– ಪ್ರತಿವಾದ ಆಲಿಸಿದ ಬಳಿಕ ಆದೇಶ ಕಾಯ್ದಿರಿಸಿದ ನ್ಯಾಯಾಲಯ
ನವದೆಹಲಿ: ಧಾರವಾಡದ ಯೋಗೇಶ್ ಗೌಡ (Yogesh Gowda) ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ (Vinay Kulkarni) ಭಾಗಿಯಾಗಿರುವ ಬಗ್ಗೆ ಯಾವುದೇ ಪ್ರತ್ಯಕ್ಷದರ್ಶಿಗಳಿಲ್ಲ, ವಿನಯ್ ಕುಲಕರ್ಣಿ ಜನಪ್ರತಿನಿಧಿಯಾಗಿರುವ ಹಿನ್ನೆಲೆ ಅವರು ಜೈಲಿನಲ್ಲಿ ಇರಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದರು.
ಜನಪ್ರತಿನಿಧಿಗಳ ನ್ಯಾಯಲಯ ನೀಡಿದ ಆದೇಶಕ್ಕೆ ಹೈಕೋರ್ಟ್ ತಡೆ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ (Supreme Court) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಪರವಾಗಿ ಸಿಂಘ್ವಿ ವಾದ ಮಂಡಿಸಿದರು. ಇಡೀ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರ ತಪ್ಪು ಕಲ್ಪನೆಯಿಂದ ಕೂಡಿದೆ, ಮೂರು ವರ್ಷದಲ್ಲಿ 61 ಸಾಕ್ಷ್ಯ ವಿಚಾರಣೆ ನಡೆದಿದೆ, 2016-19ರವರೆಗೂ ವಿಚಾರಣೆ ನಡೆದಿದೆ, ನಾಲ್ಕು ವರ್ಷದ ಬಳಿಕ ಅಪರಾಧಿ ಎಂದು ಕೋರ್ಟ್ ಆದೇಶಿಸಿದೆ. ಜನಪ್ರತಿನಿಧಿಯಾಗಿದ್ದು ಜೈಲಿನಿಂದ ಹೊರಇರಬೇಕಾಗುತ್ತದೆ ಎಂದು ವಾದಿಸಿದರು. ಇದನ್ನೂ ಓದಿ: ವಂದೇ ಮಾತರಂ ಪೂರ್ಣ ಗಾಯನ ಕಡ್ಡಾಯ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್
ಸಿಬಿಐ ಪರ ವಕೀಲರು ಪ್ರತಿವಾದ ಮಂಡಿಸಿ, ವಿನಯ್ ಕುಲಕರ್ಣಿಗೆ ಈ ಹಿಂದೆ ನ್ಯಾಯಾಲಯದಿಂದ ಜಾಮೀನು ದೊರೆತಿದ್ದರೂ ಷರತ್ತುಗಳ ಉಲ್ಲಂಘನೆಯಾಗಿದೆ. ಜನಪ್ರತಿನಿಧಿಯಾಗಿರುವುದರಿಂದಲೇ ಜಾಮೀನು ನೀಡಬೇಕೆಂಬ ವಾದವನ್ನು ಒಪ್ಪಲಾಗದು. ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪಗಳನ್ನೂ ಪ್ರಸ್ತಾಪಿಸಿದರು.
