ತಮಿಳುನಾಡು ಸಿಎಂ ವಿಜಯ್ (CM Vijay) ಮಗ ಜೇಸನ್ ಸಂಜಯ್ (Jason Sanjay) ಸದ್ಯ ಸಿನಿಮಾ ಇಂಡಸ್ಟ್ರಿಗೆ (Kollywood) ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅಪ್ಪನಂತೆ ನಟನಾಗುವ ಬದಲು, ನಿರ್ದೇಶಕನಾಗಿ ತನ್ನ ಅದೃಷ್ಟ ಪರೀಕ್ಷಿಸಲು ಮುಂದಾಗಿರುವ ಜೇಸನ್ ತನ್ನ ಸಿನಿಮಾ ಕನಸಿಗೆ ತಂದೆ ನೀಡಿದ ಬೆಂಬಲವನ್ನು ನೆನಪಿಸಿಕೊಂಡಿದ್ದಾರೆ.
ಸಂದೀಪ್ ಕಿಶನ್ ಅಭಿನಯದ ‘ಸಿಗ್ಮಾ’ ಚಿತ್ರದ ಮೂಲಕ, ತಮ್ಮ 25ನೇ ವಯಸ್ಸಿಗೆ ಜೇಸನ್ ಸಂಜಯ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ತೆಲುಗು ನಿರೂಪಕಿ ಸುಮಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂದರ್ಶನದಲ್ಲಿ ತಮ್ಮ ಸಿನಿಮಾ ಜರ್ನಿ ಬಗ್ಗೆ ಅವರು ಮಾತನಾಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ತಂದೆಯ ಜೊತೆ ಸಿನಿಮಾ ಸೆಟ್‌ಗಳಿಗೆ ಹೋಗುತ್ತಿದ್ದರಿಂದ ಸಿನಿಮಾ ವಾತಾವರಣ ತಮಗೆ ಹೊಸದಲ್ಲ ಎಂದು ಜೇಸನ್ ಹೇಳಿದ್ದಾರೆ. ಸ್ನೇಹಿತರು ಸಿನಿಮಾವನ್ನು ಕೇವಲ ಮನರಂಜನೆಯಾಗಿ ನೋಡುತ್ತಿದ್ದರೆ, ತಾವು ಚಿಕ್ಕ ವಯಸ್ಸಿನಿಂದಲೇ ಸಿನಿಮಾ ನಿರ್ಮಾಣದ ಹಿಂದಿನ ಕೆಲಸಗಳನ್ನು ಹತ್ತಿರದಿಂದ ನೋಡುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ, ಸಿನಿಮಾ ಬಗ್ಗೆ ಕೋರ್ಸ್ ಮಾಡಲು ವಿದೇಶಕ್ಕೆ ಹೋಗಬೇಕು ಎಂದು ತಂದೆಯ ಬಳಿ ಹೇಳಿದಾಗ ವಿಜಯ್ ಯಾವುದೇ ಹಿಂಜರಿಕೆ ತೋರಲಿಲ್ಲವಂತೆ. ಬದಲಿಗೆ, ತಮ್ಮ ನಿರ್ಧಾರಕ್ಕೆ ಮೊದಲು ಗ್ರೀನ್ ಸಿಗ್ನಲ್ ಕೊಟ್ಟವರೇ ತಂದೆ ಎಂದು ಜೇಸನ್ ಹೇಳಿದ್ದಾರೆ. ಇದನ್ನೂ ಓದಿ: ಶಿವಗಂಗೆ ಬೆಟ್ಟದಲ್ಲಿ ಟೆಕ್ಕಿ ನಾಪತ್ತೆ – ಲ್ಯಾಪ್‌ಟಾಪ್‌ನಲ್ಲಿ ಶಾಂತಲಾ ಡ್ರಾಪ್ ಪಾಯಿಂಟ್ ಸರ್ಚ್!
