ಬೆಂಗಳೂರು: ನಗರದ ಪ್ರಮುಖ ಫ್ಲೈಓವರ್ಗಳಲ್ಲಿ ಕೆಲ ವರ್ಗದ ವಾಹನಗಳ ಸಂಚಾರಕ್ಕೆ ಇಂದಿನಿಂದ ನಿರ್ಬಂಧ ಹೇರಲಾಗಿದೆ. ರಸ್ತೆ ಸುರಕ್ಷತೆ ಹಾಗೂ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ಬಂದಿದೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ಹಲವು ಪ್ರಮುಖ ಫ್ಲೈಓವರ್ಗಳಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ಭಾರೀ ಸರಕು ವಾಹನ, ದ್ವಿಚಕ್ರವಾಹನ ಸೇರಿದಂತೆ ನಿರ್ದಿಷ್ಟ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.

ಯಾವ ಫ್ಲೈಓವರ್ನಲ್ಲಿ ಯಾವ ವಾಹನಗಳಿಗೆ ನಿರ್ಬಂಧ?
* ಪೀಣ್ಯ ಎಲಿವೇಟೆಡ್ ಕಾರಿಡಾರ್: ಆಟೋ ರಿಕ್ಷಾ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ನಿರ್ಬಂಧ.
* ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಕಾರಿಡಾರ್: ಮಧ್ಯಮ ಹಾಗೂ ಭಾರಿ ಸರಕು ವಾಹನಗಳು ಮತ್ತು ಆಟೋ ರಿಕ್ಷಾಗಳಿಗೆ ನಿರ್ಬಂಧ.
* ಡಬಲ್ ಡೆಕ್ಕರ್ ಫ್ಲೈಓವರ್: ಭಾರಿ ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ.
* ಏರ್ಪೋರ್ಟ್ ರಸ್ತೆ ಫ್ಲೈಓವರ್: ಬೈಕ್, ಆಟೋ ಹಾಗೂ ಗೂಡ್ಸ್ ವಾಹನಗಳಿಗೆ ನಿರ್ಬಂಧ.
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ನಲ್ಲಿ ಸೆಪ್ಟೆಂಬರ್ 11 ರಿಂದ ನಿರ್ದಿಷ್ಟ ವಾಹನಗಳ ಸಂಚಾರ ನಿಷೇಧ ಜಾರಿಗೆ ಬರಲಿದೆ. ಈ ಮೂಲಕ ನಗರದ ಒಟ್ಟು 5 ಪ್ರಮುಖ ಫ್ಲೈಓವರ್ಗಳಲ್ಲಿ 24 ಗಂಟೆಯೂ ಕೆಲ ವರ್ಗದ ವಾಹನಗಳ ಸಂಚಾರಕ್ಕೆ ನಿರ್ಬಂಧ ಇರಲಿದೆ.
ವಾಹನ ನಿರ್ಬಂಧಕ್ಕೆ ಕಾರಣಗಳೇನು?
* ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವುದು.
* ಫ್ಲೈಓವರ್ಗಳ ರಸ್ತೆ ವಿನ್ಯಾಸ ಹಾಗೂ ಅಗಲಕ್ಕೆ ಅನುಗುಣವಾಗಿ ಸಂಚಾರ ನಿರ್ವಹಣೆ.
* ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪರಿಣಾಮದ ತೀವ್ರತೆಯನ್ನು ಕಡಿಮೆ ಮಾಡುವುದು.
* ವಾಹನಗಳ ದುರಸ್ತಿಯಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸುವುದು.
* ಫ್ಲೈಓವರ್ಗಳ ಎಂಟ್ರಿ ಹಾಗೂ ಎಕ್ಸಿಟ್ನಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಕಡಿಮೆ ಮಾಡುವುದು.
* ತುರ್ತು ಸಂದರ್ಭಗಳಲ್ಲಿ ಸಂಚಾರ ನಿರ್ವಹಣೆಯನ್ನು ಸುಲಭಗೊಳಿಸುವುದು.
* ಪಾದಚಾರಿಗಳು ಹಾಗೂ ಬೈಕ್ ಸವಾರರ ಸುರಕ್ಷತೆಯನ್ನು ಹೆಚ್ಚಿಸುವುದು.
* ಸಮಗ್ರ ರಸ್ತೆ ಸುರಕ್ಷತಾ ದೃಷ್ಟಿಕೋನದೊಂದಿಗೆ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವುದು.
ಹೊಸ ನಿಯಮದಿಂದ ಫ್ಲೈಓವರ್ಗಳ ಮೇಲೆ ವಾಹನಗಳ ಸಂಚಾರವನ್ನ ಹೆಚ್ಚು ಸುರಕ್ಷಿತ ಹಾಗೂ ಸುಗಮಗೊಳಿಸುವ ಉದ್ದೇಶ ಹೊಂದಲಾಗಿದೆ.
