ಹಾಸನ: ಹಾಸನ (Hassan) ತಾಲೂಕಿನ ಶಾಂತಿಗ್ರಾಮ ಟೋಲ್ ಬಳಿ ನಟೋರಿಯಸ್ ರೌಡಿಶೀಟರ್ ಸೈಲೆಂಟ್ ಸುನಿಲ್ (Rowdysheetar Silent Sunil) ಆಗಮಿಸುತ್ತಿದ್ದಂತೆ ಯುವಕರ ಗುಂಪೊಂದು ಭರ್ಜರಿ ಸ್ವಾಗತ ಕೋರಿದೆ.
ಹತ್ತಾರು ಕಾರುಗಳಲ್ಲಿ ಬಂದ ಬೆಂಬಲಿಗರು ಸೈಲೆಂಟ್ ಸುನಿಲ್ ಕಾರನ್ನು ಎಸ್ಕಾರ್ಟ್ ರೀತಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಮಾಜಿ ಶಾಸಕ ಪ್ರೀತಂಗೌಡ (Preetham Gowda) ಅವರ ಆಪ್ತರು ಸ್ವಾಗತ ಕೋರಿದ್ದು, ಈ ವಿಡಿಯೋವನ್ನು ಪ್ರೀತಂಗೌಡ ಫ್ಯಾನ್ಸ್ ಪೇಜ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದನ್ನೂ ಓದಿ: West Bengal elections 2026 | ಮತದಾನದ ಹೊತ್ತಲ್ಲೇ ಬಂಗಾಳದಲ್ಲಿ ಕಚ್ಚಾ ಬಾಂಬ್ ದಾಳಿ; ಹಲವರು ಗಂಭೀರ
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ಈ ರೀತಿಯ ಸ್ವಾಗತ ನೀಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಇದನ್ನೂ ಓದಿ: ಹಾರ್ಮುಜ್ಗೆ ದಿಗ್ಬಂಧನ ವಿಧಿಸಿರೋ ಅಮೆರಿಕ ಸೇನೆಗೆ ದೊಡ್ಡ ಹೊಡೆತ – ನೌಕಾಪಡೆ ಕಾರ್ಯದರ್ಶಿ ರಾಜೀನಾಮೆ



