ಬಿಗ್‌ಬಾಸ್ (Bigg Boss) ಮನೆ ದಿನದಿಂದ ದಿನಕ್ಕೆ ರಣರಂಗವಾಗುತ್ತಿದೆ. ಟಾಸ್ಕ್‌ನಿಂದಾಗಿ ಒಬ್ಬರಿಗೊಬ್ಬರು ಕಿತ್ತಾಡುತ್ತಿದ್ದಾರೆ. ಇದೇ ಟಾಸ್ಕ್ ವಿಚಾರಕ್ಕೆ ಸ್ಪರ್ಧಿ ಆಸಿಯಾ ಫಿರ್ದೋಸ್ ಕಣ್ಣೀರಿಟ್ಟಿದ್ದರು. ಈ ಬಾರಿ ಟಾಸ್ಕ್‌ನಲ್ಲಿ ನಾನು ಆಡುತ್ತೇನೆ, ನಾನ್ಯಾಕೆ ಆಡಬಾರದು ಎಂದು ಉಳಿದ ಸ್ಪರ್ಧಿಗಳೊಂದಿಗೆ ಬೇಸರ ವ್ಯಕ್ತಪಡಿಸಿದ್ದರು.
ಇದೇ ಆಸಿಯಾ ವರ್ತನೆ ಮುಂದಿಟ್ಟುಕೊಂಡು ಸ್ಪರ್ಧಿ ಸೌಂದರ್ಯ ಶೆಟ್ಟಿ (Soundarya Shetty) ಅಣುಕಿಸಿದ್ದರು. ಆಸಿಯಾ ವರ್ತನೆಯನ್ನು ಅತಿಶಯೋಕ್ತಿ ಎಂಬಂತೆ ಕ್ಯಾಮೆರಾ ಮುಂದೆ ಆಸಿಯಾರಂತೆ ನಟಿಸಿದ್ದರು. ಈ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸೌಂದರ್ಯ ನಿಜವಾಗಿಯೇ ಅಳುವಂತಾಗಿದೆ. ಇದೀಗ ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು ಸೌಂದರ್ಯ ಟ್ರೋಲ್ ಆಗುತ್ತಿದ್ದಾರೆ. ಸೌಂದರ್ಯ ಕಣ್ಣೀರನ್ನ ಇನ್‌ಸ್ಟಂಟ್ ಕರ್ಮ (Instat Karma) ಎಂದು ಕರೆಯುತ್ತಿದ್ದಾರೆ. ಇದನ್ನೂ ಓದಿ: BBK 13: ಸೌಂದರ್ಯ ಶೆಟ್ಟಿಗೆ ತಲೆನೋವು ತರಿಸಿದ ಮಂಜ

ಆಸಿಯಾ ಬಗ್ಗೆ ಅಣುಕಿಸಿದ್ದ ಸೌಂದರ್ಯಗೆ ಅದಾದ ಕೆಲವೇ ಗಂಟೆಗಳಲ್ಲಿ ಮಂಜನ ಮಾತು ತಲೆನೋವು ತಂದಿದೆ ಎಂದು ರಾತ್ರಿ ಕಣ್ಣೀರಿಟ್ಟಿದ್ದರು. ಬಿಕ್ಕಿ ಬಿಕ್ಕಿ ಅತ್ತಿದ್ದರು. ಆಗ ಸ್ವತಃ ಆಸಿಯಾ ಸೇರಿದಂತೆ ಉಳಿದೆಲ್ಲ ಸ್ಪರ್ಧಿಗಳು ಅವರನ್ನು ಸಮಾಧಾನಪಡಿಸಿದ್ದರು. ಗಟ್ಟಿಗಿತ್ತಿ ಎಂಬಂತ್ತಿದ್ದ ಸೌಂದರ್ಯ, ಆಸಿಯಾಗೆ ಅಣುಕಿಸಿದ ಕೆಲವೇ ಗಂಟೆಗಳಲ್ಲಿ ನಿಜವಾಗಿಯೂ ಅಳುವಂತಾಗಿದೆ. ಈ ಸಂಗತಿಯನ್ನು ನೆಟ್ಟಿಗರು ಇನ್‌ಸ್ಟಂಟ್ ಕರ್ಮಕ್ಕೆ ಹೋಲಿಕೆ ಮಾಡಿ, ಸೌಂದರ್ಯರನ್ನು ಟ್ರೋಲ್ ಮಾಡುತ್ತಿದ್ದಾರೆ.

