ಲೇಹ್: ಕೆಲವೇ ಗಂಟೆಗಳ ಅಂತರದಲ್ಲಿ ಲಡಾಖ್‌ನ (Ladakh) ಲೇಹ್‌ನಲ್ಲಿ ಎರಡು ಬಾರಿ ಭೂಕಂಪನ ಸಂಭವಿಸಿದೆ.
ರಾಷ್ಟ್ರೀಯ ಭೂಕಂಪನ (Earthquake) ಕೇಂದ್ರದ ಪ್ರಕಾರ, ಬೆಳಿಗ್ಗೆ 6:05ರ ಸುಮಾರಿಗೆ 10 ಕಿ.ಮೀ ಆಳದಲ್ಲಿ 5.5 ತೀವ್ರತೆಯ ಮೊದಲ ಭೂಕಂಪ ಸಂಭವಿಸಿತ್ತು. ಬಳಿಕ ಬೆಳಿಗ್ಗೆ 9:54ರ ಸುಮಾರಿಗೆ 4.3 ತೀವ್ರತೆಯ ಎರಡನೇ ಭೂಕಂಪ ಸಂಭವಿಸಿದೆ. ಈವರೆಗೆ ಯಾವುದೇ ರೀತಿಯ ಹಾನಿ ಅಥವಾ ಸಾವುನೋವುಗಳು ವರದಿಯಾಗಿಲ್ಲ. ಇದನ್ನೂ ಓದಿ: ಹಲವು ಜಿಲ್ಲೆಗಳಲ್ಲಿ ನೀರಸ ಪ್ರತಿಕ್ರಿಯೆ – ಎಂದಿನಂತೆ ಜನಜೀವನ, ಕರ್ನಾಟಕ ಬಂದ್‌ಗೆ ಸಿಗದ ಜನ ಬೆಂʼಬಲʼ
ಸತತ ಭೂಕಂಪಗಳಿಂದಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಈ ರೀತಿಯ ಭೂಕಂಪಗಳು ಲಾಡಖ್‌ನಲ್ಲಿ ಆಗಾಗ್ಗೆ ಸಂಭವಿಸುತ್ತಿರುತ್ತವೆ.

