ನವದೆಹಲಿ: ಕರೂರಿನಲ್ಲಿ (Karur) ಸಂಭವಿಸಿದ್ದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನಟ, ರಾಜಕಾರಣಿ ವಿಜಯ್‌ಗೆ (TVK Vijay) ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ (CBI) ಸಮನ್ಸ್ ನೀಡಿದೆ.
ಪ್ರಕರಣ ಸಂಬಂಧ ಮಾ.10ರಂದು ಮತ್ತೊಂದು ಸುತ್ತಿನ ವಿಚಾರಣೆಗೆ ಹಾಜರಾಗುವಂತೆ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್‌ಗೆ ಸಿಬಿಐ ಅಧಿಕಾರಿಗಳು ಸಮನ್ಸ್ ಜಾರಿಗೊಳಿಸಿದ್ದಾರೆ. ವಿಜಯ್ ಅವರಿಂದ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿರುವ ಹೆಚ್ಚುವರಿ ಪುರಾವೆಗಳು ಮತ್ತು ಸಾಮಗ್ರಿಗಳನ್ನು ಸಂಗ್ರಹಿಸಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟೀ ಕುಡಿಯುವ ಫೋಟೋ ಅಪ್ಲೋಡ್ ಮಾಡಿ ಪಾಕಿಸ್ತಾನವನ್ನು ಟ್ರೋಲ್ ಮಾಡಿದ ಚಕ್ರವರ್ತಿ
ಈ ಮೊದಲು ಪ್ರಕರಣದ ವಿಚಾರಣೆಯನ್ನು ಎಸ್‌ಐಟಿ ವಹಸಿಕೊಂಡಿತ್ತು. ಅದಾದ ಬಳಿಕ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸಿಬಿಐ ವಿಚಾರಣೆ ವಹಿಸಿಕೊಂಡಿದೆ. ಕಳೆದ ಜನವರಿ 12 ಮತ್ತು ಜನವರಿ 19ರಂದು ಸಿಬಿಐ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ತನಿಖೆ ಭಾಗವಾಗಿ ವಿಚಾರಣೆಗೆ ಹಾಜರಾಗಿದ್ದರು. ಸಿಬಿಐ ಅಧಿಕಾರಿಗಳು ಈಗಾಗಲೇ ಕೆಲವು ಜನರನ್ನು ವಿಚಾರಣೆ ನಡೆಸಿ, ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 27ರಂದು ವಿಜಯ್ ಅವರು ಕರೂರಿನಲ್ಲಿ ಪಕ್ಷದ ಸಮಾವೇಶ ಆಯೋಜನೆ ಮಾಡಿದ್ದರು. ಈ ವೇಳೆ ದೊಡ್ಡಮಟ್ಟದಲ್ಲಿ ಜನರು ಸೇರಿದ್ದರು. ಪರಿಣಾಮ ಸಮಾವೇಶದಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಸಾವನ್ನಪ್ಪಿದ್ದರು. ಜೊತೆಗೆ 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ಇದನ್ನೂ ಓದಿ: ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಯುವತಿ ಸಾವು

