ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಹಗರಣ (KPSC Recruitment Scam) ಸಂಬಂಧ ಸಿಐಡಿ (CID) ತನಿಖೆ ಚುರುಕುಗೊಳಿಸಿದೆ. ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿಗೆ ಸಿಐಡಿ ನೋಟಿಸ್ ಜಾರಿ ಮಾಡಿದ್ದು, ನೇಮಕಾತಿಯ ದಾಖಲೆಗಳನ್ನ ಒದಗಿಸುವಂತೆ ನೋಟಿಸ್ ನೀಡಿದೆ.
ಪಶು ವೈದ್ಯಾಧಿಕಾರಿಯ ನೇಮಕಾತಿಯ ಅಧಿಸೂಚನೆ, ಪ್ರಶ್ನೆ ಪತ್ರಿಕೆ, ಒಎಂಆರ್ ಶೀಟ್, ವೈವಾ ಡೀಟೈಲ್ಸ್ ಹೀಗೆ ಎಲ್ಲಾ ದಾಖಲಾತಿಗಳನ್ನ ನೀಡಿ 80 ಲಕ್ಷ ನೀಡಿ ಪಶುವೈದ್ಯಾಧಿಕಾರಿ ಪೋಸ್ಟ್ಗಳನ್ನ ಬ್ರೋಕರ್‌ಗಳಿಂದ ಡೀಲ್ ಮಾಡಿಸಿದ ಆಡಿಯೋ ವೈರಲ್ ಬೆನ್ನಲ್ಲೇ ಸರ್ಕಾರ ತನಿಖೆಯನ್ನ ಸಿಐಡಿಗೆ ವಹಿಸಿತ್ತು. ಇದನ್ನೂ ಓದಿ: ಸಂಪುಟ ವಿಸ್ತರಣೆ ನಂತರ ಅಸಮಾಧಾನಿತರ ದೊಡ್ಡ ತಂಡ ಬಿಜೆಪಿಗೆ ಬರಲಿದೆ: ಮುರಗೇಶ್ ನಿರಾಣಿ
ಸಿಐಡಿ ಎಸ್‌ಪಿ ರಾಘವೇಂದ್ರ ಹೆಗಡೆ ನೇತೃತ್ವದ ಟೀಂ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಭ್ರಷ್ಟಾಚಾರದ ದಂಧೆಕೋರರಿಗೆ ನಡುಕ ಶುರುವಾಗಿದೆ. ಇದನ್ನೂ ಓದಿ: ಶಿವಮೊಗ್ಗ ದರೋಡೆ ಪ್ರಕರಣ; 37 ವರ್ಷಗಳ ಬಳಿಕ ಆರೋಪಿ ಅರೆಸ್ಟ್
ಈ ನಡುವೆ ಕರ್ನಾಟಕ ಲೋಕಸೇವಾ ಆಯೋಗ ಅಕ್ರಮದ ವಿರುದ್ಧ ಎಬಿವಿಪಿ ಮತ್ತೊಮ್ಮೆ ತೀವ್ರ ಹೋರಾಟದ ಎಚ್ಚರಿಕೆ ನೀಡಿದೆ. ಕೆಪಿಎಸ್‌ಸಿ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿರುವ ಎಬಿವಿಪಿ, ಆಗಸ್ಟ್ 4ರವರೆಗೆ ಸರ್ಕಾರಕ್ಕೆ ಗಡುವು ನೀಡಿದೆ. ಬೇಡಿಕೆ ಈಡೇರದಿದ್ದರೆ ಆಗಸ್ಟ್ 5ರಂದು ರಾಜ್ಯಾದ್ಯಂತ ಪ್ರತಿಭಟನೆ ಹಾಗೂ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಕೇಂದ್ರದಿಂದ ರಾಜ್ಯಗಳಿಗೆ 1.09 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಹಂಚಿಕೆ – ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?
