ಮಡಿಕೇರಿ: 2018 ರಿಂದ ಕೊಡಗು (Kodagu) ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಗಳು ನಡೆಯುತ್ತಲೇ ಇವೆ. ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನ ಪರಿಸರದ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ಭೂಗರ್ಭ ಶಾಸ್ತ್ರಜ್ಞರು ಕಾಲಕಾಲಕ್ಕೆ ವರದಿ ನೀಡುತ್ತಲೇ ಬಂದಿದ್ದರೂ, ಕೆಲವರ ದುರಾಸೆಯಿಂದ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ.
ಹೌದು. ಕೆಲ ದಿನಗಳಿಂದ ವಿರಾಜಪೇಟೆ (Virajpete) ತಾಲ್ಲೂಕಿನ ಅಂಬಟ್ಟಿ ಬೆಟ್ಟದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಅಟ್ಟಹಾಸ ಮಿತಿ ಮೀರಿದೆ. ರೆಸಾರ್ಟ್ ಹಾಗೂ ವಿಲ್ಲಾಗಳ ನಿರ್ಮಾಣಕ್ಕಾಗಿ ಯಾವುದೇ ಇಲಾಖೆ ಅನುಮತಿ ಪಡೆಯದೇ ಬೃಹತ್ ಬೆಟ್ಟವನ್ನ ಬಗೆದು, ಬೆಟ್ಟದ ಬುಡದಲ್ಲೇ ಡೈನಮೈಟ್ ಸ್ಫೋಟಿಸಲಾಗಿತ್ತು. ಬೆಟ್ಟದ ಮೇಲಿನಿಂದ ಹರಿಯುತ್ತಿದ್ದ ನೀರಿನ ಮೂಲವನ್ನೇ ಬಂದ್ ಮಾಡಿರುವ ಆರೋಪ ಕೇಳಿಬಂದಿತ್ತು. ಇದರಿಂದ ಮಳೆಗಾಲದಲ್ಲಿ ಭಾರೀ ಭೂ ಕುಸಿತ ಸಂಭವಿಸುವ ಆತಂಕ ಕೂಡ ಎದುರಾಗಿದ್ದು, ಅವೈಜ್ಞಾನಿಕ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು.
ಇದರ ಮುಂದುವರೆದ ಭಾಗವಾಗಿ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ 1ನೇ ಮೊಣ್ಣಗೇರಿ ಗ್ರಾಮದಲ್ಲಿ ವೈದ್ಯರೋಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇದ್ದ ಸುಮಾರು 14 ಮರಗಳನ್ನ ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಮರಗಳ ಮಾರಣಹೋಮವನ್ನ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ಭದ್ರತಾ ಲೋಪ – ರನ್‌ವೇಗೆ ನುಗ್ಗಿದ ಬೀದಿನಾಯಿಗಳು!
ಶಾಮ್ ಅಪ್ಪಣ್ಣ ಎಂಬ ವೈದ್ಯರು ತಮ್ಮಗೆ ಇರುವ 2 ಎಕರೆ ಜಾಗದಲ್ಲಿ ರೆಸಾರ್ಟ್ ನಿರ್ಮಾಣ ಮಾಡಬೇಕು ಎಂಬ ಉದ್ದೇಶದಿಂದ 14 ಮರಗಳನ್ನು ಕಡಿದು ನಾಶ ಮಾಡಿದ್ದಾರೆ. ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಆದಿಕಾರಿಗಳು ಅನುಮತಿ ಪಡೆಯದೇ ಮರಗಳ ಮಾರಣಹೋಮ ನಡೆಸಿದ್ದಾರೆ ಎಂದು ಜಾಗದ ಮಾಲೀಕ ಶ್ಯಾಮ್ ಅಪ್ಪಣ್ಣ ಹಾಗೂ ವಿನಯ್ ಎಂಬುವವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಸಣ್ಣ ಗುತ್ತಿಗೆದಾರರಿಂದ ಕಮಿಷನ್ – ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಜಗನ್ನಾಥ್ ಶೇಗಜಿ ಅಮಾನತು




