ಬಳ್ಳಾರಿ: ವಿದ್ಯಾರ್ಥಿಯೊಬ್ಬನನ್ನು (Student) ಕೊಲೆಗೈದು, 7 ಮಂದಿ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಬಳ್ಳಾರಿಯ (Ballari) ಖಾಸಗಿ ಶಾಲೆಯ (School) ಹಾಸ್ಟೆಲ್ ಬಾಲಕ, ಪ್ರಕರಣ ನಡೆದು 30 ಗಂಟೆ ಕಳೆದ್ರೂ ಪತ್ತೆಯಾಗಿಲ್ಲ.
ಕೃತ್ಯ ನಡೆಸಿ ಅರ್ಧ ಗಂಟೆಯಲ್ಲೇ ಶಾಲಾ ಹಾಸ್ಟೆಲ್‌ನಿಂದ ಬಾಲಕ ನಾಪತ್ತೆಯಾಗಿದ್ದಾನೆ. ಶಾಲಾ ಕಾಂಪೌಂಡ್ ದಾಟಿದ ಬಳಿಕ ಬಾಲಕ ಎಲ್ಲಿಗೆ ಹೋದ ಎಂಬ ಸುಳಿವೇ ಸಿಗುತ್ತಿಲ್ಲ. ಆತನಿಗಾಗಿ ಬಳ್ಳಾರಿ ಎಸ್‌ಪಿ ಡಾ.ಸುಮನ್ ಫನ್ನೇಕರ್ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಇದುವರೆಗೂ ಆರೋಪಿ ಬಾಲಕನ ಸುಳಿವು ಸಿಕ್ಕಿಲ್ಲ. ಇದನ್ನೂ ಓದಿ: 9ನೇ ತರಗತಿ ವಿದ್ಯಾರ್ಥಿಯಿಂದ ರಾಡ್‌ನಿಂದ ಭೀಕರ ಹಲ್ಲೆ – ಓರ್ವ ಬಾಲಕ ಸಾವು, 7 ಮಂದಿಗೆ ಗಾಯ
ಬಾಲಕ ಪತ್ತೆಯಾಗದ ಹಿನ್ನೆಲೆ, ರಸ್ತೆಯುದ್ದಕ್ಕೂ ಇರುವ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬಾಲಕನ ಚಲವಲನಗಳ ಆಧಾರಿಸಿ ಹುಡುಕಾಟಕ್ಕೂ ಪೊಲೀಸರು ಮುಂದಾಗಿದ್ದಾರೆ. ಗಾಯಗೊಂಡಿರುವ ಬಾಲಕರು ಹಾಗೂ ಮಹಿಳಾ ವಾರ್ಡನ್‌ಗೆ ಬಳ್ಳಾರಿ ವಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಬಾಲಕನ ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ. ಡ್ರಗ್ ಅಡಿಕ್ಟ್ ಆಗಿ ಕೊಲೆ ಮಾಡಿರಬಹುದು ಎಂದು ಮೃತ ಬಾಲಕನ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಶಾಲಾ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹೂವಿನಹಡಗಲಿ | ಮಗನನ್ನೇ ಕೊಚ್ಚಿ ಕೊಂದು ಅಮಾಯಕನಂತಿದ್ದ ಪಾಪಿ ತಂದೆ ಅರೆಸ್ಟ್

