– ಸಾಲಗಾರರ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೋ
ಬೆಂಗಳೂರು: ಸಾಲಗಾರರ ಕಾಟ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿರುವ ಘಟನೆ ಆನೇಕಲ್ (Anekal) ತಾಲೂಕಿನ ಅತ್ತಿಬೆಲೆ ಸಮೀಪದ ಮಲ್ಲೇನಹಳ್ಳಿಯಲ್ಲಿ (Mallenahalli) ನಡೆದಿದೆ.
ಶನಿವಾರ ಸಂಜೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೋ ಮಾಡಿದ್ದರು. ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೋ ಮಾಡಿ ಮೋಹನ್ ತನ್ನ ಸಂಬಂಧಿಕರಿಗೆ ಕಳುಹಿಸಿದ್ದಾರೆ. ಬಳಿಕ ತಾಯಿ ಆಶಾ, ಅಕ್ಕ ವರ್ಷಿತಾ, ಅಕ್ಕನ ಮಗ ಮಯಾಂಕ್ ಕತ್ತು ಸೀಳಿ ಬಳಿಕ ತಾನೂ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಕಚ್ಚಾ ತೈಲ ಹೊತ್ತು ಭಾರತಕ್ಕೆ ಬರುತ್ತಿರೋ ಹಡಗುಗಳಿಗೆ ನೌಕಾಪಡೆಯ ಭದ್ರತೆ
ಘಟನೆಯಲ್ಲಿ ತಾಯಿ ಆಶಾ (55), ಅಕ್ಕ ವರ್ಷಿತಾ (35) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೀಡಿಯೋ ಗಮನಿಸಿ ಮನೆ ಬಳಿ ಸಂಬಂಧಿಕರು ಬಂದು ನೋಡಿದ ವೇಳೆ ಬಾಗಿಲು ಲಾಕ್ ಆಗಿತ್ತು. ಕೊನೆಗೆ ಹಿಂಬಾಗಿಲ ಮೂಲಕ ಒಳಹೊಕ್ಕಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೊಡಗಿನ ಹಲವೆಡೆ ಗುಡುಗು ಸಹಿತ ಮಳೆ – ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ
ಮೋಹನ್ ಗೌಡ (27) ಮತ್ತು ಅಕ್ಕನ ಮಗ ಮಯಾಂಕ್ (11) ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇದು ನನ್ನದಲ್ಲ, ವಾಪಸ್ ತೆಗೆದುಕೊಳ್ಳಿ – ತಪ್ಪಾಗಿ ಜಮೆಯಾದ 10 ಕೋಟಿ ಮರಳಿ ಪಡೆಯುವಂತೆ ಬ್ಯಾಂಕ್ಗೆ ಮಹಿಳೆಯ ಮನವಿ

