- 38 ವರ್ಷದವಳ ಬೆನ್ನು ಬಿದ್ದಿದ್ದ 22ರ ತರುಣ – ಕೊಲೆ ಬಳಿಕ ಆತ್ಮಹತ್ಯೆಗೆ ಶರಣು
ಸ್ಯಾಕ್ರಮೆಂಟೊ: ಕ್ಯಾಲಿಫೋರ್ನಿಯಾದ (California) ರಾಜಧಾನಿ ಸ್ಯಾಕ್ರಮೆಂಟೊದಲ್ಲಿ, 22 ವರ್ಷದ ಯುವಕನೊಬ್ಬ ಭಾರತೀಯ ಮೂಲದ 38 ವರ್ಷದ ಮಹಿಳೆಯನ್ನು (Woman) ಗುಂಡಿಕ್ಕಿ ಹತ್ಯೆಗೈದಿದ್ದಾನೆ.
ಶಾಲಿನಿ ಠಾಕೂರ್ ಹತ್ಯೆಯಾದ ಮಹಿಳೆ. ರೋಹಿತ್ ಗುಂಡಿಕ್ಕಿ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಆರೋಪಿಯು ಕೆಲವು ತಿಂಗಳಿಂದ ಮಹಿಳೆಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ನನ್ನನ್ನು ಮದುವೆಯಾಗದಿದ್ರೆ ಕೊಂದು ಬಿಡ್ತೀನಿ – ಬೆದರಿಕೆ ಹಾಕಿ ಮರುದಿನವೇ ವಿದ್ಯಾರ್ಥಿನಿಗೆ ಗುಂಡಿಕ್ಕಿ ಹತ್ಯೆ
ಸ್ಯಾಕ್ರಮೆಂಟೊದ ಆರ್ಡೆನ್ ಆರ್ಕೇಡ್ ಪ್ರದೇಶದಲ್ಲಿರುವ ಶಾಪಿಂಗ್ ಪ್ಲಾಜಾದಲ್ಲಿನ ಶಾಲಿನಿ ಠಾಕೂರ್ ಕೆಲಸ ಮಾಡುತ್ತಿದ್ದರು. ಅದರ ಹೊರಗೆ ಆರೋಪಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಶಾಲಿನಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಆದರೆ ಅವರನ್ನು ಬೆನ್ನಟ್ಟಿದ ಆರೋಪಿ ಹಲವಾರು ಜನರ ಎದರೇ ಗುಂಡು ಹಾರಿಸಿ ಕೊಲೆಗೈದಿದ್ದಾನೆ.
ಗುಂಡು ಹಾರಿಸಿಕೊಂಡು ಆರೋಪಿ ಆತ್ಮಹತ್ಯೆ
ಕೊಲೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿದ್ದರು. ಬಂಧಿಸಲು ಆತನನ್ನು ತಡೆದಾಗ ರೋಹಿತ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಕ್ಷಿಗಳು ಶಂಕಿತನ ವಾಹನದ ವಿವರಗಳನ್ನು ಪೊಲೀಸರಿಗೆ ನೀಡಿದ್ದರು. ಈ ಮಾಹಿತಿ ಆಧರಿಸಿ ಅಧಿಕಾರಿಗಳು ವಾಹನ ಟ್ರೇಸ್ ಮಾಡಿ, ಆರೋಪಿ ಇರುವ ಸ್ಥಳವನ್ನು ಪತ್ತೆಹಚ್ಚಿದ್ದರು. ಪೊಲೀಸರು ಆತನಿಗೆ ವಾಹನ ನಿಲ್ಲಿಸುವಂತೆ ಸೂಚಿಸಿದರು. ಆತ ವಾಹನಿ ನಿಲ್ಲಿಸುತ್ತಿದ್ದಂತೆ ಪೊಲೀಸರು ಸುತ್ತುವರೆದರು.
ಬಳಿಕ ಪೊಲೀಸರು ಆರೋಪಿಯ ಯಾವುದೇ ಚಲನ ವಲನ ಇಲ್ಲದೇ ಇರುವುದನ್ನು ಗಮನಿಸಿ, ಚಾಲಕನ ಬದಿಯ ಕಿಟಕಿ ಒಡೆದು, ಡ್ರೋನ್ ಕಳುಹಿಸಿದರು. ಈ ವೇಳೆ ಆತ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಹತ್ಯೆಯಾದ ಶಾಲಿನಿ ತಾಯಿ ಹೇಳಿದ್ದೇನು?
ಶಾಲಿನಿಯ ತಾಯಿ ಸುದೇಶ್ ಕುಮಾರಿ, ರೋಹಿತ್ ಸುಮಾರು ಒಂದು ವರ್ಷದಿಂದ ಶಾಲಿನಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎಂದು ಹೇಳಿದ್ದಾರೆ. ರೋಹಿತ್ ತನ್ನ ಮಗಳನ್ನು ಮದುವೆಯಾಗಲು ಬಯಸಿದ್ದ. ವಯಸ್ಸಿನ ವ್ಯತ್ಯಾಸದಿಂದಾಗಿ ಶಾಲಿನಿ ಅವನನ್ನು ನಿರಾಕರಿಸಿದರು. ಇದಾದ ಬಳಿಕ ಆತನ ಕಿರುಕುಳ ಹೆಚ್ಚಾಗಿತ್ತು. ಒಮ್ಮೆ ಆಕೆಯ ಫ್ಲಾಟ್‌ಗೂ ನುಗ್ಗಿದ್ದ ಎಂದು ಅವರು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ಯುವತಿಗೆ ಗುಂಡಿಕ್ಕಿ ಹತ್ಯೆ

