ಚಂಢೀಗಡ: ಐಪಿಎಲ್ 2026ರ (IPL 2026) ಫೈನಲ್‌ಗೆ ಟಿಕೆಟ್ ಪಡೆಯಲು ಗುಜರಾತ್ ಟೈಟನ್ಸ್ (GT) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವೆ ಇಂದು ಕ್ವಾಲಿಫೈಯರ್-2 ಕದನ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಮೇ 31ರಂದು ಆರ್‌ಸಿಬಿಯೊಂದಿಗೆ (RCB) ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ.
ನ್ಯೂ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ (Maharaja Yadavindra Singh Stadium) ಕ್ವಾಲಿಫೈಯರ್-2 ಪಂದ್ಯ ನಡೆಯಲಿದ್ದು, ಉಭಯ ತಂಡಗಳೂ `ಮಾಡು ಇಲ್ಲವೇ ಮಡಿ’ ಎಂಬಂತೆ ಸೆಣಸಾಡಲಿವೆ. ಇಂದಿನ ಪಂದ್ಯದಲ್ಲಿ ಗೆದ್ದ ತಂಡ ಈ ಆವೃತ್ತಿಯ ಫಿನಾಲೆಯಲ್ಲಿ ಆರ್‌ಸಿಬಿಯೊಂದಿಗೆ ಕಣಕ್ಕಿಳಿಯಲಿದೆ. ಸೋತ ತಂಡವು ಐಪಿಎಲ್ 2026ರ ಫೈನಲ್ ರೇಸ್‌ನಿಂದ ಹೊರಬೀಳಲಿದೆ.
Drop your predictions in the comments ✍️#TATAIPL | #TheFinalLeap | #Final pic.twitter.com/j34eax51iS
— IndianPremierLeague (@IPL) May 28, 2026
ಟೂರ್ನಿಯ ಆರಂಭದಿಂದಲೂ ಏಳು-ಬೀಳು ಕಂಡ ಗುಜರಾತ್ ಟೈಟನ್ಸ್ ನಂತರದ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿ 18 ಅಂಕಗಳೊಂದಿಗೆ ಪ್ಲೇ-ಆಫ್ ತಲುಪಿದೆ. ಇನ್ನೂ ಆರಂಭಿಕ ನಾಲ್ಕೂ ಪಂದ್ಯಗಳನ್ನು ಗೆದ್ದಿದ್ದ ರಾಜಸ್ಥಾನ್ ರಾಯಲ್ಸ್, ಮಧ್ಯದಲ್ಲಿ ಸಡನ್ ಆಗಿ ಫಾರ್ಮ್ ಕಳೆದುಕೊಂಡಿತ್ತು. ಈ ಸೀಸನ್‌ನಲ್ಲಿ ಉಭಯ ತಂಡಗಳು ಈಗಾಗಲೇ ಎರಡು ಬಾರಿ ಮುಖಾಮುಖಿಯಾಗಿವೆ. ಏ.4ರಂದು ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 6 ರನ್‌ಗಳಿಂದ ಗೆಲವು ಸಾಧಿಸಿತ್ತು. ಬಳಿಕ ಮೇ 9ರಂದು ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪ್ರತೀಕಾರ ತೀರಿಸಿಕೊಂಡು, 152 ರನ್‌ಗಳಿಗೆ ಆಲೌಟ್ ಮಾಡಿ 77 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು.

ಗುಜರಾತ್ ಬ್ಯಾಟಿಂಗ್, ಬೌಲಿಂಗ್ ಎರಡಕ್ಕೂ ಸೈ:
ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಬಲವು ಪ್ರಮುಖವಾಗಿ ಆರಂಭಿಕ ಜೋಡಿಯಾದ ನಾಯಕ ಶುಭ್‌ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಹೆಗಲ ಮೇಲೆ ನಿಂತಿದೆ. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್, ಜೇಸನ್ ಹೋಲ್ಡರ್‌ನಂತಹ ಅನುಭವಿ ಆಟಗಾರರು ಹಾಗೂ ಕ್ವಾಲಿಫೈಯರ್-1 ಪಂದ್ಯದಲ್ಲಿ ಅಬ್ಬರಿಸಿದ್ದ ರಾಹುಲ್ ತೇವಾಟಿಯಾ ಇವರಿಗೆ ಸಾಥ್ ನೀಡಬೇಕಿದೆ. ಪ್ರಮುಖವಾಗಿ ಕಗಿಸೋ ರಬಾಡಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್, ಇವರ ಬೌಲಿಂಗ್ ದಾಳಿ ಆರ್‌ಆರ್ ಬ್ಯಾಟರ್‌ಗಳಿಗೆ ದೊಡ್ಡ ಸವಾಲಾಗಲಿದೆ.

