ನವದೆಹಲಿ: ಜಗತ್ತಿನ ದೈತ್ಯ ತಂತ್ರಜ್ಞಾನ ಕಂಪನಿಯಾದ ಮೈಕ್ರೋಸಾಫ್ಟ್ (Microsoft) ಇದ್ದಕ್ಕಿದ್ದಂತೆ ಸೇವಾ ಸ್ಥಗಿತ ಸಮಸ್ಯೆ ಅನುಭವಿಸಿದೆ.
ನಿನ್ನೆ (ನ.12) ಮಧ್ಯರಾತ್ರಿಯಿಂದ ಆರಂಭವಾಗಿರುವ ಮೈಕ್ರೋಸಾಫ್ಟ್ ಸಿಸ್ಟಮ್ ವೈಫಲ್ಯವು ಭಾರತ (India) ಸೇರಿದಂತೆ 74 ದೇಶಗಳಿಗೆ ಕಾಡ್ತಿದೆ. ಇದು ಸೈಬರ್ ದಾಳಿಯಲ್ಲ. ಬದಲಿಗೆ ಸರ್ವರ್ಗಳ ಮೇಲಿನ ಮಿತಿಮೀರಿದ ಒತ್ತಡ (ಎಲೆವೇಡೆಟ್ ಲೋಡ್) ಹಾಗೂ ಸಂರಚನೆ (ಕಾನ್ಫಿಗರೇಶನ್) ದೋಷದಿಂದ ಈ ಸಮಸ್ಯೆ ಉಂಟಾಗಿದೆ. ಇದರಿಂದ ಸರ್ವರ್ಗಳು ತಾವಾಗಿಯೇ ಸ್ಥಗಿತಗೊಂಡಿವೆ.ಇದನ್ನೂ ಓದಿ: ಎನ್ವಿಡಿಯಾ ಸಿಇಒ ರೇಸ್ನಲ್ಲಿದ್ದಾರೆ ಮೂವರು ಭಾರತೀಯ ಮೂಲದ ದಿಗ್ಗಜರು!
ಇಂಟರ್ನೆಟ್ ಹಾಗೂ ಯಾವುದೇ ಆನ್ಲೈನ್ ಸೇವೆ ಲಭ್ಯವಾಗ್ತಿಲ್ಲ. ಮೈಕ್ರೋಸಾಫ್ಟ್ ಔಟ್ಲುಕ್, ಮೈಕ್ರೋಸಾಫ್ಟ್ ಟೀಮ್ಸ್, ಮೈಕ್ರೋಸಾಫ್ಟ್ 365, ಶೇರ್ಪಾಯಿಂಟ್, ಕೋಪೈಲಟ್ ಸೇವೆಗಳಲ್ಲಿ ಜಗತ್ತಿನಾದ್ಯಂತ ಭಾರಿ ಸಮಸ್ಯೆ ಉಲ್ಬಣವಾಗಿದೆ. ಇ-ಮೇಲ್, ಮೀಟಿಂಗ್ ಆ್ಯಪ್ಗಳು, ವಿಮಾನ ಸೇವೆಗಳು ಸೇರಿದಂತೆ ಹಲವು ಸೇವೆಗಳು ಸ್ಥಗಿತಗೊಂಡಿವೆ.
ಲಕ್ಷಾಂತರ ಬಳಕೆದಾರರು ಡೌನ್ಡಿಟೆಕ್ಟರ್, ಔಟ್ಲುಕ್ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಅನೇಕ ಬಳಕೆದಾರರು ಇಮೇಲ್ಗಳನ್ನು ಕಳುಹಿಸಲು ಅಥವಾ ತೆರೆಯಲು ಸಾಧ್ಯವಾಗಲಿಲ್ಲ. ದೇಶದಲ್ಲಿ ಸ್ಪೈಸ್ಜೆಟ್ ದೆಹಲಿಯಿಂದ ತನ್ನ 3 ವಿಮಾನಗಳನ್ನು ರದ್ದುಗೊಳಿಸಿದೆ. ದೆಹಲಿ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ಸಲಹೆಯನ್ನು ನೀಡಿದ್ದು, ವಿಮಾನ ನಿಲ್ದಾಣಕ್ಕೆ ಹೊರಡುವ ಮೊದಲು ಅವರ ವಿಮಾನ ಸ್ಥಿತಿಯನ್ನು ಪರಿಶೀಲಿಸುವಂತೆ ಒತ್ತಾಯಿಸಿದೆ. ಇಂಡಿಗೋ, ಆಕಾಶ ಏರ್ ಸಹ ಪ್ರಯಾಣಿಕರಿಗೆ ಸಲಹೆಗಳನ್ನು ನೀಡಿವೆ.
