ರಾಜ್ಯದಲ್ಲಿ ಹವಾಮಾನದಲ್ಲಿ ಏರಿಳಿತ ಮುಂದುವರಿದಿದ್ದು, ನವೆಂಬರ್ 11ರಂದು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಮಳೆಯಾಗುವ ಮುನ್ಸೂಚನೆಯಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ರಾಜ್ಯದ ಯಾವುದೇ ಭಾಗಕ್ಕೆ ಸದ್ಯ ಯೆಲ್ಲೋ ಅಲರ್ಟ್ ಘೋಷಿಸಿಲ್ಲ.
ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-19
ಮಂಗಳೂರು: 33-24
ಶಿವಮೊಗ್ಗ: 30-20
ಬೆಳಗಾವಿ: 30-17
ಮೈಸೂರು: 30-19
ಮಂಡ್ಯ: 30-20
ಮಡಿಕೇರಿ: 26-18
ರಾಮನಗರ: 30-19
ಹಾಸನ: 29-19
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 29-18
ಕೋಲಾರ: 29-18
ತುಮಕೂರು: 30-19
ಉಡುಪಿ: 31-24
ಕಾರವಾರ: 33-23
ಚಿಕ್ಕಮಗಳೂರು: 28-18
ದಾವಣಗೆರೆ: 31-20
ಹುಬ್ಬಳ್ಳಿ: 31-19
ಚಿತ್ರದುರ್ಗ: 31-19
ಹಾವೇರಿ: 31-19
ಬಳ್ಳಾರಿ: 32-21
ಗದಗ: 32-19
ಕೊಪ್ಪಳ: 32-20
ರಾಯಚೂರು: 32-20
ಯಾದಗಿರಿ: 33-19
ವಿಜಯಪುರ: 32-17
ಕಲಬುರಗಿ: 34-19
ಬಾಗಲಕೋಟೆ: 32-18






