ಬೆಂಗಳೂರು: ಕುರ್ಚಿ ಕದನ ಮಧ್ಯೆ ಕಾಂಗ್ರೆಸ್ಗೆ (Congress) ಈಗ ಹೊಸ ತಾʼಪತ್ರʼಯ ಶುರುವಾಗಿದೆ. ಸಚಿವ ಸಂಪುಟ ಪುನಾರಚನೆಗೆ (Cabinet Reshuffle) ನೂತನವಾಗಿ ಆಯ್ಕೆಯಾದ 31 ಶಾಸಕರು ಒತ್ತಾಯ ಮಾಡಿರುವ ಪತ್ರ ಬಹಿರಂಗವಾಗಿದೆ.
ಕಳೆದ ಅಧಿವೇಶನದ ವೇಳೆ ಹೊಸದಾಗಿ ಗೆದ್ದ ಕಾಂಗ್ರೆಸ್ ಶಾಸಕರು (Congress MLA’s) ರಾಹುಲ್, ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಬೆಳಗಾವಿ, ಬೆಂಗಳೂರು ಅಧಿವೇಶನದಲ್ಲಿ ಮೂರ್ನಾಲ್ಕು ಹೊಸ ಶಾಸಕರ ನೇತೃತ್ವದಲ್ಲಿ ಸಹಿ ಸಂಗ್ರಹ ನಡೆದಿದೆ ಎನ್ನಲಾಗಿದ್ದು ಈಗ 31 ಶಾಸಕರ ಸಹಿ ಇರುವ ಪತ್ರ ಈಗ ವೈರಲ್ ಆಗಿದೆ.
ನಾಯಕತ್ವ ಕದನ ತೀರ್ಮಾನಕ್ಕೂ ಮೊದಲೇ 31 ಶಾಸಕರ ಪತ್ರ ಸದ್ದು ಮಾಡುತ್ತಿದೆ. ದಿನಾಂಕ ಇಲ್ಲದ ಪತ್ರ ಬಿಡುಗಡೆ ಆಗಿದ್ದು, ಕಾಂಗ್ರೆಸ್ ಒಳಗೆ ಕುತೂಹಲ ಹೆಚ್ಚಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಲ್ಲಿ 38 ಶಾಸಕರು ಹೊಸದಾಗಿ ಗೆದ್ದಿದ್ದೇವೆ. ಬೇರೆ ರಾಜ್ಯಗಳಲ್ಲಿ ಮೊದಲ ಬಾರಿಗೆ ಗೆದ್ದವರು ಸಿಎಂ ಆಗಿದ್ದಾರೆ. ಮೊದಲ ಬಾರಿ ಗೆದ್ದ ಶಾಸಕರಿಗೂ ಸಚಿವ ಸ್ಥಾನ ನೀಡಿ ಅವಕಾಶ ಕೊಡಬೇಕು. ಕನಿಷ್ಠ 5 ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ರಾಮನಗರದ ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿ, ನಾನು ಪತ್ರಕ್ಕೆ ಸಹಿ ಮಾಡಿದ್ದು ನಿಜ. 30 ರಿಂದ 40 ಶಾಸಕರು ಸಹಿ ಮಾಡಿದ್ದೇವೆ. ಈಗಿನ ಸಚಿವರಿಂದ ಕೆಲಸ ಆಗುತ್ತಿಲ್ಲ. ಇಚ್ಛೆ ಇದ್ದವರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಬಳ್ಳಾರಿಯ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ ಸಚಿವ ಸಂಪುಟ ವಿಸ್ತಾರಣೆ ವೇಳೆ ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸಬರಿಗೆ ಅವಕಾಶ ಕೊಡಬೇಕು ಎಂದು ಕೇಳಿದ್ದೇವೆ. ಹೊಸಬರಿಗೆ ಅವಕಾಶ ನೀಡಿದರೆ ಮುಂದೆ ಅವರಿಗೂ ಅನುಭವ ಆಗಲಿದೆ. ಬಳ್ಳಾರಿ ವಿಚಾರದಲ್ಲಿ ನಾಗೇಂದ್ರ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದರು. ಇದನ್ನೂ ಓದಿ: ಮಹದೇವಪ್ಪನವರು ನಮ್ಮ ರಾಷ್ಟ್ರೀಯ ನಾಯಕರು, ಇಲ್ಲಿಂದಲೇ ನಮಸ್ಕರಿಸುತ್ತೇನೆ: ತಲೆಬಾಗಿದ ಡಿಕೆಶಿ
ಪತ್ರ ಬರೆದ ಶಾಸಕರು ಯಾರು?
ಶಿವಗಂಗಾ ಬಸವರಾಜ್, ಚನ್ನಗಿರಿ ಶಾಸಕ
ಇಕ್ಬಾಲ್ ಹುಸೇನ್, ರಾಮನಗರ ಶಾಸಕ
ಮಂಥರ್ ಗೌಡ, ಮಡಿಕೇರಿ ಶಾಸಕ
ಎಎಸ್ ಪೊನ್ನಣ್ಣ, ವಿರಾಜಪೇಟೆ ಶಾಸಕ
ನಯನಾ ಮೋಟಮ್ಮ, ಮೂಡಿಗೆರೆ ಶಾಸಕಿ
ದರ್ಶನ್ ಧೃವನಾರಾಯಣ್, ನಂಜನಗೂಡು ಶಾಸಕ
ರವಿಶಂಕರ್. ಡಿ, ಕೃಷ್ಣರಾಜನಗರ ಶಾಸಕ
ಗಣಿಗ ರವಿ, ಮಂಡ್ಯ ಶಾಸಕ
ಅಶೋಕ್ ರೈ, ಪುತ್ತೂರು ಶಾಸಕ
ಆನಂದ್ ಕೆಎಸ್, ಕಡೂರು ಶಾಸಕ
ದೇವೇಂದ್ರಪ್ಪ, ಜಗಳೂರು ಶಾಸಕ
ಎ.ಸಿ ಶ್ರೀನಿವಾಸ್, ಪುಲಿಕೇಶಿ ನಗರ ಶಾಸಕ
ನಾರಾ ಭರತ್ ರೆಡ್ಡಿ – ಬಳ್ಳಾರಿ ನಗರ ಶಾಸಕ
ಪ್ರಕಾಶ್ ಕೋಳಿವಾಡ, ರಾಣೇಬೆನ್ನೂರು ಶಾಸಕ
ಬಿ.ಬಿ. ಚಿಮ್ಮನಕಟ್ಟಿ, ಬದಾಮಿ ಶಾಸಕ
ಬಾಬಸಾಹೇಬ್ ಪಾಟೀಲ್, ಕಿತ್ತೂರು ಶಾಸಕ
ವಿಶ್ವಾಸ್ ವೈದ್ಯ, ಸವದತ್ತಿ ಯಲ್ಲಮ್ಮ ಶಾಸಕ
ಮಹೇಂದ್ರ ತಮ್ಮಣ್ಣನವರ್, ಕುಡಚಿ ಶಾಸಕ
ಉದಯ್ ಗೌಡ, ಮದ್ದೂರು ಶಾಸಕ
ಚನ್ನಾರೆಡ್ಡಿ ಪಾಟೀಲ್, ಯಾದಗಿರಿ ಶಾಸಕ
ವೇಣುಗೋಪಾಲ್ ನಾಯ್ಕ್, ಸುರಪುರ ಶಾಸಕ

