ಚಂಡೀಗಢ: ತರ್ನ್ ತರನ್ ಜಿಲ್ಲೆಯ ಟೂಟ್ ಗ್ರಾಮದ ಎಎಪಿಯ ಸರಪಂಚ್ವೊಬ್ಬರನ್ನು (AAP Sarpanch) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಅಶ್ವನಿ ಕುಮಾರ್ ಅವರು ಕಾರು ಚಾಲಕ, ಮಗ ಮತ್ತು ಲೆಕ್ಕಿಗನೊಂದಿಗೆ ‘ಇನ್ನೋವಾ’ ವಾಹನದಲ್ಲಿ ಟೂಟ್ನ ದಾನ ಮಂಡಿಯತ್ತ ಪ್ರಯಾಣಿಸುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ಜಿಮ್ ಟ್ರೈನರ್ ನಂದನ್ ಕೊಲೆ ಕೇಸ್ – ಸಲಿಂಗಕಾಮ, ಡ್ರಗ್ಸ್ ನಶೆಯಲ್ಲಿ ಕೃತ್ಯ?
ಗುಂಡಿನ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ಅಶ್ವನಿ ಕುಮಾರ್ ಅವರನ್ನು ತಕ್ಷಣವೇ ಪಟ್ಟಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ.
ಅವರ ಸಹಾಯಕ ಚಮ್ಕೌರ್ ಸಿಂಗ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಕಾರಿಗೆ ಟ್ರಕ್ ಡಿಕ್ಕಿ – ತೆಲಂಗಾಣ ಮೂಲದ ಮಹಿಳೆ ಸಾವು
ಕೆಲದಿನಗಳ ಹಿಂದಷ್ಟೇ ಲುಧಿಯಾನದಲ್ಲಿ ಮಾನೆವಾಲ್ ಗ್ರಾಮದ ಮಾಜಿ ಸರಪಂಚ್ ನವತೇಜ್ ಸಿಂಗ್ ಅವರನ್ನು ಇದೇ ರೀತಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅವರು ಮನೆಗೆ ಮರಳುತ್ತಿದ್ದಾಗ, ಬೈಕ್ನಲ್ಲಿದ್ದ ಇಬ್ಬರು ವ್ಯಕ್ತಿಗಳು ಅವರ ‘ಇನ್ನೋವಾ’ (Innova) ಕಾರನ್ನು ಅಡ್ಡಗಟ್ಟಿ ಕನಿಷ್ಠ 10 ಸುತ್ತು ಗುಂಡು ಹಾರಿಸಿದ್ದರು. ಈ ಗುಂಡಿನ ದಾಳಿಯ ದೃಶ್ಯವು ಎಸ್ಯುವಿ (SUV) ವಾಹನದ ಡ್ಯಾಶ್ಕ್ಯಾಮ್ನಲ್ಲಿ ದಾಖಲಾಗಿತ್ತು.

