ಮೈಸೂರು: ಸರ್ಕಾರಿ ಬಸ್ ಬ್ರೇಕ್ ಫೇಲ್ (Brake Failure) ಆಗಿ ಸರಣಿ ಅಪಘಾತ ಸಂಭವಿಸಿದ ಘಟನೆ ಮೈಸೂರಿನ (Mysuru) ನಗರ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.
ನಗರ ಸಾರಿಗೆ ಬಸ್‌ಗಳು ಹಾಗೂ ಆಟೋ ನಡುವೆ ಸರಣಿ ಅಪಘಾತ ನಡೆದಿದ್ದು, ಅಪಘಾತದಲ್ಲಿ ಎರಡು ಬಸ್ ಹಾಗೂ ಒಂದು ಆಟೋ ಜಖಂಗೊಂಡಿದೆ. ಬ್ರೇಕ್ ಫೇಲ್ ಆದ ಪರಿಣಾಮ ಒಂದು ಬಸ್ ಇನ್ನೊಂದು ಬಸ್‌ಗೆ ಗುದ್ದಿದೆ. ನಂತರ ಮುಂದೆ ಹೋಗುತ್ತಿದ್ದ ಆಟೋಗೆ ನಗರ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್: ಗಣಿಗ ರವಿಕುಮಾರ್ ವ್ಯಂಗ್ಯ
ಅಪಘಾತದಿಂದ ವಾಹನಗಳು ಸ್ಥಳದಲ್ಲೇ ಜಖಂ ಆಗಿ ನಿಂತಿವೆ. ಅಪಘಾತದ ಘಟನೆಯಿಂದ ಸ್ಥಳದಲ್ಲಿ ವಾಹನ ಸಂಚಾರ ಬಂದ್ ಆಗಿದೆ. ಇದನ್ನೂ ಓದಿ: ಮೆಟ್ರೋ ಸ್ಲ್ಯಾಬ್ ಕುಸಿದು ಓರ್ವ ಸಾವು – ಐವರು ಅರೆಸ್ಟ್, ಗುತ್ತಿಗೆದಾರರಿಗೆ 6 ಕೋಟಿ ದಂಡ

