೆ ಮಾಡಿದ್ರು, ನ್ಯಾಯಾಲಯದಲ್ಲಿ ಏನು ಆಯ್ತು? ಅದಕ್ಕೆ ಬಿಜೆಪಿ ಅವ್ರು ಕೇಂದ್ರ ಸರ್ಕಾರದವ್ರು ಕ್ಷಮೆ ಕೇಳಿದ್ರಾ? ಮಾನಸಿಕವಾಗಿ ಹಿಂಸೆ ಕೊಟ್ರು ಅಲ್ವ? ಸಿಎಂ ಮತ್ತು ಅವರ ಕುಟುಂಬದವರಿಗೆ ಇಷ್ಟು ಚಾರಿತ್ರö್ಯ ಹರಣ ಮಾಡಿದ್ದಕ್ಕೆ ಕ್ಷಮೆ ಕೇಳಿದ್ರ? ಬಿಜೆಪಿಗೆ ಹೋದ ತಕ್ಷಣವೇ ಎಲ್ಲ ಶುದ್ಧ ಆಗುತ್ತೆ. ಯಾರು ಯಾರು ಅತೀ ಭ್ರಷ್ಟ ರಾಜಕಾರಣಿಗಳು ಇದ್ದಾರೆ ಅಂತ ಹೇಳುತ್ತಿದ್ದರು ಅವರು ಬಿಜೆಪಿಗೆ ಹೋದ ತಕ್ಷಣವೇ ಗಂಗಾ ಜಲದಿಂದ ಪವಿತ್ರ ಆಗಿಬಿಟ್ಟರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜಾಗತಿಕ ಆಡಳಿತದಲ್ಲಿ ಸುಧಾರಣೆ ಅಗತ್ಯ: ಮೋದಿ
ಇದು ರಾಜಕೀಯ ಪ್ರೇರಿತ. ನನ್ನ ಮೇಲೆ ದಾಳಿ ಮಾಡುತ್ತಾರೆ ಅಂತ ಹೇಳಿದ್ದೀನಿ. ಇದೆಲ್ಲವೂ ಟಾರ್ಗೆಟ್. ನಾನು ಕೆಪಿಎಸ್ಸಿಯಲ್ಲಿ ಹಣ ನುಂಗಿದ್ದೇನೆ ಅಂತ ಆರೋಪ ಮಾಡಿದ್ರು, ಒಂದು ದಾಖಲೆ ಕೊಟ್ಟಿದ್ದಾರಾ? ಸುಮ್ಮನೆ ಹಿಟ್ ಅಂಡ್ ರನ್ ಮಾಡಿದ್ದಾರೆ. ನಮ್ಮ ಮೇಲೆ ಯಾಕೆ ಗುರಿ ಇಟ್ಟಿದ್ದಾರೆ? ಯಾಕೆ ಟಾರ್ಗೆಟ್ ಅಂದ್ರೆ ಅವರ ಹಗರಣಗಳ ಬಗ್ಗೆ ಮಾತನಾಡುತ್ತೇವೆ. ಅವರ ಲೋಪ ಎತ್ತಿ ಹಿಡಿಯುತ್ತಿದ್ದೇವೆ. ದೇಶದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗದ ಬಗ್ಗೆ ನಾವು ಬಹಿರಂಗವಾಗಿ ಮಾತನಾಡುತ್ತಿದ್ದೇವೆ. ನಾವು ಆರ್‌ಎಸ್‌ಎಸ್ ಬಗ್ಗೆ ಪ್ರಶ್ನೆ ಮಾಡಿದ್ದೇವೆ, ಅವರ ಅಸ್ತಿತ್ವದ ಬಗ್ಗೆ ಕೇಳುತ್ತಿದ್ದೇವೆ. ನೋಂದಣಿ ಬಗ್ಗೆ ಕೇಳಿದ್ದೇವೆ. ಉತ್ತರ ಕೊಡಲು ಆಗುತ್ತಿಲ್ಲ. ಅದಕ್ಕೆ ಅವರು ಟಾರ್ಗೆಟ್ ಮಾಡುತ್ತಾರೆ. ಯಾರು ಪ್ರಶ್ನೆ ಮಾಡುತ್ತಾರೆ ಅವರನ್ನು ಗುರಿಯಾಗಿಸಿ ದಾಳಿ ಮಾಡ್ತಾರೆ ಎಂದು ಹರಿಹಾಯ್ದರು. ಇದನ್ನೂ ಓದಿ: ಭರ್ತಿಯಾಗಿ ಕೋಡಿಬಿದ್ದ 380 ಎಕರೆ ವಿಸ್ತೀರ್ಣದ ಬೃಹತ್ ಬೆಳವಾಡಿ ಕೆರೆ – ಬಾಗಿನ ಅರ್ಪಿಸಿದ ಸಿ.ಟಿ ರವಿ

