ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿಂದು ನಡೆದ ದಕ್ಷಿಣ ಆಫ್ರಿಕಾ (South Africa) ಹಾಗೂ ಅಫ್ಘಾನಿಸ್ತಾನ ನಡುವಿನ ಟಿ20 ವಿಶ್ವಕಪ್ (T20 World Cup) ಪಂದ್ಯವು ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಕ್ಷಣ ಕ್ಷಣಕ್ಕೂ ಅಭಿಮಾನಿಗಳ ಎದೆಬಡಿತ ಹೆಚ್ಚುತ್ತಲೇ ಇತ್ತು. ಕೊನೆಯವರೆಗೂ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ʻಡಬಲ್ ಸೂಪರ್ ಓವರ್ʼನಲ್ಲಿ 4 ರನ್‌ಗಳ ರೋಚಕ ಗೆಲುವು ಸಾಧಿಸಿತು. ಇತ್ತ ರಹಮಾನುಲ್ಲಾ ಗುರ್ಬಾಜ್ ಹ್ಯಾಟ್ರಿಕ್ ಸಿಕ್ಸರ್ ಹೊರತಾಗಿಯೂ ಅಫ್ಘಾನಿಸ್ತಾನ (Afghanistan) ವಿರೋಚಿತ ಸೋಲಿಗೆ ತುತ್ತಾಯಿತು.

ಹೇಗಿತ್ತು ʻಸೂಪರ್ ಸೂಪರ್ʼ ಓವರ್ ಥ್ರಿಲ್ಲಿಂಗ್?
ಮೊದಲು 188 ರನ್‌ಗಳ ಗುರಿ ಬೆನ್ನಟ್ಟಿದ್ದ ಅಫ್ಘಾನಿಸ್ತಾನ 19.4 ಓವರ್‌ಗಳಲ್ಲಿ 187 ರನ್ ಗಳಿಸಿ ಟೈ ಮಾಡಿಕೊಂಡಿತು. ಮೊದಲ ಸೂಪರ್ ಓವರ್‌ನಲ್ಲಿ (Super Over) ಅಜ್ಮತ್ತುಲ್ಲ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಅಫ್ಘಾನ್ 17 ರನ್ ಗಳಿಸಿತು. 18 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಓವರ್ ಕೊನೇ ಎಸೆತದಲ್ಲಿ ಗೆಲುವಿಗೆ 7 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ಟ್ರಿಸ್ಟನ್ ಸ್ಟಬ್ಸ್ (Tristan Stubbs) ಫಜಲ್ಹಕ್ ಫಾರೂಕಿ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನ ಟೈ ಮಾಡಿದ್ರು. ಇದನ್ನೂ ಓದಿ: RCB ಗೆ ಬಿಗ್ ಶಾಕ್ – ಎನ್‌ಒಸಿ ನಿರಾಕರಿಸಿದ ಎಂಸಿಎ; ಬೆಂಗಳೂರಲ್ಲೇ ಐಪಿಎಲ್ ಉದ್ಘಾಟನೆ ಫಿಕ್ಸಾ?

2ನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ 23 ರನ್ ಬಾರಿಸಿತು. 400 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಡೇವಿಡ್ ಮಿಲ್ಲರ್ (David Miller) 4 ಎಸೆತಗಳಲ್ಲಿ 16 ರನ್ ಗಳಿಸಿದ್ರೆ, ಸ್ಟಬ್ಸ್ 2 ಎಸೆತಗಳಲ್ಲಿ 7 ರನ್ ಚಚ್ಚಿದ್ರು. 24 ರನ್ ಗುರಿ ಬೆನ್ನಟ್ಟಿದ ಅಫ್ಘಾನ್ ಪರ ಮೊಹಮ್ಮದ್ ನಬಿ, ಅಜ್ಮತ್ತುಲ್ಲ ಕ್ರೀಸ್‌ಗಿಳಿದಿದ್ದರು. ಮೊದಲ ಎಸೆತದಲ್ಲಿ ಯಾವುದೇ ರನ್ ಕದಿಯದ ನಬಿ 2ನೇ ಎಸೆತದಲ್ಲಿ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದ್ರು. ಬಳಿಕ ಕ್ರೀಸ್‌ಗೆ ಬಂದ ಗುರ್ಬಾಜ್ ಸತತ 3 ಎಸೆತಗಳನ್ನೂ ಸಿಕ್ಸರ್‌ಗಟ್ಟಿದರು. ಅಲ್ಲದೇ ಬೌಲಿಂಗ್‌ನಲ್ಲಿದ್ದ ಕೇಶವ್ ಮಹಾರಾಜ್ 6ನೇ ಎಸೆತದಲ್ಲಿ ವೈಡ್ ಕೊಡ ಕೊಟ್ಟಿದ್ದರು. ಇನ್ನೇನು ಅಫ್ಘಾನ್ ಗೆದ್ದೇಬಿಟ್ಟಿತು ಅನ್ನುವಷ್ಟರಲ್ಲಿ ಫಲಿತಾಂಶವೇ ತಲೆಕೆಳಗಾಯಿತು. ಕೊನೇ ಎಸೆತದಲ್ಲಿ ಬೌಂಡರಿ ಸಿಡಿಸಲು ಯತ್ನಿಸಿ ಗುರ್ಬಾಜ್ ಕ್ಯಾಚ್ ನೀಡಿ ಔಟಾದರು. ದಕ್ಷಿಣ ಆಫ್ರಿಕಾ ರೋಚಕ 4 ರನ್ ಜಯ ಸಾಧಿಸಿತು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತ್ತು. 188 ರನ್ ಗುರಿ ಬೆನ್ನಟ್ಟಿದ್ದ ಅಫ್ಘಾನ್ 19.4 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಪಾಕ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ – ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು

