ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮನೆಯಲ್ಲಿ 15 ಲಕ್ಷ ರೂ. ಮೌಲ್ಯದ ವಿದೇಶಿ ಹಣವನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ.
ವಿದೇಶದಲ್ಲಿ ಹಣ ಹೂಡಿಕೆ ಆರೋಪ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಇ.ಡಿ ದಾಳಿ ನಡೆಸಿತ್ತು. ದಾಳಿ ವೇಳೆ ವಿದೇಶಿ ಹಣ ಪತ್ತೆಯಾಗಿದೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ವಿರುದ್ಧ ಎಡಿಜಿಪಿ ಕಂಪನಿಯಿಂದ ಕಿಕ್‌ಬ್ಯಾಕ್ ಪಡೆದಿರೋ ಆರೋಪ; ED ಸ್ಫೋಟಕ ಮಾಹಿತಿ
ದಾಖಲೆಗಳು ಇಲ್ಲದ 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಸಿಕ್ಕಿದೆ. ಇದರ ಫೋಟೊವನ್ನು ಇ.ಡಿ ರಿಲೀಸ್ ಮಾಡಿದೆ. 5 ದೇಶಗಳ ಕರೆನ್ಸಿ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.
ಅಮೆರಿಕಾ ಡಾಲರ್, ಮಲೇಷಿಯಾ ರಿಂಗೆಟ್, ಚೈನೀಸ್ ಯುವಾನ್, ಯುರೋ ಕರೆನ್ಸಿ ಮತ್ತೆ ದುಬೈನ ದಿರಹಂ ಕರೆನ್ಸಿಯನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಇಡಿ ಕೇಂದ್ರದ ಕೈಗೊಂಬೆ, ಇನ್ನಷ್ಟು ಕಾಂಗ್ರೆಸ್ ಶಾಸಕರ ಮೇಲೆ ದಾಳಿ ಆಗಲಿದೆ: ನಾಗೇಂದ್ರ ಭವಿಷ್ಯ

