ನವದೆಹಲಿ: ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಲ್ಲಿ (IDFC First Bank) 590 ಕೋಟಿ ರೂ. ವಂಚನೆ ನಡೆದಿದೆ. ವಂಚನೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬ್ಯಾಂಕಿನ ಷೇರು ಮೌಲ್ಯ 13.42 ರೂ.(ಶೇ.16.70) ಇಳಿಕೆಯಾಗಿದೆ.
ಹರ್ಯಾಣ ಸರ್ಕಾರದ (Haryana Government) ಇಲಾಖೆಯ ಖಾತೆಯಲ್ಲಿ ವಂಚನೆ ನಡೆದಿದ್ದು ಈಗ ಬ್ಯಾಂಕ್ ತನಿಖೆ ಆರಂಭಿಸಿದೆ. ಸರ್ಕಾರ ಇಲಾಖೆಯ ಪುಸ್ತಕದಲ್ಲಿರುವ ಮೊತ್ತಕ್ಕೂ ಬ್ಯಾಂಕಿನಲ್ಲಿರುವ ಬ್ಯಾಲೆನ್ಸ್ ಮೊತ್ತಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ.
ಸರಿಯಾಗಿ ಹೊಂದಾಣಿಕೆಯಾಗದ ಕಾರಣ ಇಲಾಖೆ ಬ್ಯಾಂಕ್‌ನಲ್ಲಿರುವ ಖಾತೆಯನ್ನೇ ಮುಚ್ಚಿ ಬೇರೆ ಕಡೆ ವರ್ಗಾಯಿಸುವಂತೆ ಮನವಿ ಮಾಡಿದಾಗ ವಂಚನೆಯ ವಾಸನೆ ಬಡಿದಿದೆ.
ಫೆಬ್ರವರಿ 18 ರಿಂದ ಇನ್ನೂ ಹಲವಾರು ಹರಿಯಾಣದ ಸರ್ಕಾರಿ ಇಲಾಖೆಗಳು ನಮ್ಮ ಖಾತೆಯಲ್ಲೂ ಇದೇ ರೀತಿ ಸಮಸ್ಯೆಯಾಗಿದೆ ಎಂದು ದೂರು ನೀಡಿವೆ. ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿ ಪರಿಶೀಲನೆ ನಡೆಸಿದಾಗ ಸುಮಾರು 590 ಕೋಟಿ ರೂ. ಅಕ್ರಮ ನಡೆದಿರುವುದು ಗೊತ್ತಾಗಿದೆ. ಇದನ್ನೂ ಓದಿ: ಭಾರತ್ ಟ್ಯಾಕ್ಸಿಯಲ್ಲಿ ಚಾಲಕರೇ ಮಾಲೀಕರು, 80% ಆದಾಯ ಚಾಲಕರಿಗೆ: ಅಮಿತ್ ಶಾ
#WATCH | Chandigarh: On Rs 590 cr fraud at IDFC First Bank, Haryana CM Nayab Singh Saini says, “We have been proactive in catching this fraud… When some glitches were noted, we asked for statements, and those, too, did not match. Therefore, the government decided to transfer… pic.twitter.com/HUD7CJzjrO
— ANI (@ANI) February 23, 2026
ಅಕ್ರಮ ನಡೆದ ಬೆನ್ನಲ್ಲೇ ಬ್ಯಾಂಕ್ ಸೆಬಿಗೆ (SEBI) ಪತ್ರ ಬರೆದು ಸುಮಾರು 590 ಕೋಟಿ ರೂ. ಅಕ್ರಮ ನಡೆದಿರುವುದು ಆಂತರಿಕ ಮೌಲ್ಯಮಾಪನದಲ್ಲಿ ಪತ್ತೆಯಾಗಿದೆ. ಚಂಡೀಗಢದ ಒಂದು ನಿರ್ದಿಷ್ಟ ಶಾಖೆಯ ಕೆಲವು ಉದ್ಯೋಗಿಗಳಿಂದ ಈ ಅಕ್ರಮ ನಡೆದಿದೆ. ಬೇರೆ ಎಲ್ಲೂ ಅಕ್ರಮ ನಡೆದಿಲ್ಲ ಎಂದು ಹೇಳಿದೆ. ಇದನ್ನೂ ಓದಿ: ಚಿನ್ನದ ಬೆಲೆಯನ್ನು ಆರ್‌ಬಿಐ ಮೇಲ್ವಿಚಾರಣೆ ಮಾಡುತ್ತಿದೆ: ನಿರ್ಮಲಾ ಸೀತಾರಾಮನ್
ತನಿಖೆಯ ಸಮಯದಲ್ಲಿ ಹರಿಯಾಣ ಸರ್ಕಾರವು ಬ್ಯಾಂಕಿನೊಂದಿಗಿನ ಎಲ್ಲಾ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

