ಇಸ್ಲಾಮಾಬಾದ್: ಅಮೆರಿಕ(USA) ಮತ್ತು ಇರಾನ್ (Iran) ನಡುವೆ ಕದನ ವಿರಾಮ ಘೋಷಣೆ ಮಾಡಿ ದೊಡ್ಡ ಸಾಧನೆ ಮಾಡಿದಂತೆ ಬಿಂಬಿಸುತ್ತಿರುವ ಪಾಕಿಸ್ತಾನ (Pakistan) ಪ್ರಧಾನಿ ಶೆಹಬಾಜ್ ಷರೀಫ್(Shehbaz Sharif) ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.
ಶೆಹಬಾಜ್ ಷರೀಫ್ ಅವರು ಎಕ್ಸ್ ನಲ್ಲಿ ಹಾಕಿದ ಪೋಸ್ಟ್ನ ಆರಂಭದಲ್ಲಿ “Draft – Pakistan’s PM Message on X” ಎಂಬ ಸಾಲು ಹಾಗೆಯೇ ಇತ್ತು. ಅಂದರೆ ಯಾರೋ ಬೇರೆಯವರು ಸಿದ್ಧಪಡಿಸಿಕೊಟ್ಟಿದ್ದ ಸಂದೇಶವನ್ನು ಅವರ ಅಧಿಕಾರಿಗಳು ಹಾಗೆಯೇ ಕಾಪಿ ಪೇಸ್ಟ್ ಮಾಡಿದ್ದಾರೆ ಎನ್ನುವುದು ಅಧಿಕೃತವಾಗಿ ಬಹಿರಂಗವಾಗಿದೆ. ಇದನ್ನೂ ಓದಿ: ಕದನ ವಿರಾಮ ಘೋಷಣೆ – ಟೆಹ್ರಾನ್ನ ಪ್ರಮುಖ ಬೀದಿಗಳಲ್ಲಿ ರಾಷ್ಟ್ರಧ್ವಜ ಹಿಡಿದು ವಿಜಯೋತ್ಸವ ಆಚರಣೆ
ಡ್ರಾಫ್ಟ್ ಪೋಸ್ಟ್ ವಿವಾದದಿಂದಾಗಿ ಪಾಕಿಸ್ತಾನದ ರಾಜತಾಂತ್ರಿಕ ಸಂವಹನದ ಮೇಲಿನ ವಿಶ್ವಾಸಾರ್ಹತೆಯನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಕಚ್ಚಾ ತೈಲ ದರ ದಿಢೀರ್ ಭಾರೀ ಕುಸಿತ

ಫುಲ್ ಟ್ರೋಲ್
ಈ ತಪ್ಪಿನಿಂದಾಗಿ, ಪ್ರಧಾನಿ ಷರೀಫ್ ಸ್ವತಃ ಸಂದೇಶ ಬರೆಯುತ್ತಿಲ್ಲ, ಬದಲಿಗೆ ಅಮೆರಿಕದ ಅಧಿಕಾರಿಗಳು ಸಿದ್ಧಪಡಿಸಿದ ʻಸ್ಕ್ರಿಪ್ಟ್ʼ ಅನ್ನು ಪೇಸ್ಟ್ ಮಾಡಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಪೋಸ್ಟ್ ಅನ್ನು ತಕ್ಷಣವೇ ಎಡಿಟ್ ಮಾಡಿ ಆ ಸಾಲನ್ನು ತೆಗೆದುಹಾಕಿದರೂ, ಎಕ್ಸ್ನ ‘ಎಡಿಟ್ ಹಿಸ್ಟರಿ’ಯಲ್ಲಿ ಈ ತಪ್ಪು ಸ್ಪಷ್ಟವಾಗಿ ದಾಖಲಾಗಿದೆ. ಇದರ ಸ್ಕ್ರೀನ್ಶಾಟ್ಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ: ಕದನ ವಿರಾಮಕ್ಕೆ ಇರಾನ್ ವಿಧಿಸಿದ 10 ಷರತ್ತುಗಳು ಏನು?
Prime Minister Shehbaz joker would like to salute to Trump once again 😀
*Draft – Pakistan’s PM Message on X*
Can’t even do a Twitter post and this guy’s out here trying to do mediation 🤣🤣 pic.twitter.com/EEYwKd6Ffk
— برهان الدین | Burhan uddin (@burhan_uddin_0) April 7, 2026
ದೇಶದ ಪ್ರಧಾನಿಗೆ ಒಂದು ಟ್ವೀಟ್ ಸರಿಯಾಗಿ ಮಾಡಲು ಬರುವುದಿಲ್ಲ, ಇನ್ನು ಸಂಧಾನ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿ ಜನರು ಕಾಲೆಳೆಯುತ್ತಿದ್ದಾರೆ. ಕೆಲವರು ಇವರನ್ನು ಟ್ರಂಪ್ ಅಣತಿಯಂತೆ ಕುಣಿಯುವ ʼಅಮೆರಿಕದ ಬೊಂಬೆʼ ಎಂದು ಕರೆದಿದ್ದಾರೆ. ಇದನ್ನೂ ಓದಿ: ಅಮೆರಿಕ-ಇರಾನ್ ಮಧ್ಯೆ 2 ವಾರಗಳ ಕದನ ವಿರಾಮ ಘೋಷಣೆ

