ಟೆಹ್ರಾನ್: ಇರಾನ್ ಹಾಗೂ ಇಸ್ರೇಲ್ ಮಧ್ಯೆ ಯುದ್ಧ (Iran-Israel War) 18ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 24 ಗಂಟೆಗಳಲ್ಲಿ ಇರಾನ್‌ನ 200ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ (Military Base) ಮೇಲೆ ಇಸ್ರೇಲ್ ದಾಳಿ ನಡೆಸಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿ ವ್ಯವಸ್ಥೆಗಳು, ಮಿಲಿಟರಿ ಪ್ರಧಾನ ಕಚೇರಿ, ರಕ್ಷಣಾ ವ್ಯವಸ್ಥೆಗಳು ಮತ್ತು ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ಸಂಗ್ರಹಣಾ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಇರಾನ್ ಕೂಡ ಸೌದಿ ಅರೇಬಿಯಾದ ವಿಮಾನ ನಿಲ್ದಾಣ ಸೇರಿ 6 ಕಡೆ ಡ್ರೋನ್‌ಗಳ ಮೂಲಕ ದಾಳಿ ಮಾಡಿದ್ದು, ಭದ್ರತಾ ಪಡೆಗಳು ತಡೆದಿವೆ. ಇದನ್ನೂ ಓದಿ: US ಹಿಂದೂ ದೇವಾಲಯಗಳ ಮೇಲಿನ ದಾಳಿ ಬಗ್ಗೆ ಮಾತನಾಡಲ್ಲ – ಅಮೆರಿಕದ ಸರ್ಕಾರದ USCIRF ವರದಿಗೆ ಭಾರತ ಕಿಡಿ
ಯುಎಇಯಲ್ಲಿ ದುಬೈ ಏರ್‌ಪೋರ್ಟ್ (Dubai Airport) ಜೊತೆಗೆ ಫುಜೈರಾ ಬಂದರಿನ ಮೇಲೂ ಡ್ರೋನ್ ಅಟ್ಯಾಕ್ ಮಾಡಿದೆ. ಹೀಗಾಗಿ, ಫುಜೈರಾ ಬಂದರಿನಲ್ಲಿ ತೈಲ ಭರ್ತಿ ನಿಲ್ಲಿಸಲಾಗಿದೆ. ಅಬುದಾಬಿಯಲ್ಲಿ ಕಾರ್ ಮೇಲೆ ಮಿಸೈಲ್ ಬಿದ್ದು, ಓರ್ವ ಬಲಿಯಾಗಿದ್ದಾನೆ. ಅಲಿ ಖಮೇನಿ ಬಳಸುತ್ತಿದ್ದ ವಿಮಾನವನ್ನು ಇರಾನ್ ರಾಜಧಾನಿ ಟೆಹ್ರಾನ್‌ನ ಮೆಹರಾಬಾದ್ ಏರ್‌ಪೋರ್ಟ್‌ನಲ್ಲಿ ಇಸ್ರೇಲ್ ಧ್ವಂಸಗೊಳಿಸಿದೆ. ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ
ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ದಾಳಿ-ಪ್ರತಿದಾಳಿ ಮುಂದುವರಿದಿದೆ. ಯುಎಇ ಏರ್‌ಪೋರ್ಟ್ ಅನ್ನು ಇರಾನ್ ಟಾರ್ಗೆಟ್ ಮಾಡಿದೆ. ದುಬೈ ಅಂತರರಾಷ್ಟ್ರೀಯ ಏರ್‌ಪೋರ್ಟ್ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ. ಸಿವಿಲ್ ಡಿಫೆನ್ಸ್ ತಕ್ಷಣ ಕಾರ್ಯಪವೃತ್ತರಾಗಿ ಬೆಂಕಿಯನ್ನು ನಂದಿಸಿ, ಆ ಪ್ರದೇಶದಲ್ಲಿದ್ದ ತೈಲ ಟ್ಯಾಂಕರ್‌ಗಳಿಗೆ ಬೆಂಕಿ ಆವರಿಸದಂತೆ ಎಚ್ಚರ ವಹಿಸಿದೆ. ಇದನ್ನೂ ಓದಿ: ಕುರ್ಚಿ ಕದನದ ಮಧ್ಯೆ ಸಚಿವರಿಗೆ ಸಿಎಂ ಡಿನ್ನರ್ – ಭಾಗವಹಿಸಿದ 14 ಮಂದಿ ಯಾರು?