ನೀನು ಹೋಗಿ ಕೋರ್ಸ್ ಮಾಡು. ಆಗ ನಿನಗೆ ನಿಜವಾಗಿಯೂ ಏನು ಇಷ್ಟ, ಈ ವೃತ್ತಿ ನಿನಗೆ ಸೂಟ್ ಆಗುತ್ತಾ ಎಂಬುದು ಗೊತ್ತಾಗುತ್ತದೆ ಎಂದು ವಿಜಯ್ ಸಲಹೆ ನೀಡಿದ್ದರು ಎಂದು ಜೇಸನ್ ತಿಳಿಸಿದ್ದಾರೆ.
ತಮ್ಮ ತಂದೆ ಸಿನಿಮಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಇರುವುದರಿಂದ, ಚಲನಚಿತ್ರ ನಿರ್ಮಾಣವನ್ನು ವೃತ್ತಿಯಾಗಿ ಆಯ್ಕೆ ಮಾಡುವುದರ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು ಎಂದು ಜೇಸನ್ ಹೇಳಿದ್ದಾರೆ.
ಅಮ್ಮ ಸಂಗೀತಾ ಬಗ್ಗೆ ಜೇಸನ್ ಹೇಳಿದ್ದೇನು?
ತಾಯಿ ಸಂಗೀತಾ ಬಗ್ಗೆಯೂ ಜೇಸನ್ ಮಾತನಾಡಿ, ನಮ್ಮಮ್ಮ ಈಗಲೂ ತಮ್ಮನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ. ಕೆಲಸ ಶುರು ಮಾಡಿದ ಬಳಿಕ ಸಮಯ ಕಡಿಮೆಯಾಗಿದ್ದರೂ, ನಿರಂತರವಾಗಿ ತಮ್ಮ ಬಗ್ಗೆ ವಿಚಾರಿಸುತ್ತಾರೆ ಎಂದು ಹೇಳಿದ್ದಾರೆ.
ಸಂಗೀತಾ ಯಾವಾಗಲೂ ತಮ್ಮ ದೊಡ್ಡ ಚಿಯರ್‌ಲೀಡರ್ ಆಗಿದ್ದು, ತಮ್ಮನ್ನು ಪ್ರೋತ್ಸಾಹಿಸುತ್ತಾರೆ. ತಮ್ಮ ಸಿನಿಮಾ ಬಿಡುಗಡೆಯಾದ ಬಳಿಕ ತಾಯಿ ಚಿತ್ರವನ್ನು ನೋಡಿ ನೀಡುವ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿಯೂ ಜೇಸನ್ ಹೇಳಿದ್ದಾರೆ. ತಮ್ಮ ತಾಯಿ ಅಭಿಪ್ರಾಯವನ್ನು ಮುಚ್ಚಿಡದೆ ನೇರವಾಗಿ ಹೇಳುತ್ತಾರೆ. ಹೀಗಾಗಿ ಅವರ ಪ್ರತಿಕ್ರಿಯೆ ತಮಗೆ ತುಂಬಾ ಮುಖ್ಯ ಎಂದು ಜೇಸನ್ ಹೇಳಿದ್ದಾರೆ. ಇದನ್ನೂ ಓದಿ: ಕಿಯಾರಾ ‘ಟಾಕ್ಸಿಕ್’ ಟ್ರೋಲಿಂಗ್ – ಟ್ರೈಲರ್ ನೋಡಿ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಏನಂದ್ರು?
ವಿಜಯ್-ಸಂಗೀತಾ ವಿಚ್ಛೇದನ ಅರ್ಜಿ ವಾಪಸ್
ವಿಜಯ್ ಮತ್ತು ಸಂಗೀತಾ ಅವರ ವೈಯಕ್ತಿಕ ಜೀವನವೂ ಇತ್ತೀಚೆಗೆ ಸುದ್ದಿಯಾಗಿತ್ತು. ಸಂಗೀತಾ ಅವರು ವಿಜಯ್ ವಿರುದ್ಧ ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಶುಕ್ರವಾರ ಹಿಂತೆಗೆದುಕೊಂಡಿದ್ದಾರೆ. ಅರ್ಜಿ ಹಿಂಪಡೆದ ಬಳಿಕ ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯಗೊಳಿಸಿದೆ.

