ಮಳೆಯಾಗದಿದ್ರೆ CWRC ಆದೇಶ ರಾಜ್ಯದ ರೈತರು ಪಾಲಿನ ಮರಣ ಶಾಸನ ಆಗಲಿದೆ: ಹೆಚ್‌ಡಿಕೆ ಕಳವಳ
ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮಳೆ ಆಗದಿದ್ದರೆ CWRC ಕೊಟ್ಟಿರುವ ಆದೇಶ ನಮ್ಮ ನಾಡಿನ ರೈತರು, ಜನರ ಪಾಲಿಗೆ ಮರಣ ಶಾಸನ ಆಗಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಬರಗಾಲದಿಂದ ಬಿತ್ತನೆ ಮಾಡಿದ್ದ ಬೆಳೆಗಳು ನಾಶವಾಗಿವೆ. ಈ ತೀರ್ಪು ಅವೈಜ್ಞಾನಿಕ ಹಾಗೂ ನಮ್ಮ ನಾಡಿನ ಜನತೆಗೆ ಮಾರಕವಾದ ತೀರ್ಮಾನವಾಗಿದೆ. ಇದರ ವಿರುದ್ಧ ನಾವು ಒಗ್ಗಟ್ಟಿನಿಂದಲೇ ಹೋರಾಟ ಮಾಡಬೇಕಾಗುತ್ತದೆ. ಈಗಾಗಲೇ ರೈತ ಮುಖಂಡರು, ಕನ್ನಡಪರ ಸಂಘಟನೆಗಳು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಅವರ ಪ್ರತಿಭಟನೆ ನಮಗೆ ಆಗಿರುವ ವಿರುದ್ಧ, ತಮಿಳುನಾಡಿನವರು ನಮಗೆ ನೀರನ್ನ ಕೊಡಲೇಬೇಕು ಎಂದು ನ್ಯಾಯಾಧಿಕರಣದಿಂದ ಒತ್ತಡ ಹಾಕಿಸಿದ್ದಾರೆ. ನಾವು ದನಿ ಎತ್ತದೇ ಇದ್ದರೆ ನಮ್ಮದೇ ತಪ್ಪಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾವೇರಿ ಬರಿದಾಗಿಸುವಲ್ಲಿ ಸರ್ಕಾರ ನೇರ ಹೊಣೆ: ಆರ್. ಅಶೋಕ್
ಕಾವೇರಿ ಬರಿದಾಗಿಸುವಲ್ಲಿ ಸರ್ಕಾರ ನೇರ ಹೊಣೆ
ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ
3500 ಕ್ಯೂಸೆಕ್ ನೀರು ಬಿಡುಗಡೆಗೆ CWRC ಸೂಚನೆ ಹಿನ್ನೆಲೆ ಆಕ್ರೋಶ
ಸರ್ಕಾರ ಸರಿಯಾಗಿ ವಾದಿಸುವಲ್ಲಿ ವಿಫಲ ಆಗಿದೆ ಅಂತ ಕಿಡಿ
ನೀರು ಬಿಡೋಕಾಗಲ್ಲ ಎಂದು ಸರ್ವಪಕ್ಷ ಸಭೆ ಮಾಡಬೇಕಿತ್ತು
ಅಧಿವೇಶನ ಕರೆದು ನೀರು ಬಿಡಲ್ಲ ಎಂದು ರೆಸ್ಯುಲೆಷನ್ ಮಾಡಬೇಕಿತ್ತು
ಹೈಕಮಾಂಡ್ ಮರ್ಜಿಯಲ್ಲಿ ನೀರು ಬಿಡಲು ಮುಂದಾಗಿದ್ದಾರೆ
ವಿಧಾನಸೌಧಕ್ಕೆ ಕರೆದು ಸಭೆ ಮಾಡಲು 10ಕೋಟಿ ಖರ್ಚು
ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕರೆದು ಸಭೆ
ಸಿಎಂ ಬೊಕ್ಕೆ ಕೊಡುವ ಚಿತ್ರ ಬಿಟ್ಟರೆ ಬೇರೇನೂ ಉಪಯೋಗ ಇಲ್ಲ
ಸಭೆ ಬಳಿಕ ಜೋಸೆಫ್ ವಿಜಯ್ ಕಾವೇರಿ ನೀರು ಬೇಕೆಂದು ಹೇಳಿ ಹೋಗುತ್ತಾರೆ
ಹಾರಂಗಿ ಜಲಾಶಯದ ನೀರಿನ ಮಟ್ಟ
ಗರಿಷ್ಠ ಮಟ್ಟ – 2,859 ಅಡಿ
ಇಂದಿನ ಮಟ್ಟ – 2,857.88 ಅಡಿ
ಇಂದಿನ ಒಳಹರಿವು – 3,221 ಕ್ಯೂಸೆಕ್