ರಾಜಸ್ಥಾನ್ ರಾಯಲ್ಸ್‌ಗೆ `ವೈಭವ’ದ ಅಬ್ಬರ
ಆರ್‌ಆರ್ ತಂಡದ ಯುವ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಈ ಐಪಿಎಲ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಎಸ್‌ಆರ್‌ಹೆಚ್ ವಿರುದ್ಧ ಅಬ್ಬರಿಸಿ, 29 ರನ್‌ಗಳಿಗೆ 97 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜಸ್ಪ್ರಿತ್ ಬುಮ್ರಾ ಅವರಂತಹ ಬೌಲರ್‌ಗಳ ಎದುರು ಹೆದರದೇ ಆಡಿರುವ ಅವರು, ಮತ್ತೆ ಮಿಂಚಲು ಸಜ್ಜಾಗಿದ್ದಾರೆ. ಇನ್ನೂ ಯಶಸ್ವಿ ಜೈಸ್ವಾಲ್ ಮತ್ತು ಧ್ರುವ್ ಜುರೆಲ್ ಸೂರ್ಯವಂಶಿಗೆ ಸಾಥ್ ನೀಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ರಾಜಸ್ಥಾನ ತಂಡದಲ್ಲಿ ಜೋಫ್ರಾ ಆರ್ಚರ್ ಅವರ ವೇಗದ ದಾಳಿ ನಡೆಸಬೇಕಿದೆ. ಈ ಸೀಸನ್‌ನಲ್ಲಿ ಈಗಾಗಲೇ 21 ವಿಕೆಟ್ ಉರುಳಿಸಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಆರ್ಚರ್, ಪವರ್‌ಪ್ಲೇನಲ್ಲೇ ಗುಜರಾತ್ ತಂಡದ ಸ್ಫೋಟಕ ಆರಂಭಿಕರನ್ನು ಕಟ್ಟಿಹಾಕಬೇಕಿದೆ.

ರನ್ ಹೊಳೆ ಹರಿಯುವ ನಿರೀಕ್ಷೆ:
ಮುಲ್ಲಾನ್‌ಪುರದ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದ್ದು, ರನ್‌ಗಳ ಮಳೆ ಹರಿಯುವುದು ಗ್ಯಾರಂಟಿ ಎನ್ನಲಾಗಿದೆ. ಇಂತಹ ಸಂದರ್ಭದಲ್ಲಿ ಬೌಲರ್‌ಗಳ ಪಾತ್ರ ಅತ್ಯಂತ ನಿರ್ಣಾಯಕವಾಗಲಿದೆ. ಈ ಮೈದಾನದಲ್ಲಿ ಇತ್ತೀಚಿಗೆ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವು 8 ವಿಕೆಟ್ ನಷ್ಟಕ್ಕೆ 243 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಗಿತ್ತು. ಇಂದಿನ ಪಂದ್ಯದಲ್ಲೂ ಮತ್ತೊಮ್ಮೆ ಬೃಹತ್ ಮೊತ್ತದ ರನ್ ಹರಿದುಬರುವ ಹೆಚ್ಚಿನ ನಿರೀಕ್ಷೆಗಳಿದೆ.
What are you waiting for? 🙅♂️
🎟️ Grab your tickets NOW for #Qualifier2 ▶️ https://t.co/B4EmAuIpZm #TATAIPL | #TheFinalLeap | #GTvRR pic.twitter.com/kQerJFqHFY
— IndianPremierLeague (@IPL) May 28, 2026
ಸಂಭವನೀಯ ಆಟಗಾರರು:
ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (C), ಜೋಸ್ ಬಟ್ಲರ್ (Wk), ವಾಷಿಂಗ್ಟನ್ ಸುಂದರ್, ನಿಶಾಂತ್ ಸಿಂಧು, ಜೇಸನ್ ಹೋಲ್ಡರ್, ರಶೀದ್ ಖಾನ್, ಕುಲ್ವಂತ್ ಖೆಜ್ರೋಲಿಯಾ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇಂಪ್ಯಾಕ್ಟ್ ಸಬ್: ರಾಹುಲ್ ತೆವಾಟಿಯಾ, ಗ್ಲೆನ್ ಫಿಲಿಪ್ಸ್, ಅನುಜ್ ರಾವತ್, ಕುಮಾರ್ ಕುಶಾಗ್ರಾ, ಸಾಯಿ ಕಿಶೋರ್

ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ ಜುರೆಲ್ (Wk), ರಿಯಾನ್ ಪರಾಗ್ (C), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ದಸುನ್ ಶನಕ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಯಶ್ ರಾಜ್ ಪುಂಜಾ, ಬ್ರಿಜೇಶ್ ಶರ್ಮಾ.
ಇಂಪ್ಯಾಕ್ಟ್ ಸಬ್: ಶುಭಂ ದುಬೆ, ಸುಶಾಂತ್ ಮಿಶ್ರಾ, ಅಮನ್ ರಾವ್ ಪೆರಾಲ, ರವಿ ಬಿಷ್ಣೋಯ್, ತುಷಾರ್ ದೇಶಪಾಂಡೆ
