ಬೆಂಗಳೂರು: ಇದೇ ಭಾನುವಾರ (ಏ.5) 2 ಗಂಟೆಗಳ ಕಾಲ `ನಮ್ಮ ಮೆಟ್ರೋ’ (Namma Metro) ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ ಎಂದು ಬಿಎಂಆರ್‌ಸಿಲ್ (BMRCL) ತಿಳಿಸಿದೆ.
ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಅಗತ್ಯ ನಿರ್ವಹಣಾ ಕಾಮಗಾರಿ ನಡೆಯಲಿದೆ. ಹೀಗಾಗಿ ಭಾನುವಾರ (ಏ.5ರಂದು) ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಮೆಜೆಸ್ಟಿಕ್‌ನಿಂದ ಮೈಸೂರು ರಸ್ತೆವರೆಗೆ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತವಾಗಲಿದೆ. ಇದನ್ನೂ ಓದಿ: ರಾಘವ್ ಚಡ್ಡಾಗೆ AAP ಶಾಕ್ – ರಾಜ್ಯಸಭೆಯಲ್ಲಿ ಉಪನಾಯಕ ಸ್ಥಾನದಿಂದ ವಜಾ
ನೇರಳೆ ಮಾರ್ಗದಲ್ಲಿ ದಿನಾಂಕ 05ನೇ ಏಪ್ರಿಲ್ 2026 (ಭಾನುವಾರ) ಬೆಳಿಗ್ಗೆ 2 ಗಂಟೆಗಳಕಾಲ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆ ತಾತ್ಕಾಲಿಕ ಸ್ಥಗಿತ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ. pic.twitter.com/rmCIXrkr7Z
— ನಮ್ಮ ಮೆಟ್ರೋ (@OfficialBMRCL) April 2, 2026
ಇದರ ಹೊರತಾಗಿ ಚಲ್ಲಘಟ್ಟದಿಂದ ಮೈಸೂರು ರಸ್ತೆ ಹಾಗೂ ಮೆಜೆಸ್ಟಿಕ್‌ನಿಂದ ವೈಟ್‌ಫೀಲ್ಡ್ವರೆಗೆ, ಹಸಿರು ಮಾರ್ಗದಲ್ಲಿ ಮಾದಾವರದಿಂದ ರೇಷ್ಮೆ ಸಂಸ್ಥೆವರೆಗೆ ಮತ್ತು ಹಳದಿ ಮಾರ್ಗದಲ್ಲಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ವೇಳಾಪಟ್ಟಿಯಂತೆ ನಮ್ಮ ಮೆಟ್ರೋ ಸೇವೆ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಲಿದೆ.
ಇನ್ನೂ ಭಾನುವಾರ 9 ಗಂಟೆ ಬಳಿಕ ಮೆಜೆಸ್ಟಿಕ್‌ದಿಂದ ಮೈಸೂರು ರಸ್ತೆವರೆಗೆ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ: ಮಗನ ರೋಗ ವಾಸಿಯಾಗಲು 12 ವರ್ಷದ ಮಗಳನ್ನೇ ಬಲಿಕೊಟ್ಟ ತಾಯಿ – ಬಳಿಕ ರೇಪ್ ಅಂತ ದೂರು

