ಮೈಸೂರು: ಈ ಬಾರಿಯ ಮೈಸೂರು ದಸರಾದ (Mysuru Dasara) ಸಾಂಸ್ಕೃತಿಕ ಕಾರ್ಯಕ್ರಮ ಯುವ ದಸರಾ ಉದ್ಘಾಟಕರಾಗಿ ನಟ ಪ್ರಭುದೇವಗೆ (Prabhu Deva) ಆಹ್ವಾನ ನೀಡಲಾಗಿದೆ.
ನಟ ಪ್ರಭುದೇವ ಅವರಿಗೆ ಮೈಸೂರು ಜಿಲ್ಲಾಡಳಿತ ಅಧಿಕೃತ ಆಹ್ವಾನ ಕೊಟ್ಟಿದೆ. ಪೇಟಾ ತೊಡಸಿ, ಶಾಲು-ಹೂವಿನ ಹಾರ ಹಾಕಿ ನಟನಿಗೆ ಗೌರವಪೂರ್ವಕವಾಗಿ ಆಹ್ವಾನ ನೀಡಲಾಗಿದೆ. ಇದನ್ನೂ ಓದಿ: ʻಅಭಿಮನ್ಯುʼ ದಸರೆಯಲ್ಲಿ ಪಾಲ್ಗೊಳ್ಳಲು ಸರ್ಕಾರದಿಂದ ಗ್ರೀನ್ ಸಿಗ್ನಲ್
ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯುವ ದಸರಾ ಒಂದು ಪ್ರಮುಖ ಆಕರ್ಷಣೆ. ಈ ಸಮಾರಂಭದಲ್ಲಿ ಸಿನಿತಾರೆಯರು, ಖ್ಯಾತ ಗಾಯಕರು ಪಾಲ್ಗೊಂಡು ಯುವಜನತೆಗೆ ಮನರಂಜನೆಯ ರಸದೌತಣ ಉಣಬಡಿಸುತ್ತಾರೆ.
ವಿವಿಧ ಕಲಾತಂಡಗಳು ಇಲ್ಲಿ ನೃತ್ಯ ಪ್ರದರ್ಶನ ಮಾಡುತ್ತವೆ. ಖ್ಯಾತ ಗಾಯಕರು ತಮ್ಮ ಸುಮಧುರ ಗಾಯನದಿಂದ ಯುವಜನರನ್ನು ರಂಜಿಸುತ್ತಾರೆ.
