Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೇಶದ ಪಡಿತರ ವ್ಯವಸ್ಥೆಗೆ ಡಿಜಿಟಲ್ ಕರೆನ್ಸಿಯ ಸ್ಪರ್ಶ – ಪಾರದರ್ಶಕತೆಯತ್ತ ಕೇಂದ್ರದಿಂದ ಮತ್ತೊಂದು ದಿಟ್ಟ ಹೆಜ್ಜೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ದೇಶದ ಪಡಿತರ ವ್ಯವಸ್ಥೆಗೆ ಡಿಜಿಟಲ್ ಕರೆನ್ಸಿಯ ಸ್ಪರ್ಶ – ಪಾರದರ್ಶಕತೆಯತ್ತ ಕೇಂದ್ರದಿಂದ ಮತ್ತೊಂದು ದಿಟ್ಟ ಹೆಜ್ಜೆ

Latest

ದೇಶದ ಪಡಿತರ ವ್ಯವಸ್ಥೆಗೆ ಡಿಜಿಟಲ್ ಕರೆನ್ಸಿಯ ಸ್ಪರ್ಶ – ಪಾರದರ್ಶಕತೆಯತ್ತ ಕೇಂದ್ರದಿಂದ ಮತ್ತೊಂದು ದಿಟ್ಟ ಹೆಜ್ಜೆ

Public TV
Last updated: February 15, 2026 7:31 pm
Public TV
Share
4 Min Read
Central Bank Digital Currency based Public Distribution System Launched in Gujarat Pralhad Joshi 3
SHARE

– ಸಾಮಾಜಿಕ ವಲಯದಲ್ಲಿ ಡಿಜಿಟಲ್ ಕರೆನ್ಸಿ ಬಳಕೆ ಇದೇ ಮೊದಲು
– ಆರ್‌ಬಿಐ ಸಹಭಾಗಿತ್ವದಲ್ಲಿ ಪ್ರಥಮವಾಗಿ ಗುಜರಾತ್‌ನಲ್ಲಿ ಜಾರಿ
– ಜೋಶಿ ಕಾರ್ಯ ವೈಖರಿ ಹಾಡಿ ಹೊಗಳಿದ ಅಮಿತ್ ಶಾ

ನವದೆಹಲಿ: ಪಾರದರ್ಶಕತೆ ಮತ್ತು ತ್ವರಿತ ಸೇವೆಗಾಗಿ ಡಿಜಿಟಲೀಕರಣಕ್ಕೆ ಒತ್ತು ನೀಡಿರುವ ಕೇಂದ್ರ ಸರ್ಕಾರ (Union Government) ಇದೀಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಡಿಜಿಟಲೀಕರಣದ ಮಹತ್ಸಾಧನೆಗೆ ಹೊಸದೊಂದು ಮುನ್ನುಡಿ ಬರೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ(Pralhad Joshi) ಅವರ ದೂರದೃಷ್ಠಿಯಂತೆ ಈಗಾಗಲೇ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’, ಅನ್ನ ಚಕ್ರ ಹೀಗೆ ವಿವಿಧ ಮಹತ್ವದ ಕಾರ್ಯಕ್ರಮ ಅನುಷ್ಠಾನಕ್ಕಿಳಿದ ಕೇಂದ್ರ ಸರ್ಕಾರ, ಇದೀಗ ಇದೇ ಮೊದಲ ಬಾರಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತವಾಗಿ “ಡಿಜಿಟಲ್ ಆಹಾರ ಕೂಪನ್” ವ್ಯವಸ್ಥೆ ರೂಪದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.

ಕಳೆದ ಕೆಲ ವರ್ಷಗಳಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ದೇಶದಲ್ಲಿ ಪಡಿತರ ವ್ಯವಸ್ಥೆಯ ಸಮಗ್ರ ಡಿಜಿಟಲ್ ರೂಪಾಂತರ ಕೈಗೊಂಡಿದ್ದು, ಪಾರದರ್ಶಕತೆ, ಪೋರ್ಟಬಿಲಿಟಿ ವ್ಯವಸ್ಥೆ ಪಡಿತರ ವಿತರಣೆಯನ್ನು ಅತ್ಯಂತ ಪಾರದರ್ಶಕ ಮತ್ತು ತ್ವರಿತಗೊಳಿಸಿದೆ.