ಇಂದಿನ ಹೊರಹರಿವು – ನದಿಗೆ 1,895 ಕ್ಯೂಸೆಕ್
ಒಟ್ಟು ಸಾಮರ್ಥ್ಯ – 8.5 ಟಿಎಂಸಿ
ಇಂದಿನ ಸಾಮರ್ಥ್ಯ – 8.1 ಟಿಎಂಸಿ
24 ಗಂಟೆಗಳಲ್ಲಿ 1.4 ಟಿಎಂಸಿ ನೀರು ಸಂಗ್ರಹ

ಆಲಮಟ್ಟಿ ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯ
ಆಲಮಟ್ಟಿ ಲಾಲ್‌ಬಹದ್ದೂರ್ ಶಾಸ್ತ್ರಿ ಜಲಾಶಯ
(24 ಗಂಟೆಯಲ್ಲಿ 1 ಟಿಎಂಸಿ ನೀರು ಸಂಗ್ರಹ )
ಗರಿಷ್ಠ ಮಟ್ಟ : 519.60 ಮೀಟರ್
ಇಂದಿನ ಮಟ್ಟ: 519.32 ಮೀಟರ್
ಗರಿಷ್ಠ ಮಟ್ಟ : 123.081 ಟಿಎಂಸಿ
ಇಂದಿನ ಮಟ್ಟ : 118.221 ಟಿಎಂಸಿ
ಒಳಹರಿವು: 68,525 ಕ್ಯೂಸೆಕ್
ಹೊರಹರಿವು: 64,613 ಕ್ಯೂಸೆಕ್

KRS ಡ್ಯಾಂ ನೀರಿನ ಮಟ್ಟ
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ : 91.94 ಅಡಿ
ಒಳಹರಿವು : 2,842 ಕ್ಯೂಸೆಕ್
ಹೊರಹರಿವು : 1,747 ಕ್ಯೂಸೆಕ್
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಂಗ್ರಹ : 17.126 ಟಿಎಂಸಿ

ದೊಡ್ಡಬಳ್ಳಾಪುರದಲ್ಲೂ ʻಕಾವೇರಿʼದ ಹೋರಾಟದ ಕಿಚ್ಚು
ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ CWRC ಆದೇಶ ಹಿನ್ನೆಲೆ ಆಕ್ರೋಶ
ಆದೇಶ ವಿರೋಧಿಸಿ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರಿಂದ ಪ್ರತಿಭಟನೆ
ದೊಡ್ಡಬಳ್ಳಾಪುರ ನಗರದ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ
ಯಾವುದೇ ಕಾರಣಕ್ಕೂ ನೀರು ಬಿಡದಂತೆ ಒತ್ತಾಯ
ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ ಜೋಕರ್ ಕಾರ್ಡ್ ಇದ್ದಂತೆ: ಪ್ರತಾಪ್ ಸಿಂಹ ಲೇವಡಿ
ʻರಕ್ತ ಕೊಟ್ಟೆವು ನೀರು ಕೊಡೆವುʼ – ರಸ್ತೆಯಲ್ಲೇ ಮಲಗಿ ರೈತರ ಪ್ರತಿಭಟನೆ
CWRC ಆದೇಶವನ್ನು ಕರ್ನಾಟಕ ಪಾಲಿಸಬೇಕು – ರಾಜ್ಯಸಭಾ ಕಾಂಗ್ರೆಸ್ ಸಂಸದ ಪ್ರವೀಣ್ ಚಕ್ರವರ್ತಿ
ಮೈಸೂರಿನಲ್ಲಿ ರೈತರ ದಿಢೀರ್ ರಸ್ತೆ ತಡೆ
ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿ ಮೈಸೂರಿನಲ್ಲಿ ರೈತರು ದಿಢೀರ್ ಪ್ರತಿಭಟನೆ ಆರಂಭಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ರೈತರು ರಸ್ತೆಯಲ್ಲಿ ಮಲಗಿ ರಸ್ತೆ ತಡೆ ನಡೆಸಿದ್ದಾರೆ.

