Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬುಡಕಟ್ಟು ಸಂಪ್ರದಾಯದ ಕಾಡುಗೊಲ್ಲರ ಕ್ಯಾತಪ್ಪನ ಪರಿಷೆ – ಮುಳ್ಳಿನ ಗುಡಿಯಲ್ಲಿ ಆಚರಿಸುವ ವಿಶೇಷ ಜಾತ್ರೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chitradurga | ಬುಡಕಟ್ಟು ಸಂಪ್ರದಾಯದ ಕಾಡುಗೊಲ್ಲರ ಕ್ಯಾತಪ್ಪನ ಪರಿಷೆ – ಮುಳ್ಳಿನ ಗುಡಿಯಲ್ಲಿ ಆಚರಿಸುವ ವಿಶೇಷ ಜಾತ್ರೆ

Chitradurga

ಬುಡಕಟ್ಟು ಸಂಪ್ರದಾಯದ ಕಾಡುಗೊಲ್ಲರ ಕ್ಯಾತಪ್ಪನ ಪರಿಷೆ – ಮುಳ್ಳಿನ ಗುಡಿಯಲ್ಲಿ ಆಚರಿಸುವ ವಿಶೇಷ ಜಾತ್ರೆ

Public TV
Last updated: January 3, 2026 10:56 pm
Public TV
Share
2 Min Read
Chitradurga Kyathappana Parishe Tribal Tradition
SHARE

ಚಿತ್ರದುರ್ಗ: ಕಾಡುಗೊಲ್ಲರ ಪೂರ್ವ ಸಂಸ್ಕೃತಿಯನ್ನು ನೆನಪಿಸುವ ಕ್ಯಾತಪ್ಪನ ಜಾತ್ರೆಯನ್ನು ಹದಿನೈದು ದಿನಗಳ ಕಾಲ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪುರ್ಲಹಳ್ಳಿಯ ವಸಲುದಿಬ್ಬದ ಕಾವಲಿನಲ್ಲಿ ಪ್ರತಿ ವರ್ಷದ ಕೊನೆ ಹಾಗೂ ಆರಂಭದಲ್ಲಿ ಆಚರಿಸಲಾಗುತ್ತದೆ.

ಕ್ಯಾತಪ್ಪ ಚನ್ನಮ್ಮನಾಗತಿಹಳ್ಳಿಯಲ್ಲಿ ನೆಲೆಗೊಂಡಿರುವ ಕಾಡುಗೊಲ್ಲರ ದೈವ. ಕಾಡುಗೊಲ್ಲರ ಹದಿಮೂರು ಗುಡಿಕಟ್ಟಿನ ಬತ(ವ್ರತ) ಹಿಡಿದ ಅಣ್ಣ-ತಮ್ಮಗಳು, ಹೆಣ್ಣುಮಕ್ಕಳು, ಸೊಸೆಯಂದಿರು ಸೇರಿ, ಬಣ್ಣದ ಛತ್ರಿಕೆ, ಕೊಂಬು-ಕಹಳೆ, ಉರುಮೆಯ ನಡುವೆ ಹದಿನೈದು ದಿನಗಳವರೆಗೆ ನಿರಂತರವಾಗಿ ಆಚರಿಸುವ ವಿಶಿಷ್ಟ ಬುಡಕಟ್ಟು ಜಾತ್ರೆ ಇದಾಗಿದೆ.

ಕ್ಯಾತಪ್ಪನ ಜಾತ್ರೆಗೆ ‘ವ್ರತ’ ಹಿಡಿದವರ ಮನೆಯಲ್ಲಿ ಹುರುಳಿ-ನವಣೆ ಬಳಸುವಂತಿಲ್ಲ ಹಾಗೂ ಹುರುಳಿ ಮತ್ತು ನವಣೆ ಮನೆಯಲ್ಲಿ ಕಡ್ಡಾಯವಾಗಿ ಇರುವಂತಿಲ್ಲ. ಹಾಗೆಯೇ ಜಾತ್ರೆ ಮುಗಿಯುವವರೆಗೂ ಮಾಂಸಾಹಾರವನ್ನು ಬಳಸುವಂತಿಲ್ಲ. ಚನ್ನಮ್ಮನಾಗತಿಹಳ್ಳಿ ಕ್ಯಾತಪ್ಪನ ದೇವಸ್ಥಾನದಲ್ಲಿ ಹುರುಳಿ ಬೇಯಿಸಿ ದೇವರಿಗೆ ನೈವೈದ್ಯ ಮಾಡಿ, ಎಲ್ಲರಿಗೂ ಹಂಚಿದ ನಂತರ ವ್ರತ ಬಿಡಿಸುತ್ತಾರೆ.

Chitradurga Kyathappana Parishe Tribal Tradition 1

ಅದೇ ದಿನ ಆಯಾ ಗುಡಿಕಟ್ಟಿನ ಅಣ್ಣ-ತಮ್ಮಂದಿರ ಮನೆಯಲ್ಲಿ ಹುರುಳಿತೊಕ್ಕು ಮತ್ತು ಬೆಲ್ಲದ ಹಾಲನ್ನು ಮಾಡಿ, ನೆಂಟರಿಗೆ ಮೊದಲು ಊಟ ಹಾಕಿದ ನಂತರ ವ್ರತ ಬಿಡಿಸುತ್ತಾರೆ. ಹಬ್ಬದ ಆರಂಭ ಹಿನ್ನೆಯಲ್ಲಿ ಚಳ್ಳಕೆರೆ ನಗರದ ಪಾವಗಡ ರಸ್ತೆ ರೈಲ್ವೆ ಗೇಟ್ ಬಳಿ ಮರವಾಯಿ ಬೆಡಗಿನ ಕಾಡುಗೊಲ್ಲ ಸಮುದಾಯದ ಮುಖಂಡ ಮರವಾಯಿ ವೆಂಕಟೇಶ್, ಅಜ್ಜಪ್ಪ, ಮಹಾಲಿಂಗ, ಶ್ರೀನಿವಾಸ್, ವೀರೇಶ್ ಅವರು ಮನೆ ಮುಂದೆ ಬೆಳೆಸಿದ್ದ ದೇವರ ಪೂಜೆ (ಅತ್ತಿ) ಮರವನ್ನು ಗಂಡುಗೊಡಲಿಯಿAದ ಕಡಿಯುವ ಮೂಲಕ ಬುಡಕಟ್ಟು ಸಂಸ್ಕೃತಿಯ ಕ್ಯಾತಪ್ಪ ದೈವದ ಜಾತ್ರಾ ಆಚರಣೆಗೆ ಚಾಲನೆ ನೀಡಿದರು.

ಬಳಿಕ ಕರಿ ಕಂಬಳಿ ಗದ್ದಿಗೆ ಹಾಸಿ ವಿಶೇಷ ಪೂಜೆ ಸಲ್ಲಿಸಿದರು. ಆಚರಣೆಯಲ್ಲಿ ಪಾಲ್ಗೊಂಡಿದ್ದ ನೂರಾರು ಭಕ್ತರು ಅತ್ತಿ ಮರದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಬುಡಕ್ಕೆ ಕೈ ಮುಗಿದರು. ಸಾಮೂಹಿಕ ಅನ್ನ ಸಂತರ್ಪಣೆ ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಿತು.

ಕೋಣನ ಮತ್ತು ಬೊಮ್ಮನಗೌಡರ ಗುಂಪಿನವರು ಕಡಿದ ಪೂಜೆ ಮರ ನೆಲಕ್ಕೆ ತಾಕದಂತೆ ಹೆಗಲ ಮೇಲೆ ಹೊತ್ತು ಉರುಮೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಜಾತ್ರೆ ನಡೆಯುವ ಪುರ್ಲೆಹಳ್ಳಿ ಗ್ರಾಮದ ಬಳಿ ವಸಲು ದಿನ್ನೆಗೆ ಸಾಗಿಸಿದರು.

