ಸಿನೈ: ಈಜಿಪ್ಟ್‌ನ (Egypt) ಪೂರ್ವ ಸಿನೈ ಪರ್ಯಾಯ ದ್ವೀಪದಲ್ಲಿ (Sinai Peninsula) ಬುಧವಾರ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 16 ಮಂದಿ ಮೃತಪಟ್ಟಿದ್ದು, 28 ಜನರು ಗಾಯಗೊಂಡಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ದಕ್ಷಿಣ ಸಿನೈನ ಪೂರ್ವ ಕರಾವಳಿಯಲ್ಲಿರುವ ಜನಪ್ರಿಯ ಪ್ರವಾಸಿ ತಾಣಗಳಾದ ದಹಾಬ್ ಮತ್ತು ನುವೈಬಾ ಪಟ್ಟಣಗಳ ನಡುವಿನ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಸುಮಾರು 20 ಅಂಬುಲೆನ್ಸ್ಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿವೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲೇಜ್ ವಿದ್ಯಾರ್ಥಿಗೆ ಹಲ್ಲೆ, ಕಿಡ್ನ್ಯಾಪ್ – ದುನಿಯ್ ವಿಜಯ್ ಪುತ್ರನ ವಿರುದ್ಧ FIR
ಜೋರ್ಡಾನ್‌ನ ಅಧಿಕೃತ ವಾಹಿನಿಯ ಪ್ರಕಾರ, ದಹಾಬ್-ನುವೈಬಾ ರಸ್ತೆಯಲ್ಲಿ ಪ್ರಯಾಣಿಕರ ಬಸ್‌ವೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಬಸ್‌ನಲ್ಲಿ ಒಟ್ಟು 43 ಮಂದಿ ಪ್ರಯಾಣಿಸುತ್ತಿದ್ದರು. ಅವರಲ್ಲಿ 22 ಮಂದಿ ಜೋರ್ಡಾನ್ ಪ್ರಜೆಗಳು ಎಂದು ವರದಿಯಾಗಿದೆ. ಅಪಘಾತದಲ್ಲಿ ಮೃತಪಟ್ಟವರಲ್ಲಿ 10 ಮಂದಿ ಜೋರ್ಡಾನ್ ನಾಗರಿಕರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಗೆ ಹೋಗುವುದರೊಳಗೆ ಕಾಂಗ್ರೆಸ್ ಭ್ರಷ್ಟರ ಬಂಡವಾಳ ಬಯಲು ಮಾಡುತ್ತೇವೆ: ಶ್ರೀರಾಮುಲು
ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಬಸ್ ಚಾಲಕನ ನಿಯಂತ್ರಣ ತಪ್ಪಿತಾ ಅಥವಾ ರಸ್ತೆ ಪರಿಸ್ಥಿತಿ ಕಾರಣವೇ ಅಥವಾ ಮತ್ತೇನಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಗಾಯಗೊಂಡ 28 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಮೂವರು ಹೊಸ ಟ್ರಸ್ಟಿಗಳ ನೇಮಕ