ತಮಿಳುನಾಡು ಜಲ ವಿವಾದ – ಫ್ರೀಡಂ ಪಾರ್ಕ್ ನಲ್ಲಿ ಕರವೇ ಹೋರಾಟ.!
ಫ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ
ʻಕಾವೇರಿ ಉಳಿಸಿ, ಕರ್ನಾಟಕ ಉಳಿಸಿʼ ಅಭಿಯಾನದಡಿ ಹೋರಾಟ
ನಾರಾಯಣ ಗೌಡ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಹೋರಾಟ
ʻರಕ್ತ ಕೊಟ್ಟೇವು, ನೀರು ಕೊಡೆವುʼ; ಬೆಂಗಳೂರು – ಮೈಸೂರು ಹಳೇ ಹೆದ್ದಾರಿ ತಡೆದು ರೈತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ಹರಿಸಲು CWRC ಆದೇಶ ಹಿನ್ನೆಲೆ ಭುಗಿಲೆದ್ದ ರೈತರ ಆಕ್ರೋಶ
ರಾಮನಗರ ಐಜೂರು ವೃತ್ತದಲ್ಲಿ ರೈತಸಂಘದಿಂದ ಪ್ರತಿಭಟನೆ
ಬೆಂಗಳೂರು-ಮೈಸೂರು ಹಳೇ ಹೆದ್ದಾರಿ ತಡೆದು ಆಕ್ರೋಶ
ರೈತರ ರಸ್ತೆ ತಡೆಯಿಂದ ಕೆಲಕಾಲ ಟ್ರಾಫಿಕ್ ಜಾಮ್, ಕಾವೇರಿ ನಮ್ಮದು, ಯಾವುದೇ ಕಾರಣಕ್ಕೂ ನೀರು ಬಿಡದಂತೆ ಒತ್ತಾಯ
ʻರಕ್ತ ಕೊಟ್ಟೇವು, ನೀರು ಕೊಡೆವುʼ – ಘೋಷಣೆ ಕೂಗಿ ರೈತರ ಹೋರಾಟ
CWRC ವಾಸ್ತವ ಸ್ಥಿತಿ ಅರಿಯದೇ ನೀರು ಬಿಡಲು ಆದೇಶ ಮಾಡಿದೆ.
ರಾಜ್ಯದಲ್ಲೇ ಕುಡಿಯುವ ನೀರಿಗೆ ಅಭಾವ ಇದೆ, ರಾಜ್ಯದಲ್ಲಿ ರೈತರು ಬೆಳೆ ಬೆಳೆಯಬೇಡಿ ಎಂದು ನಮ್ಮ ಸಿಎಂ ಹೇಳಿದ್ದಾರೆ.
