ಭಾನುವಾರ ಬಂತೆಂದರೆ ಸಾಕು ಮಾಂಸಹಾರಿಗಳಿಗೆ ನಾಲಿಗೆ ಮಾಂಸದ ಆಹಾರವನ್ನು ತಿನ್ನಲು ಬಯಸುತ್ತದೆ. ಫಿಶ್ನಲ್ಲಿ ಏನಾದರೂ ವಿಭಿನ್ನವಾಗಿ ಮಾಡಲು ಬಯಸಿದರೆ ಇಂದು ಫಿಶ್ ಕಬಾಬ್ ಮಾಡಲು ಟ್ರೈ ಮಾಡಿ. ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ಬಳಸಿ ಫಿಶ್ ಕಬಾಬ್ನ್ನು ಸರಳವಾಗಿ, ಕಡಿಮೆಯಲ್ಲಿ ಸಮಯದಲ್ಲಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:
* ಮೀನು
* ನಿಂಬೆಹಣ್ಣಿನ ರಸ
* ಕಡಲೆಹಿಟ್ಟು
* ಬೆಳ್ಳುಳ್ಳಿ, ಶುಂಠಿ ಪೆಸ್ಟ್
* ಹಸಿಹಸಿಮೆಣಸಿನ ಪೇಸ್ಟ್
* ದನಿಯಾ ಪುಡಿ
* ಅರಿಶಿಣ ಪುಡಿ
* ಜೀರಿಗೆ ಪುಡಿ
* ಗರಂಮಸಾಲೆ
* ಕೊತ್ತಂಬರಿ ಸೊಪ್ಪು
* ಈರುಳ್ಳಿ
* ಅಡುಗೆ ಎಣ್ಣೆ
* ಉಪ್ಪು

ಮಾಡುವ ವಿಧಾನ:
ಮೊದಲು ಮೀನನ್ನು ಚೆನ್ನಾಗಿ ತೊಳೆದು ಒಣಗಿಸಿ ಬೌಲ್ ಒಂದರಲ್ಲಿ ಹಾಕಿ ಅದಕ್ಕೆ ಉಪ್ಪು ಹಾಗೂ ನಿಂಬೆರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಎಣ್ಣೆಯನ್ನು ಬಿಸಿಮಾಡಿ ಮೀನನ್ನು ಎಣ್ಣೆಯಲ್ಲಿ ಹಾಕಿ ಸ್ವಲ್ಪ ಕರಿದುಕೊಳ್ಳಬೇಕು. ನಂತರ ಮೀನಿಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಉಪ್ಪು ಹಾಗೂ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.

ಈ ಮಿಶ್ರಣವನ್ನು 30 ನಿಮಿಷ ಹಾಗೆ ಇಟ್ಟಿರಬೇಕು. ನಂತರ ಕಡಲೆಹಿಟ್ಟು ಹಾಗೂ ಈರುಳ್ಳಿ ಸೇರಿಸಿ ಮಿಶ್ರಣ ಮಾಡಿ. ಎಣ್ಣೆ ಬಿಸಿ ಮಾಡಿ ಎಣ್ಣೆಯಲ್ಲಿ ಮೀನನ್ನು ಕರಿದರೆ ಮೀನಿನ ಕಬಾಬ್ ಸವಿಯಲು ಸಿದ್ಧವಾಗುತ್ತದೆ.