ಇದೀಗ ಜೋಶಿ ಅವರ ನೇತೃತ್ವದಲ್ಲಿ ಸಾಮಾಜಿಕ-ಸಾರ್ವತ್ರಿಕ ವಲಯದ ಯೋಜನೆಯಲ್ಲಿ ಇದೇ ಮೊದಲ ಬಾರಿ ಡಿಜಿಟಲ್ ಕರೆನ್ಸಿ (Digital Currency) ಬಳಸುವ ಮತ್ತೊಂದು ಹೊಸ ಪರಿವರ್ತನಾ ಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತವಾಗಿ ‘ಡಿಜಿಟಲ್ ಆಹಾರ ಕರೆನ್ಸಿ’ ವಿನೂತನ ವ್ಯವಸ್ಥೆ ಜಾರಿಗೊಳಿಸಿದೆ.  ಇದನ್ನೂ ಓದಿ: ತಾರಿಕ್ ರೆಹಮಾನ್ ಪ್ರಮಾಣವಚನದಲ್ಲಿ ಭಾಗಿಯಾಗಲಿದ್ದಾರೆ ಓಂ ಬಿರ್ಲಾ

Central Bank Digital Currency based Public Distribution System Launched in Gujarat Pralhad Joshi 1

ಇದರಿಂದ ನ್ಯಾಯ ಬೆಲೆ ಅಂಗಡಿಯವರಿಗೆ ತತ್ ಕ್ಷಣವೇ ಕಮಿಷನ್ ಹಂಚಿಕೆ, ಫಲಾನುಭವಿಗಳಿಗೆ ಕ್ಷಣಾರ್ಧದಲ್ಲೇ ರೇಷನ್ ವಿತರಣೆ…ಹೀಗೆ ಪಡಿತರದ ಸಂಪೂರ್ಣ ವ್ಯವಸ್ಥೆ ಡಿಜಿಟಲ್ ಕರೆನ್ಸಿಗೆ ರೂಪಾಂತರವಾಗಿ ಪಾರದರ್ಶಕತೆಯತ್ತ ಇಟ್ಟ ದಿಟ್ಟ ಹೆಜ್ಜೆಯಾಗಿ ಗುರುತಿಸಿಕೊಳ್ಳುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪಾತ್ರವೂ ಇದರಲ್ಲಿ ಅಡಕವಾಗಿದೆ ಎಂಬುದು ಮತ್ತೊಂದು ವಿಶೇಷ.

ಗುಜರಾತ್ ನಲ್ಲಿ ಶುರು: ಕೇಂದ್ರ ಸರ್ಕಾರ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತ ‘ಡಿಜಿಟಲ್ ಆಹಾರ ಕರೆನ್ಸಿ’ ವಿನೂತನ ವ್ಯವಸ್ಥೆಯನ್ನು ಇಂದಿನಿಂದ ಪ್ರಥಮವಾಗಿ ಗುಜರಾತ್‌ನಲ್ಲಿ ಆರಂಭಿಸಿದೆ. ಅಹಮದಾಬಾದ್ ಅಲ್ಲಿ ಭಾನುವಾರ ಗೋಲ್ CBDC-ಆಧಾರಿತ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹಾಗೂ ಆಹಾರ ಮತ್ತು ಜೋಶಿ ಅವರ ಸಮ್ಮುಖದಲ್ಲಿ ಚಾಲನೆ ಸಿಕ್ಕಿದೆ,

ಸದ್ಯಕ್ಕೆ ಎಲ್ಲೆಲ್ಲಿ ಯೋಜನೆ?: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಗುಜರಾತ್ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸದ್ಯಕ್ಕೆ ಮೊದಲನೇ ಹಂತದಲ್ಲಿ ಅಹಮದಾಬಾದ್, ಆನಂದ್, ದಾಹೋದ್ ಮತ್ತು ಸಬರಮತಿ ಜಿಲ್ಲೆಗಳಲ್ಲಿ ಈ ‘ಡಿಜಿಟಲ್ ಆಹಾರ ಕರೆನ್ಸಿ’ ಪ್ರಾರಂಭವಾಗಿದೆ. ಮುಂದಿನ ಹಂತದಲ್ಲಿ ಪುದುಚೇರಿ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ಜೋಶಿ ಇದೆ ವೇಳೆ ಘೋಷಿಸಿದರು.

ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ವಿತರಣೆ ಇದೇ ಮೊದಲು: ಸಿಬಿಡಿಸಿ ಆಧಾರಿತ ವ್ಯವಸ್ಥೆಯಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ವಿತರಣೆ ದೇಶದ ಇತಿಹಾಸದಲ್ಲಿ ಇದೇ ಮೊದಲು. ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗಳಿಗೆ ಪ್ರೋಗ್ರಾಮೆಬಲ್ ಡಿಜಿಟಲ್ ಕರೆನ್ಸಿಯಾಗಿ ನೇರವಾಗಿ ಜಮಾ ಮಾಡಲಾಗುತ್ತದೆ. ಇದನ್ನು ಪಿಡಿಎಸ್ ಅಡಿಯಲ್ಲಿ ಆಹಾರ ಧಾನ್ಯ ಖರೀದಿಸಲು ಸಹ ಬಳಸಬಹುದು. ಇದು ನೈಜ-ಸಮಯದ ಮೇಲ್ವಿಚಾರಣೆ ಮತ್ತು ಸುರಕ್ಷಿತ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೆ, ಯಾವುದೇ ಅವ್ಯವಹಾರಕ್ಕೂ ಅಸ್ಪದವಾಗುವುದಿಲ್ಲ ಎಂದು ಜೋಶಿ ವಿವರಿಸಿದರು.

Central Bank Digital Currency based Public Distribution System Launched in Gujarat Pralhad Joshi 2

QR-ಕೂಪನ್ ಕೋಡ್: ಪಡಿತರ ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗಳು ಪ್ರೋಗ್ರಾಮೆಬಲ್ ಡಿಜಿಟಲ್ ರೂಪಾಯಿ ಹೊಂದಿರುತ್ತವೆ. ಫಲಾನುಭವಿಗಳ ಅನುಕೂಲಕ್ಕಾಗಿ ಪಿಡಿಎಸ್ ಅಡಿ ಆಹಾರ ಧಾನ್ಯ ಖರೀದಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ತಡೆರಹಿತ QR ಕೋಡ್, ಕೂಪನ್ ಕೋಡ್ ಆಧಾರಿತ ವಹಿವಾಟನ್ನು ಸಕ್ರಿಯಗೊಳಿಸುತ್ತದೆ ಎಂದರು.

ಡಿಜಿಟಲ್ ಆಹಾರ ಕರೆನ್ಸಿ ಪ್ರಯೋಜನ ಏನು?
ಇದು ವಲಸೆ ಬಂದ ಜನಸಂಖ್ಯೆಯುಳ್ಳ ರಾಜ್ಯಗಳಲ್ಲಿ ಸರಾಗವಾಗಿ ಹಕ್ಕು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಸ್ಮಾರ್ಟ್ ಫೋನ್ ಮೂಲಕ QR CODE ಬಳಸಿ ಹಾಗೂ ನಾರ್ಮಲ್ ಫೋನ್ ಗಳಲ್ಲಿ 10 digit code ಬಳಸಿ ಸಹ ಪಡಿತರ ವಿತರಣೆ ಸಾಧ್ಯವಾಗುತ್ತದೆ.

ಆಧಾರ್-ಸಕ್ರಿಯಗೊಳಿಸಿದ ದೃಢೀಕರಣ ಮತ್ತು ನೈಜ-ಸಮಯದ ವಹಿವಾಟು, ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಿಒಎಸ್ ಸಾಧನಗಳ ನಿಯೋಜನೆ, ಪಡಿತರ ವಿತರಣೆಯಲ್ಲಿ ಪಾರದರ್ಶಕತೆ. ಸಾರಿಗೆ ವೆಚ್ಚ ಕಡಿಮೆತಾಗುತ್ತದೆ ಮತ್ತು ಕುಂದುಕೊರತೆ ಪರಿಹಾರ, ತ್ವರಿತ ಸ್ಪಂದನೆ, ಹೊಣೆಗಾರಿಕೆ ಮತ್ತು ನಾಗರಿಕ-ಕೇಂದ್ರಿತ ಸೇವಾ ವಿತರಣೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಅಮಿತ್ ಶಾ ಶ್ಲಾಘನೆ
ಈ ನೂತನ CBDC ಆಧಾರಿತ “ಡಿಜಿಟಲ್ ಆಹಾರ ಕೂಪನ್” ವ್ಯವಸ್ಥೆಗೆ ಚಾಲನೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ದೇಶದ ಕೋಟ್ಯಂತರ ಕಡುಬಡವರಿಗೆ ತ್ವರಿತವಾಗಿ ಪಡಿತರ ತಲುಪಿಸುವ ಜತೆಗೆ ದೇಶಾದ್ಯಂತ ಪಡಿತರ ವ್ಯವಸ್ಥೆಯನ್ನು ಅತ್ಯಂತ ಪರಾದರ್ಶಕೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿರಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ನಿಮುಬೆನ್ ಜಯಂತಿಭಾಯಿ, ಗುಜರಾತ್‌ ಡಿಸಿಎಂ ಹರ್ಷ ಸಂಘವಿ; ಗುಜರಾತ್‌ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಮಣಭಾಯಿ ಭಿಕಾಬಾಯಿ ಸೋಲಂಕಿ, ರಾಜ್ಯ ಸಚಿವ ಪೂನಮಚಂದ್ ಛಾನಾಭಾಯಿ, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೋನಾ ಖಂಡರ್; ಆರ್‌ಬಿಐ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಾಸುದೇವನ್, ಗಾಂಧಿನಗರದ ಮೇಯರ್ ಮೀರಬೆನ್ ಪಟೇಲ್ ಇತರ ಗಣ್ಯರಿದ್ದರು.