ಆದರೆ ತಮಿಳುನಾಡಿನ ಬೆಳೆಗೆ ನೀರು ಬಿಡ್ತಿರೋದು ಖಂಡನೀಯ. ಸರ್ಕಾರ ಕದ್ದುಮುಚ್ಚಿ ನೀರು ಬಿಟ್ರೆ ಬೃಹತ್ ಹೋರಾಟ.
ಆ.3 ರಂದು ತಮಿಳುನಾಡು ಸಿಎಂ ಹಾಗೂ ಡಿಕೆಶಿ ಸಭೆಗೆ ಅಡ್ಡಿಪಡಿಸುವ ಎಚ್ಚರಿಕೆ.
ಕೆಆರ್‌ಎಸ್ ನೀರಿನ ಮಟ್ಟ ಹೇಗಿದೆ?




ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕ ಬಂದ್ ಎಚ್ಚರಿಕೆ!
ನಮಗೆ ಕುಡಿಯೋಕೆ ನೀರಿಲ್ಲ – 3,500 ಕ್ಯೂಸೆಕ್ ನೀರು ಕೊಡಿ ಅಂದ್ರೆ ಹೇಗೆ?: ಪರಮೇಶ್ವರ್
ನಮಗೆ ಕುಡಿಯೋಕೆ ನೀರಿಲ್ಲ – 3,500 ಕ್ಯೂಸೆಕ್ ನೀರು ಕೊಡಿ ಅಂದ್ರೆ ಹೇಗೆ?
ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ
ನಮಗೇ ಕುಡಿಯಲು ನೀರಿಲ್ಲ, ಹೀಗಿರುವಾಗ 3,500 ಕ್ಯೂಸೆಕ್ ನೀರು ಕೊಡಿ ಅಂದ್ರೆ ಹೇಗೆ?
ಇದರ ಬಗ್ಗೆ ಚರ್ಚೆಗೆ ಸಿಎಂ ಸರ್ವ ಪಕ್ಷದ ಸಭೆ ಕರೆಯುತ್ತಾರೆ
ಸೋಮವಾರ ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಬರ್ತಾರೆ, ಅವರ ಜೊತೆಗೂ ಸಿಎಂ ಚರ್ಚೆ ಮಾಡಬಹುದು
ಇವತ್ತು ರಾಮಲಿಂಗಾರೆಡ್ಡಿ ಸಭೆ ಕರೆದಿದ್ದಾರೆ, ಮುಂದೇನು ಮಾಡಬೇಕು ಅಂತ ಚರ್ಚಿಸ್ತಾರೆ
ಸಹಜವಾಗಿ ರೈತರು ಪ್ರತಿಭಟನೆ ಮಾಡ್ತಾರೆ, ನಿನ್ನೆಯಿಂದ ಹೋರಾಟ ಮಾಡ್ತಿದ್ದಾರೆ
ಸರ್ಕಾರ ಅಂತಿನವಾಗಿ ಏನು ತೀರ್ಮಾನ ತಗೊಳ್ಳುತ್ತೋ ನೊಡೋಣ ಅಂತ ಹೇಳಿಕೆ

CWRC ಶಿಫಾರಸ್ಸು ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ: ರಾಮಲಿಂಗಾರೆಡ್ಡಿ
ತಮಿಳುನಾಡಿಗೆ ಕಾವೇರಿ ನೀರು ವಿವಾದ – ಜು.31 ರಂದು ಮಂಡ್ಯದಲ್ಲಿ ಬಿಜೆಪಿ ಬೃಹತ್ ಹೋರಾಟ: ವಿಜಯೇಂದ್ರ
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಮಂಡ್ಯದಲ್ಲಿ ಜು.31 ರಂದು ಬೃಹತ್ ಹೋರಾಟ ನಡೆಯಲಿದೆ. ಆ ಭಾಗದ ರೈತರು, ರೈತ ಸಂಘಟನೆಗಳು ಬೆಂಬಲ ಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮನವಿ ಮಾಡಿದರು.
