ಪಾಟ್ನಾ: ಊಟ ನೀಡಲು ತಡ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಅತ್ತಿಗೆಯ ಶಿರಚ್ಛೇದ ಮಾಡಿರುವ ಘಟನೆ ಬಿಹಾರದಲ್ಲಿ (Bihar) ನಡೆದಿದೆ.
ಜೆಹಾನಾಬಾದ್ ಜಿಲ್ಲೆಯ ಪಾರ್ಸಾ ಬಿಘಾ ಪೊಲೀಸ್ ಠಾಣೆ ವ್ಯಾಪ್ತಿಯ ಇಮಾದ್‌ಪುರ ಗ್ರಾಮದಲ್ಲಿ 25 ವರ್ಷದ ಮಹಿಳೆ ಅಂಶು ದೇವಿಯನ್ನು ಆಕೆಯ ಮೈದುನಾ ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ಎಸ್‌ಐಆರ್ ಸಮೀಕ್ಷೆ| ಅಧಿಕಾರಿಯ ಮೇಲೆ ಹಲ್ಲೆ – ರಕ್ತ ಬರುವಂತೆ ಹೊಡೆದಿದ್ದ ಡಿಜೆಹಳ್ಳಿಯ ಇಬ್ಬರು ಅರೆಸ್ಟ್
ಅಂಶು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಈ ಘಟನೆ ನಡೆದಿದೆ. ಕುಟುಂಬದ ಇತರ ಸದಸ್ಯರು ಭತ್ತದ ನಾಟಿ ಮಾಡಲು ಗದ್ದೆಗೆ ಹೋಗಿದ್ದರು. ಆಕೆಯ ಮೈದುನಾ ಕುನಾಲ್ ಕುಮಾರ್ ಕೆಲಸದಿಂದ ಹಿಂತಿರುಗಿ ಊಟ ಕೇಳಿದ್ದಾನೆ. ಅತ್ತಿಗೆ ತಡವಾಗಿ ಊಟ ಬಡಿಸಿದ್ದಕ್ಕೆ ಕೋಪಗೊಂಡು ಜಗಳ ತೆಗೆದಿದ್ದಾನೆ.
ಜಗಳದ ವೇಳೆ ಆರೋಪಿ ಹರಿತವಾದ ಆಯುಧ ತೆಗೆದು ತನ್ನ ಅತ್ತಿಗೆ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಗ್ರಾಮದ ಹೊರವಲಯದಲ್ಲಿರುವ ಆಲದ ಮರದಲ್ಲಿ ಕತ್ತರಿಸಿದ ತಲೆ ನೇತಾಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ʻರಾಮಮಂದಿರ ದೇಣಿಗೆ ಕಳವುʼ ಚರ್ಚೆಗೆ ಸುರ್ಜೇವಾಲಾ ಒತ್ತಾಯ – ಲೋಕಸಭೆಯಲ್ಲೂ ಗದ್ದಲ, ಕಲಾಪ ಮುಂದೂಡಿಕೆ
ಪಾರ್ಸಾ ಬಿಘಾ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಅಪರಾಧಕ್ಕೆ ಬಳಸಿದ್ದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.