ಬಹು ಮುಖ್ಯವಾಗಿ ಜನವರಿ 5ರಂದು ಜಾತ್ರಾ ಸ್ಥಳದಲ್ಲಿ ಎರೆದ ಕಳ್ಳೆ, ಕಾರೆಕಳ್ಳೆ, ಕವಳಿಕಳ್ಳೆ, ಜಾಲಿಕಳ್ಳೆ, ಬಾರೆಕಳ್ಳೆ, ಬಂದ್ರೆಸೊಪ್ಪು ಮತ್ತು ಗಳಗಳಿಂದ 20 ಅಡಿ ಎತ್ತರದ ಕಳ್ಳೆ ಗುಡಿ ನಿರ್ಮಿಸಲಾಗುತ್ತದೆ. ವೀರಗಾರರ ಗುಂಪಿನವರು ಬರಿಗಾಲಲ್ಲಿ ಕಳ್ಳೆಮುಳ್ಳಿನ ಗುಡಿ ಹತ್ತಿ ಕೆಲವೇ ಕ್ಷಣದಲ್ಲಿ ಕಳಸ ಕೀಳುವ ರೋಚಕ ಆಚರಣೆ ಜರುಗಲಿದೆ. ಇದನ್ನು ಕಣ್ತುಂಬಿಕೊಳ್ಳಲು ಜಿಲ್ಲೆ ಸೇರಿದಂತೆ ಹೊರ ರಾಜ್ಯದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರೋದು ಇಲ್ಲಿನ ವಿಶೇಷ.

TAGGED:ChallakereChitradurgaKyathappana Jatreಕ್ಯಾತಪ್ಪನ ಜಾತ್ರೆಚಳ್ಳಕೆರೆಚಿತ್ರದುರ್ಗ
Share This Article
Facebook Whatsapp Whatsapp Telegram

Cinema news

MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood
Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories
Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post

You Might Also Like

CRIME
Crime

ತಿಂಡಿ ಆಸೆ ತೋರಿಸಿ 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ – ಕಾಮುಕ ಅರೆಸ್ಟ್

Public TV
By Public TV
9 minutes ago
CMS HASSAN
Crime

ಎಟಿಎಂಗೆ ಹಾಕಬೇಕಿದ್ದ ಕೋಟ್ಯಂತರ ರೂ. ಹಣ ಗುಳುಂ – ಸಿಬ್ಬಂದಿ ವಿರುದ್ಧ ಶಂಕೆ

Public TV
By Public TV
15 minutes ago
Zimbabwe Team
Cricket

ಜಿಂಬಾಬ್ವೆಯಿಂದ ಲಂಕಾದಹನ – ಕೊನೆಯ ಓವರ್‌ನಲ್ಲಿ ರೋಚಕ ಜಯ

Public TV
By Public TV
29 minutes ago
BY Vijayendra
Bengaluru City

ಕರ್ನಾಟಕದಲ್ಲಿ ಬಿಜೆಪಿ ಗತವೈಭವ ಮರುಕಳಿಸಲು ಹಗಲು-ರಾತ್ರಿ ಶ್ರಮ: ಸರ್ಕಾರದ ವಿರುದ್ಧ ಹೋರಾಟ ನಿರಂತರ – ಬಿವೈವಿ

Public TV
By Public TV
30 minutes ago
NAMMA METRO 1
Bengaluru City

ನಮ್ಮ ಮೆಟ್ರೋದಿಂದ ಮದ್ಯಪ್ರಿಯರಿಗೆ ಗುಡ್‌ನ್ಯೂಸ್?

Public TV
By Public TV
60 minutes ago
kalaburagi mahanagara palike logo row
Districts

ಕಮಲಕ್ಕೆ ಕೈ ಹಾಕಿದ ಕಾಂಗ್ರೆಸ್‌ – ಕಲಬುರಗಿ ಪಾಲಿಕೆಯಲ್ಲಿ ಈಗ ‘ಲೋಗೋ’ ಯುದ್ಧ!

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?