ನಗರದ ಬೆಕ್ಕಿನಕಲ್ಮಠದಲ್ಲಿ ಗುರುಪೂರ್ಣಿಮೆಯ ಸಲುವಾಗಿ ಭೇಟಿ ನೀಡಿದ್ದರು. ಈ ವೇಳೆ ಕಾವೇರಿ ನೀರು ನಿರ್ವಾಹಣಾ ಸಮಿತಿ ತೀರ್ಪು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಆ ತೀರ್ಪು ಕಾವೇರಿ ಕೊಳ್ಳದ ರೈತರಿಗೆ ಬರೆ ಎಳೆದಂತೆ ಆಗಿದೆ. ಬರ ಪರಿಸ್ಥಿತಿ ಇದೆ, ಯಾರು ಕೂಡ ಬೆಳೆ ಬೆಳೆಯಬೇಡಿ ಎಂದು ಸಿಎಂ ಕೆಲವು ದಿನದ ಹಿಂದೆ ಕರೆ ಕೊಟ್ಟಿದ್ದರು ಎಂದು ಮಾಹಿತಿ ನೀಡಿದರು.
ರಾಜ್ಯದ ರೈತರಿಗೆ ಸಿಎಂ ಧೈರ್ಯ ತುಂಬಬೇಕಿತ್ತು. ಅವರು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಾರೆ. ಜೊತೆಗೆ ಕದ್ದುಮುಚ್ಚಿ ರಾತ್ರೋರಾತ್ರಿ ನೀರು ಬಿಡುವ ಕೆಲಸ ಆಗಿತ್ತು. ತಮಿಳುನಾಡಿನ ಮುಖ್ಯಮಂತ್ರಿಗಳನ್ನು ಖುಷಿ ಪಡಿಸಲು ರಾಜ್ಯದ ರೈತರಿಗೆ ಸಿಎಂ ಅನ್ಯಾಯ ಮಾಡಿದ್ದರು. ಯಾಕೇ ಇಂತಹ ಕಪಟ ನಾಟಕ ಮಾಡ್ತೀದ್ದೀರಿ ಎಂದು ಡಿ.ಕೆ ಶಿವಕುಮಾರ್ ಅವರ ವಿರುದ್ಧ ಅಸಮಾಧಾನ ಹೊಹಾಕಿದರು.
ಡ್ಯಾಂನಲ್ಲಿ 17.39 ಟಿಎಂಸಿ ನೀರು ಸಂಗ್ರಹವಿದೆ. ಅದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್. ಉಳಿದಂತ 12-13 ಟಿಎಂಸಿ ನೀರಲ್ಲಿ ತಮಿಳುನಾಡಿಗೆ ಬಿಟ್ಟರೇ ರಾಜ್ಯದ ರೈತರ ಗತಿಯೇನು? ಸಿಎಂ ಯಾಕೇ ಆ ಭಾಗದ ರೈತರ ಜೊತೆ ಚೆಲ್ಲಾಟ ಆಡ್ತಿದ್ದಾರೆ. ಸಮಿತಿ ಮುಂದೆ ಸರಿಯಾದ ರೀತಿ ವಾದ ಮಾಡಬೇಕು ಎಂದು ಆಗ್ರಹಿಸಿದರು.

KRS ಡ್ಯಾಂನಲ್ಲಿ ಬಳಕೆಗೆ ಇರೋದೇ 17 ಟಿಎಂಸಿ ನೀರು
ತಮಿಳುನಾಡಿಗೆ ಕಾವೇರಿ ನೀರು ಬಿಡುವೆಂತೆ CWRC ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. KRS ಜಲಾಶಯದಲ್ಲಿ ಬಳಕೆಗೆ ಇರೋದು ಕೇವಲ 17 ಟಿಎಂಸಿ ನೀರು. ಆದೇಶದಂತೆ ತಮಿಳುನಾಡಿಗೆ 15 ದಿನದಲ್ಲಿ 4.5 ಟಿಎಂಸಿ ನೀರು ಹರಿಸಬೇಕಿದೆ. ನಿತ್ಯ 3,500 ಕ್ಯೂಸೆಕ್ ನೀರು ಹರಿಸಲು ಆದೇಶಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ 83% ಮಳೆ ಕೊರತೆ ಉಂಟಾಗಿದೆ. ಮಳೆ ಬಾರದಿದ್ದರೇ ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ. ಇದರ ನಡುವೆ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿರುವುದು ಕರುನಾಡಿಗೆ ಮರಣ ಶಾಸನವಾಗಿದೆ.

