ಹುಬ್ಬಳ್ಳಿ: ರೈಲ್ವೆ ನಿಲ್ದಾಣದ ಪಾರ್ಕಿಂಗ್ ಹತ್ತಿರದ ರಸ್ತೆಯಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಕೇಂದ್ರ ಅಪರಾಧ ಶಾಖೆ (CCB) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಾಂತೇಶ ಹೊಸಮನಿ, ಅಲಿಣಾ ನೂರುಲ್ಲಾ, ಫಯಾಜ್ ಗೂಂಟವಾಲೆ ಹಾಗೂ ಸೊಯಬ್ ಪೊಲೀಸರ ವಶದಲ್ಲಿರುವ ಆರೋಪಿಗಳು.
ಆರೋಪಿಗಳಿಂದ ಒಟ್ಟು 1.53 ಲಕ್ಷ ರೂ. ಮೌಲ್ಯದ 6.135 ಕೆಜಿ ಗಾಂಜಾ, ನಾಲ್ಕು ಮೊಬೈಲ್‌ಗಳು, ಒಂದು ಸಾವಿರ ರೂಪಾಯಿ ನಗದು ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಯುಜಿನೀಟ್ ಹೆಚ್ಚುವರಿ 150 ವೈದ್ಯಕೀಯ ಸೀಟು ಲಭ್ಯ: ಕೆಇಎ
ರೈಲ್ವೆ ನಿಲ್ದಾಣದಂತಹ ಜನನಿಬಿಡ ಪ್ರದೇಶದ ಪಾರ್ಕಿಂಗ್ ರಸ್ತೆಯಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪ ಕೇಳಿಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಂಜಾ ಎಲ್ಲಿಂದ ತರಲಾಗಿತ್ತು? ಯಾರಿಗೆ ಮಾರಾಟ ಮಾಡಲಾಗುತ್ತಿತ್ತು? ಈ ಜಾಲದ ಹಿಂದೆ ಇನ್ನಷ್ಟು ಮಂದಿ ಇದ್ದಾರೆಯೇ? ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಇದನ್ನೂ ಓದಿ: ಆರೋಪಿ ಪವಿತ್ರಾ ಗೌಡಗೆ ಗುಡ್ ನ್ಯೂಸ್ – ಜೈಲಲ್ಲಿ ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಲು ಕೋರ್ಟ್ ಒಪ್ಪಿಗೆ