ಈ ವೇಳೆ ನ್ಯಾಯಪೀಠವು ಕರ್ನಾಟಕ ಹೈಕೋರ್ಟ್ನಲ್ಲಿ ಇದೇ ಅಂಶಗಳನ್ನು ಮಂಡಿಸಲಾಗಿತ್ತೆ ಎಂದು ಪ್ರಶ್ನಿಸಿತು. ಜಾಮೀನು ಮತ್ತು ಶಿಕ್ಷೆಗೆ ತಡೆ ನೀಡಿರುವ ಹೈಕೋರ್ಟ್ನ ಆದೇಶಗಳ ನಡುವಿನ ವ್ಯತ್ಯಾಸವನ್ನು ಸಿಬಿಐ ಪರ ವಕೀಲರು ವಿವರಿಸಿದರು. ಧಾರವಾಡದ ವಿಚಾರಣೆಯಲ್ಲಿ ಹೊರಬಂದ ಕೆಲವು ಅಂಶಗಳನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು.ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಯುವತಿ ದುರ್ಮರಣ
ಮಾಫಿ ಸಾಕ್ಷಿಯ ಹೇಳಿಕೆಯ ಆಧಾರದಲ್ಲಿಯೂ ಆರೋಪಿಗೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂಬ ವಾದವನ್ನು ಸಿಬಿಐ ಮುಂದಿಟ್ಟಿತು. ಈ ಪ್ರಕರಣವನ್ನು ಸಾಮಾನ್ಯ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬುದು ಸಿಬಿಐ ವಾದಿಸಿತು.
ಸಹ ಆರೋಪಿ ಚಂದ್ರಶೇಖರ್ ಇಂಡಿ ಪರ ಹಿರಿಯ ವಕೀಲ ನಾಗಮುತ್ತು ವಾದ ಮಂಡಿಸಿ, ತಮ್ಮ ಕಕ್ಷಿದಾರರಿಗೆ ಪರಿಹಾರ ನೀಡಬಹುದಾದ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಅಪರಾಧ ಸಂಚು ಇದೆ ಎನ್ನಲಾಗುತ್ತಿರುವಾಗ ಜಾಮೀನು ನೀಡುವುದು ಹೇಗೆ ಸಾಧ್ಯ ಎಂದು ನ್ಯಾಯಪೀಠ ಪ್ರಶ್ನಿಸಿತು.ಇದನ್ನೂ ಓದಿ:ಬೆಂಗಳೂರಲ್ಲಿ ಡಿಆರ್ಡಿಒ ಇಲಾಖೆಯ ಹಿರಿಯ ವಿಜ್ಞಾನಿ ಆತ್ಮಹತ್ಯೆ
ಇದಕ್ಕೆ ಪ್ರತಿಕ್ರಿಯಿಸಿದ ನಾಗಮುತ್ತು, ಚಂದ್ರಶೇಖರ್ ಇಂಡಿ ಸಂಚಿನ ಭಾಗವಾಗಿದ್ದರು ಎನ್ನುವ ಆರೋಪವಿದ್ದರೂ ಕೊಲೆ ನಡೆದ ಸ್ಥಳದಲ್ಲಿ ಅವರು ಇರಲಿಲ್ಲ. ತಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲ. ಪ್ರಕರಣದ ಆರಂಭದಲ್ಲಿ ಅವರ ಹೆಸರು ಇರಲಿಲ್ಲ. ಕೊನೆಯ ಹಂತದಲ್ಲಿ ಹೆಸರನ್ನು ಸೇರಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿನ ಒಂದೇ ಒಂದು ದೃಶ್ಯವನ್ನು ಸಾಕ್ಷ್ಯವಾಗಿ ಪರಿಗಣಿಸಲಾಗಿದೆ ಎಂದೂ ನ್ಯಾಯಾಲಯದ ಗಮನ ಸೆಳೆದರು. ವಾದ ಪ್ರತಿವಾದ ಆಲಿಸಿದ ಬಳಿಕ ಐದು ದಿನಗಳಲ್ಲಿ ಲಿಖಿತ ವಾದ ಸಲ್ಲಿಸಲು ಸೂಚಿಸಿದ ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ದ್ವಿ ಸದಸ್ಯ ಪೀಠ ಆದೇಶವನ್ನು ಕಾಯ್ದಿರಿಸಿತು.ಇದನ್ನೂ ಓದಿ: ಗರ್ಭಿಣಿ ಪತ್ರಕರ್ತೆಯನ್ನು ತಳ್ಳಿದ ಪ್ರಕರಣ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್