CWRC ತೀರ್ಮಾನ ನಮಗೆ ಸಮಾಧಾನ ತಂದಿಲ್ಲ – ʻಪಬ್ಲಿಕ್ ಟಿವಿʼಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
CWRC ತೀರ್ಮಾನ ನಮಗೆ ಸಮಾಧಾನ ತಂದಿಲ್ಲ
ʻಪಬ್ಲಿಕ್ ಟಿವಿʼಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ
ಕಾವೇರಿ ನೀರು ನಿಯಂತ್ರಣ ಸಮಿತಿ ಅಂತಾ ಒಂದು ಇದೆ
ಎಷ್ಟು ನೀರು ಬಿಡಬೇಕು ಅಂತಾ ಅವರು ತೀರ್ಮಾನ ಮಾಡ್ತಾರೆ
15 ದಿನಗಳವರೆಗೆ ನಿತ್ಯ 3,500 ಕ್ಯೂಸೆಕ್ ನೀರು ಬಿಡೋದಕ್ಕೆ ಹೇಳಿದೆ
ನಮ್ಮಲ್ಲಿ ನೀರಿಲ್ಲ ಅಂತ ವಾದ ಮಾಡಿದ್ದೇವೆ, ಆದ್ರೂ ಬಿಡಿ ಅಂತಾ ಹೇಳಿದೆ
ಕಾವೇರಿ ನೀರು ನಿರ್ವಹಣಾ ಸಮಿತಿ ತೀರ್ಮಾನ ನಮಗೆ ಸಮಾಧಾನ ತಂದಿಲ್ಲ
ಡಿಕೆ ಶಿವಕುಮಾರ್ ಅವರು ಕೂಡ ಅಪೀಲ್ ಹೋಗಿ ಅಂತಾ ಹೇಳಿದ್ದಾರೆ
ಹಾಗಾಗಿ ನಾವು ಮೇಲ್ಮನವಿ ಹೋಗ್ತೇವೆ, ಈಗಿರುವ ನೀರಲ್ಲಿ ಡೆಡ್ ಸ್ಟೋರೆಜ್ ಲೆಕ್ಕ ತಗೊಳ್ಳೋಕೆ ಆಗಲ್ಲ
ಡೆಡ್ ಸ್ಟೋರೆಜ್ ಎಷ್ಟಿದೆ ಕುಡಿಯುವ ನೀರು ಎಷ್ಟು ಬೇಕಿದೆ ಅಂತಾ ನೋಡಬೇಕು
ಬೆಂಗಳೂರು, ಮಂಡ್ಯ, ರಾಮನಗರ, ಚನ್ನಪಟ್ಟಣ, ಎಲ್ಲಾ ಕಡೆಗು ಕುಡಿಯೋ ನೀರು ಬೇಕು
ಹಾಗಾಗಿ ತೀರ್ಮಾನ ಸಮಾಧಾನ ತಂದಿಲ್ಲ.