TAGGED:CBDCdigital currencyindiaPralhad Joshiಗುಜರಾತ್ಡಿಜಿಟಲ್‌ ಕರೆನ್ಸಿಪ್ರಹ್ಲಾದ್ ಜೋಶಿಭಾರತ
Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಈಗ ಗರ್ಭಿಣಿ
Cinema Latest Main Post National
Ranya Rao
ಇಂದಿಗೆ ಕಾಫಿಫೋಸಾ ಅವಧಿ ಅಂತ್ಯ – ಜೈಲಿನಿಂದ ರನ್ಯಾರಾವ್‌ ಬಿಡುಗಡೆ
Cinema Crime Karnataka Latest Main Post
ranya rao 2 1
ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಇಂದು ರನ್ಯಾ ರಾವ್ ಜೈಲಿನಿಂದ ರಿಲೀಸ್
Bengaluru City Cinema Districts Karnataka Latest Top Stories
Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories

You Might Also Like

PETROL
Latest

ಪೆಟ್ರೋಲ್, ಡೀಸೆಲ್ ದರ ಏರಿಕೆಯ ಚಿಂತನೆ ಇಲ್ಲ – ವದಂತಿಗಳಿಗೆ ಬ್ರೇಕ್ ಹಾಕಿದ ಕೇಂದ್ರ ಸರ್ಕಾರ

Public TV
By Public TV
37 seconds ago
bad touch for young women 2 arrested in bengaluru
Bengaluru City

ಬೈಕ್‌ಲ್ಲಿ ಬಂದು ಯುವತಿಯರಿಗೆ ಬ್ಯಾಡ್ ಟಚ್ – ಬೀದಿ ಕಾಮಣ್ಣರು ಅಂದರ್‌

Public TV
By Public TV
11 minutes ago
thaad
Latest

ಅಮೆರಿಕ ಬಳಿಯಿದ್ದ 50% ಕ್ಷಿಪಣಿಗಳು ಖಾಲಿ – ಯುದ್ಧ ಮುಂದುವರಿದರೆ ʻದೊಡಣ್ಣʼನಿಗೆ ಆಪತ್ತು!

Public TV
By Public TV
12 minutes ago
Kolar SSLC Student Kusuma
Districts

ಸ್ಟ್ರೆಚರ್‌ನಲ್ಲಿ ಮಲಗಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿ ಕುಸುಮಾ ಫಸ್ಟ್ ಕ್ಲಾಸ್‌ನಲ್ಲಿ ಪಾಸ್

Public TV
By Public TV
22 minutes ago
SIDDAPURA DEATH
Crime

ಷೇರು ಮಾರುಕಟ್ಟೆಯಲ್ಲಿ ಲಕ್ಷ ಲಕ್ಷ ಲಾಸ್‌ – ನೇಣಿಗೆ ಶರಣಾದ ಯುವಕ

Public TV
By Public TV
24 minutes ago
hindi
Bengaluru City

ಹಿಂದಿಯಲ್ಲಿ ಕಳೆದ ವರ್ಷ 75 ಸಾವಿರ, ಈ ಬಾರಿ 9,481 ಮಂದಿ ಫೇಲ್‌

Public TV
By Public TV
42 minutes ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?