ರಾಯಚೂರು: ಮಂತ್ರಾಲಯದಲ್ಲಿ (Mantralaya) ರಾತ್ರಿಯಿಡಿ ಜೋರು ಮಳೆ ಸುರಿದಿದ್ದು, ಗುರು ರಾಘವೇಂದ್ರ ಸ್ವಾಮಿ (Guru Raghavendra Swami) ದರ್ಶನಕ್ಕೆ ಬಂದು ರಾತ್ರಿ ತಂಗಿದ್ದ ಭಕ್ತರು ರಾತ್ರಿಯೆಲ್ಲಾ ಪರದಾಡಿದ್ದಾರೆ.
ವೀಕೆಂಡ್ ಹಿನ್ನೆಲೆ ರಾಯರ ಮಠಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದ ಭಕ್ತರು ಮಳೆಯಿಂದಾಗಿ ನಿದ್ದೆಗೆಟ್ಟಿದ್ದಾರೆ. ಮಠದ ಹೊರ ಪ್ರಾಂಗಣದಲ್ಲಿ ಮಲಗಿದ್ದ ಭಕ್ತರು ಮಳೆಯಲ್ಲಿ ಒದ್ದೆಯಾಗಿದ್ದಾರೆ. ಕೂಡಲೇ ಎಚ್ಚೆತ್ತ ಮಠದ ಆಡಳಿತ ಮಂಡಳಿ ಮಠದ ಕಲ್ಯಾಣ ಮಂಟಪದಲ್ಲಿ ಮಲಗಲು ಭಕ್ತರಿಗೆ ವ್ಯವಸ್ಥೆ ಮಾಡಿದ್ದಾರೆ. ಇದನ್ನೂ ಓದಿ: ಮುಂಗಾರು ಆರಂಭವಾದ್ರೂ ಮಳೆ ಸುಳಿವಿಲ್ಲ – ಕೆಲ ಜಿಲ್ಲೆಗಳ ಜೀವಜಲ ಖಾಲಿ ಖಾಲಿ
ಬೆಳಗ್ಗೆ ದರ್ಶನಕ್ಕಾಗಿ ರಾತ್ರಿಯೇ ಬಂದು ಪ್ರಾಂಗಣದಲ್ಲಿ ಮಲಗಿದ್ದ ಭಕ್ತರು ಮಳೆಯಿಂದಾಗಿ ಪರದಾಡಬೇಕಾಯಿತು. ಕೊನೆಗೆ ಕಲ್ಯಾಣ ಮಂಟಪದಲ್ಲಿ ಮಲಗಿ ಭಕ್ತರು ಮಳೆಯಿಂದ ರಕ್ಷಣೆ ಪಡೆದಿದ್ದಾರೆ.