ತಮಿಳುನಾಡು ಸರ್ಕಾರದ ವಿರುದ್ಧ ಕನ್ನಡ ಸಂಘಟನೆಗಳು ನಿಗಿನಿಗಿ
ತಮಿಳುನಾಡು ಸರ್ಕಾರದ ವಿರುದ್ಧ ಕನ್ನಡ ಸಂಘಟನೆಗಳು ನಿಗಿನಿಗಿ
ಮೈಸೂರು ಬ್ಯಾಂಕ್ ಸರ್ಕಲ್ ಬಳಿ ವಾಟಾಳ್ ಪಕ್ಷ ಹಾಗೂ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ
ಮಧ್ಯಾಹ್ನ 12 ವರೆ ಘಂಟೆಗೆ ಪ್ರತಿಭಟನೆ
ಪ್ರತಿಭಟನೆಯಲ್ಲಿ ಭಾಗಿಯಾಗಲಿರುವ ಕನ್ನಡ ಹೋರಾಟಗಾರರು
ಕಾವೇರಿ ಜಲ ವಿವಾದದ ಚರ್ಚೆಗೆ ತಮಿಳುನಾಡು ಪಟ್ಟು; ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್ ಸಂಸದ
ಕಾವೇರಿ ಜಲ ವಿವಾದದ ಚರ್ಚೆಗೆ ತಮಿಳುನಾಡು ಪಟ್ಟು
ರಾಜ್ಯಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದ ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರವೀಣ್ ಚಕ್ರವರ್ತಿ
ಜಲಶಕ್ತಿ ಸಚಿವಾಲಯವು ದಾರಿ ತಪ್ಪಿಸುವ ಉತ್ತರ ನೀಡಿದೆ
4 ಟಿಎಂಸಿ ನೀರು ಬರಿಸಲು CWRC ಶಿಫಾರಸು ಮಾಡಿದೆ
ಈ ಹಂಚಿಕೆ ಆದೇಶವನ್ನು ಕರ್ನಾಟಕ ಅನುಸರಿಸಬೇಕು
ಈ ಸೂಕ್ಷ್ಮ ವಿಚಾರದ ಬಗ್ಗೆ ಚರ್ಚೆ ನಡೆಸಲು ಒತ್ತಾಯ
ತಮಿಳುನಾಡಿಗೆ ಬಿಟ್ರೆ ಬೀದಿಗಿಳಿದು ಉಗ್ರ ಹೋರಾಟ – ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ
ಕಾವೇರಿ ಕೊಳ್ಳದ ರೈತರಿಗೆ ಮತ್ತೊಮ್ಮೆ ಆತಂಕ ಎದುರಾಗಿದೆ. ಮಳೆಯಿಲ್ಲದೆ ಈಗಾಗಲೇ ಹಳೇ ಮೈಸೂರು ಭಾಗದಲ್ಲಿ ಬರದ ಪರಿಸ್ಥಿತಿ ತಲೆದೋರಿದೆ. ಇದರ ನಡುವೆಯೂ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸೂಚನೆ ನೀಡಿರುವುದು ಮಂಡ್ಯ ಭಾಗದ ರೈತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ಸರ್ಕಾರ ಕೂಡ ಸಿಡಬ್ಲ್ಯೂಆರ್‌ಸಿ ಆದೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಒಂದೆಡೆ ಮಳೆಯಿಲ್ಲದೇ ಬೆಳೆಗಳು ಒಣಗುತ್ತಿದ್ದರೆ, ಮತ್ತೊಂದೆಡೆ ತಮಿಳುನಾಡಿಗೆ ನೀರು ಹರಿಸುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಸಿಡಿದೆದ್ದಿರುವ ಮಂಡ್ಯ ಜಿಲ್ಲೆಯ ರೈತರು ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಜಿಲ್ಲೆಯ ವಿವಿಧೆಡೆ ರೈತ ಸಂಘಟನೆಗಳು ಹಾಗೂ ಹಿತರಕ್ಷಣಾ ಸಮಿತಿಗಳಿಂದ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆಯುವ ಸಾಧ್ಯತೆಯಿದೆ.
ರೈತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸ್ ಆಡಳಿತ ಸಂಪೂರ್ಣ ಎಚ್ಚೆತ್ತುಕೊಂಡಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ನಡೆಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಲಾಗಿದೆ.
