ಟೆಲ್ ಅವಿವ್: ಲೆಬನಾನ್(Lebanon) ಮೇಲೆ ಕೇವಲ 10 ನಿಮಿಷಗಳಲ್ಲಿ ಇಸ್ರೇಲ್ (Isreal) ವಾಯುಪಡೆ 100 ಕ್ಷಿಪಣಿ ದಾಳಿ ನಡೆಸಿದೆ. ಇದನ್ನು ಈ ಯುದ್ಧದ ಅತ್ಯಂತ ದೊಡ್ಡ ಸಂಘಟಿತ ದಾಳಿ ಎಂದು ಇಸ್ರೇಲ್ ಬಣ್ಣಿಸಿದೆ.
ರಾಜಧಾನಿ ಬೈರೂತ್ (Beirut) ಮಧ್ಯಭಾಗ, ಬೆಕಾ ವ್ಯಾಲಿ (Bekaa Valley) ಮತ್ತು ದಕ್ಷಿಣ ಲೆಬನಾನ್‌ನ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳು ಹಾಗೂ ಶಸ್ತ್ರಾಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಪಾಕಿಗೆ ಮುಖಭಂಗ – ಲೆಬನಾನ್ ಮೇಲೆ ದಾಳಿ ಮುಂದುವರಿಯಲಿದೆ ಎಂದ ಇಸ್ರೇಲ್
⚡️ 87 KILLED, 722 INJURED in preliminary toll from Israeli bombings across Lebanon today
Dozens feared trapped under rubble as rescue operations continue https://t.co/TfaiQeBxsk pic.twitter.com/QyCZL5zzLg
— RT (@RT_com) April 8, 2026
ಲೆಬನಾನ್ ಆರೋಗ್ಯ ಸಚಿವಾಲಯದ ವರದಿ ಪ್ರಕಾರ ಈ ಭೀಕರ ದಾಳಿಯಲ್ಲಿ ಕನಿಷ್ಠ 254 ಜನರು ಸಾವನ್ನಪ್ಪಿದ್ದಾರೆ ಮತ್ತು 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ (Ceasefire) ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿವುದು ವಿಶೇಷ. ಲೆಬನಾನ್ ಮೇಲಿನ ಕಾರ್ಯಾಚರಣೆಗೆ ಈ ಕದನ ವಿರಾಮ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕದನ ವಿರಾಮ ಘೋಷಣೆಯಲ್ಲೂ ಎಡವಟ್ಟು – ಈಗ ಪಾಕ್ ಪ್ರಧಾನಿ ಫುಲ್ ಟ್ರೋಲ್
As long as Hezbollah continues to threaten our civilians, we will continue to operate against them. pic.twitter.com/TD5VOGLcNO
— Israel Defense Forces (@IDF) April 8, 2026
ಇಸ್ರೇಲ್‌ನ ದಾಳಿಗಳಿಗೆ ಪ್ರತಿಯಾಗಿ ಹಿಜ್ಬುಲ್ಲಾ ಉಗ್ರ ಸಂಘಟನೆ(Hezbollah) ಕೂಡ ಉತ್ತರ ಇಸ್ರೇಲ್‌ನ ಸೇನಾ ನೆಲೆಗಳು ಮತ್ತು ಹೈಫಾ (Haifa) ತೈಲ ಸಂಸ್ಕರಣಾಗಾರದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಈ ಸಂಘರ್ಷದಿಂದಾಗಿ ಲೆಬನಾನ್‌ನಲ್ಲಿ ಈವರೆಗೆ 1,500ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