ದುಬೈನಲ್ಲಿನ ಸಂಘರ್ಷ ಪರಿಸ್ಥಿತಿಯಿಂದಾಗಿ ವಿಮಾನ ಸಂಚಾರದಲ್ಲಿ ಏರುಪೇರಾಗಿದೆ. ವಿಶ್ವದ ಅತ್ಯಂತ ಜನನಿಬಿಡ ಏರ್‌ಪೋರ್ಟ್ ಮೇಲಿನ ದಾಳಿಯಿಂದಾಗಿ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ 45 ವಿಮಾನಗಳ ಹಾರಾಟ ಕ್ಯಾನ್ಸಲ್ ಆಗಿದೆ. 350 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕೊಚ್ಚಿ ವಿಮಾನ ಮತ್ತೆ ವಾಪಸ್ ಆಗಿದೆ. ತಿರುವನಂತಪುರಂ ಏರ್‌ಪೋರ್ಟ್‌ನಲ್ಲೂ ಏರ್ ಇಂಡಿಯಾ ವಾಪಸ್ ಬಂದಿದೆ. ಇದನ್ನೂ ಓದಿ: ಸೆಕೆಂಡ್ ಪಿಯು ಪರೀಕ್ಷೆಯಲ್ಲಿ ರಿಪೀಟರ್ಸ್ ಪ್ರಶ್ನೆಪತ್ರಿಕೆ ನೀಡಿ ಯಡವಟ್- ವಿದ್ಯಾರ್ಥಿಗಳಿಗೆ ಶಾಕ್
ಇಸ್ರೇಲ್ ಇರಾನ್‌ನ ಉಡಾವಣಾ ಸಾಮರ್ಥ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕುಗ್ಗಿಸುವಲ್ಲಿ ಯಶಸ್ವಿಯಾಗಿದೆ. ನಾವು ಇರಾನ್‌ನ ಆಕಾಶವನ್ನು ನಿಯಂತ್ರಿಸುತ್ತಿದ್ದೇವೆ ಎಂದು ಭಾರತದ ಇಸ್ರೇಲ್ ರಾಯಭಾರಿ ಕಚೇರಿ ಹೇಳಿದೆ. ರಾಜತಾಂತ್ರಿಕ ಮಾತುಕತೆಗೆ ಇರಾನ್ ಪ್ರಯತ್ನ ನಡೆಸುತ್ತಿದೆ ಎಂದು ಇಸ್ರೇಲ್ ಹೇಳಿದೆ. ಈ ಮಧ್ಯೆ ಇರಾನ್ ಯುಇಎ ಮೇಲೆ ದಾಳಿ ಮುಂದುವರಿಸಿದ್ದು, ಇವುಗಳನ್ನು ಭದ್ರತಾ ಪಡೆಗಳು ನಿಗ್ರಹಿಸುತ್ತಿವೆ. ಇರಾನ್‌ನಿಂದ ಉಡಾಯಿಸಲಾದ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 21 ಮಾನವರಹಿತ ವೈಮಾನಿಕ ವಾಹನಗಳನ್ನು ಯುಎಇ ಯಶಸ್ವಿಯಾಗಿ ಹೊಡೆದುರುಳಿಸಿದೆ. ಈವರೆಗೂ ರಕ್ಷಣಾ ಪಡೆಗಳು ಒಟ್ಟು 304 ಬ್ಯಾಲಿಸ್ಟಿಕ್ ಕ್ಷಿಪಣಿಗಳು, 1,627 ಯುಎವಿಗಳು ಮತ್ತು 15 ಕ್ರೂಸ್ ಕ್ಷಿಪಣಿಗಳನ್ನು ಎದುರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಯುಗಾದಿ, ರಂಜಾನ್ – KSRTCಯಿಂದ ಹೆಚ್ಚುವರಿ ಬಸ್ ಸೇವೆ, ವಿಶೇಷ ರಿಯಾಯಿತಿ ಘೋಷಣೆ
ಇನ್ನು ಡೊನಾಲ್ಡ್ ಟ್ರಂಪ್‌ಗೆ ಇರಾನ್ ಮತ್ತೆ ತಿರುಗೇಟು ನೀಡಿದೆ. ಕದನ ವಿರಾಮಕ್ಕಾಗಿ ನಾವು ಯಾವುದೇ ಪ್ರಸ್ತಾವನೆ ಇಟ್ಟಿಲ್ಲ ಎಂದಿದೆ. ಈ ಮಧ್ಯೆ 17 ದಿನದ ಯುದ್ಧಕ್ಕೆ ಅಮೆರಿಕ 12 ಬಿಲಿಯನ್ ಡಾಲರ್ ಖರ್ಚು ಮಾಡಿದೆ ಎಂದು ರಾಷ್ಟ್ರೀಯ ಆರ್ಥಿಕ ಮಂಡಳಿಯ ನಿರ್ದೇಶಕ ಕೆವಿನ್ ಹ್ಯಾಸೆಟ್ ಹೇಳಿದ್ದಾರೆ. ಇದನ್ನೂ ಓದಿ: ಟ್ರಂಪ್‌ಗೆ ಮುಖಭಂಗ – ಯುದ್ಧ ನೌಕೆಗಳನ್ನು ಕಳುಹಿಸಲ್ಲ ಎಂದ ಮಿತ್ರ ದೇಶಗಳು

