ಬಾಲಿವುಡ್‌ನ (Bollywood) ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸಿನಿಮಾ ಅಥವಾ ವೈಯಕ್ತಿಕ ಜೀವನದಿಂದಲ್ಲ, ತಮ್ಮ ಸಂಭಾವನೆ ವಿಚಾರದಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ.
ಹಲವು ವರ್ಷಗಳಿಂದ ಒಂದು ಸಿನಿಮಾಗೆ 120 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಸಲ್ಮಾನ್, ಈಗ ಹೊಸ ಸಿನಿಮಾಗಾಗಿ 70 ಕೋಟಿ ರೂಪಾಯಿಗೆ ಒಪ್ಪಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ನಿರ್ದೇಶಕ ವಂಶಿ ಪೈಡಿಪಲ್ಲಿ ನಿರ್ದೇಶನದ SVC63 ಸಿನಿಮಾಗಾಗಿ ಸಲ್ಮಾನ್ ಖಾನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದರಿಂದ ಅವರ ಸಾಮಾನ್ಯ ಸಂಭಾವನೆಯಿಂದ ಸುಮಾರು 50 ಕೋಟಿ ರೂಪಾಯಿ ಕಡಿಮೆ ಪಡೆದಂತಾಗಿದೆ ಎನ್ನಲಾಗುತ್ತಿದೆ.
ಈ ನಿರ್ಧಾರದ ಹಿಂದೆ ಹಣಕ್ಕಿಂತ ಸ್ನೇಹಕ್ಕೆ ಮೌಲ್ಯ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ನಿರ್ಮಾಪಕ ರಫಿ ಕಾಜಿ ಅವರೊಂದಿಗೆ ಸಲ್ಮಾನ್‌ಗೆ ಹಲವು ವರ್ಷಗಳ ಸ್ನೇಹವಿದೆ. ಇದೇ ಕಾರಣಕ್ಕೆ ಅವರು ಸಂಭಾವನೆಯಲ್ಲಿ ರಿಯಾಯಿತಿ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಬಾಲಿವುಡ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: Karnataka Rain Live Updates | ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಎಲ್ಲಿ ಎಷ್ಟು ಮಳೆಯಾಗಿದೆ?
ಸಲ್ಮಾನ್ ಖಾನ್ ಕಳೆದ ಹಲವು ವರ್ಷಗಳಿಂದ ತಮ್ಮ ಸಿನಿಮಾಗಳಲ್ಲಿ ಲಾಭದ ಪಾಲನ್ನೂ ಪಡೆಯುವ ಮಾದರಿಯನ್ನು ಅನುಸರಿಸುತ್ತಿದ್ದಾರೆ. ‘ದಬಾಂಗ್’ ನಂತರ ಅವರ ಬಹುತೇಕ ಸಿನಿಮಾಗಳು ಕುಟುಂಬದ ನಿರ್ಮಾಣ ಸಂಸ್ಥೆ Salman Khan Films ಅಥವಾ ಅವರ ಕುಟುಂಬದ ಸದಸ್ಯರ ನಿರ್ಮಾಣದಲ್ಲಿ ಮೂಡಿಬಂದಿವೆ.
ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸಲ್ಮಾನ್ ಕೂಡ ಒಬ್ಬರಾಗಿದ್ದರು. ಆದರೆ, ಈಗ ಏಕಾಏಕಿ ಇಷ್ಟು ಕಡಿಮೆ ಸಂಭಾವನೆಗೆ ಸಿನಿಮಾ ಒಪ್ಪಿಕೊಂಡಿರುವುದು, ಬಾಲಿವುಡ್‌ನಲ್ಲಿ ಅವರಿಗೆ ಡಿಮ್ಯಾಂಡ್ ಕಡಿಮೆಯಾಯಿತೇ ಎಂಬ ಚರ್ಚೆಗೆ ಕಾರಣವಾಗಿದೆ.ಇದನ್ನೂ ಓದಿ: ಕೊಯ್ನಾದಿಂದ 34 ಸಾವಿರ ಕ್ಯೂಸೆಕ್ ನೀರು ಬಿಡುಗಡೆ – ಕೃಷ್ಣಾ ನದಿ ತೀರದಲ್ಲಿ ಹೆಚ್ಚಿದ ಪ್ರವಾಹ ಆತಂಕ
