ಬಳ್ಳಾರಿ: ಮುಂಗಾರು ಮಳೆ ( Monsoon) ಕೈಕೊಟ್ಟ ಪರಿಣಾಮ ಬಳ್ಳಾರಿ (Ballari) ಮತ್ತು ವಿಜಯನಗರ ಜಿಲ್ಲೆಗಳ ರೈತರು (Farmers) ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳನ್ನು ಹೊಲದಲ್ಲೇ ನಾಶಪಡಿಸುವ ಸ್ಥಿತಿ ಎದುರಾಗಿದೆ.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ಆರಂಭದಲ್ಲಿ ಸುರಿದ ಸ್ವಲ್ಪ ಮಳೆಯನ್ನು ನಂಬಿ ಬಿತ್ತನೆ ಮಾಡಿದ ಬೆಳೆಗಳು ಈಗ ನೀರಿಲ್ಲದೆ ಒಣಗುತ್ತಿವೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಇಟಗಿ ಮತ್ತು ಉತ್ತಂಗಿ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಮೆಕ್ಕೆಜೋಳದ ಬೆಳೆ ಸಂಪೂರ್ಣ ಒಣಗಿದೆ. ಕೈಗೆ ಬಂದ ಬೆಳೆ ಉಳಿಯುವುದಿಲ್ಲ ಎಂಬ ನಿರಾಸೆಯಿಂದ ರೈತರು ತಮ್ಮ ಬೆಳೆಗಳನ್ನು ಹೊಲದಲ್ಲೇ ಉಳುಮೆ ಮಾಡಿ ನಾಶಪಡಿಸುತ್ತಿದ್ದಾರೆ.ಇದನ್ನೂ ಓದಿ: ಯುವಕರು ದೇಶಕ್ಕೆ ಹೊಸ ದಿಕ್ಕು ತೋರಿಸುತ್ತಿದ್ದಾರೆ – 56 ವರ್ಷದ ಯುವಕರ ಬಗ್ಗೆ ಹೇಳಿದ್ದಲ್ಲ: ಮೋದಿ
ಬಳ್ಳಾರಿ ಜಿಲ್ಲೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸದ ಕಾರಣ ಭತ್ತದ ಬೆಳೆ ಬಾಡಲಾರಂಭಿಸಿದೆ. ನೀರಿನ ಕೊರತೆಯಿಂದ ಹಲವು ಎಕರೆ ಕೃಷಿ ಭೂಮಿ ಒಣಗುತ್ತಿದೆ.
ಸಾವಿರಾರು ರೂಪಾಯಿ ಸಾಲ ಮಾಡಿ ಬೀಜ, ಗೊಬ್ಬರ ಮತ್ತು ಕೃಷಿ ಕೆಲಸಗಳಿಗೆ ಹಣ ಖರ್ಚು ಮಾಡಿದ ರೈತರು ಈಗ ಕಂಗಾಲಾಗಿದ್ದಾರೆ. ಕಣ್ಣೆದುರೇ ಬೆಳೆ ಹಾಳಾಗುತ್ತಿರುವ ದೃಶ್ಯ ನೋಡಿ ರೈತ ಕುಟುಂಬಗಳು ಆತಂಕದಲ್ಲಿವೆ. ಸರ್ಕಾರ ಕೂಡಲೇ ಬರ ಘೋಷಣೆ ಮಾಡಬೇಕು. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು. ರೈತರ ಸಾಲ ಮನ್ನಾ ಮಾಡಿ ನೆರವಿಗೆ ಬರಬೇಕು ಎಂದು ರೈತರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ಪೊಲೀಸರ ಮೇಲೆಯೇ ಚಾಕು ದಾಳಿ – ಅಪ್ರಾಪ್ತೆಯ ಅಪಹರಣ, ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಸಾವು
