ಬೆಂಗಳೂರು: ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ (SIR) ಪರಿಷ್ಕರಣೆ ಆಗ್ತಿದೆ. ಎಸ್‌ಐಆರ್ ನೋಟಿಸ್ ಅನ್ನು ಈಗಾಗಲೆ ನೀಡಲಾಗಿದ್ದು, ನೋಟಿಸ್‌ಗಳ ವಿಚಾರಣೆ ಅಧಿಕೃತವಾಗಿ ಆರಂಭ ಆಗಿದೆ.
ರಾಜ್ಯಾದ್ಯಂತ 43.81 ಲಕ್ಷಕ್ಕೂ ಹೆಚ್ಚು ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿದ್ದು. ಬೆಂಗಳೂರಿನಲ್ಲೇ (Bengaluru) 24 ಲಕ್ಷಕ್ಕೂ ಹೆಚ್ಚು ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಮೊದಲ ಹಂತವಾಗಿ ಲಕ್ಷಾಂತರ ಮಂದಿಗೆ ನೋಟಿಸ್ ತಲುಪಿಸಲಾಗಿದ್ದು, ಐದನೇ ತಾರೀಖಿನಿಂದ ಮತದಾರರು ನಿಗದಿಪಡಿಸಿದ ಕೇಂದ್ರಗಳಿಗೆ ಭೇಟಿ ನೀಡಿ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇದನ್ನೂ ಓದಿ: ತೀವ್ರ ದ್ವೇಷವಲ್ಲ, ಶುದ್ಧ ಸಾತ್ವಿಕ ಪ್ರೇಮವೇ ಆರ್‌ಎಸ್‌ಎಸ್ ಕಾರ್ಯದ ಅಡಿಪಾಯ: ಮೋಹನ್ ಭಾಗವತ್
ಅನ್ ಮ್ಯಾಪಿಂಗ್ ಆದವರಿಗೆ ಮತ್ತು ಗೊಂದಲಮಯವಾಗಿರುವವರಿಗೆ ನೋಟಿಸ್ ನೀಡಲಾಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಶಾಲೆ, ಕಲ್ಯಾಣ ಮಂಟಪ, ಜಿಬಿಎ ಕಚೇರಿಗಳಲ್ಲಿ ನೋಟಿಸ್ ನೀಡಿರುವ ಮತದಾರರ ವಿಚಾರಣೆ ಮಾಡಲಾಗ್ತಿದೆ. ನೋಟಿಸ್ ಪಡೆದವರು ಸೂಕ್ತ ದಾಖಲೆಗಳ ಜೊತೆಗೆ ವಿಚಾರಣೆ ಎದುರಿಸಿ ಮತದಾರರ ಪಟ್ಟಿಯಲ್ಲಿ ಹೆಸರನ್ನ ಸೇರ್ಪಡೆ ಮಾಡಿಕೊಳ್ಳಬಹುದಾಗಿದೆ.ಇದನ್ನೂ ಓದಿ:ಬಾಗಲಕೋಟೆ| ಮೊಸರು ಕುಡಿಕೆ ಉತ್ಸವದಲ್ಲಿ ಗಲಾಟೆ, ಲಾಠಿಚಾರ್ಜ್
ವಿಚಾರಣೆಗೆ ತೆರಳುವಾಗ ಯಾವೆಲ್ಲ ದಾಖಲಾತಿಗಳನ್ನ ಕೊಂಡೊಯ್ಯಬೇಕು ?
- ನಿಮ್ಮ ಗುರುತು ಮತ್ತು ವಾಸಸ್ಥಳವನ್ನು ದೃಢೀಕರಿಸಲು ಕನಿಷ್ಠ ಎರಡು ಸರ್ಕಾರಿ ದಾಖಲೆಗಳನ್ನು ಕೊಂಡೊಯ್ಯಬೇಕು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ರೇಷನ್ ಕಾರ್ಡ್
- ಪಾಸ್‌ಪೋರ್ಟ್
- ಜನನ ಪ್ರಮಾಣ
- ಮತದಾರರ ಗುರುತಿನ ಚೀಟಿ
