ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೋಮವಾರ ಸಂಜೆ ದೆಹಲಿಗೆ (New Delhi) ತೆರಳಲಿದ್ದಾರೆ. ರಾಷ್ಟ್ರಪತಿಗಳ ಭೇಟಿಗೆ ನಿರ್ಧರಿಸಿದ್ದಾರೆ.
ಮಂಗಳವಾರ ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಭೇಟಿ ಮಾಡಲಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದ 24 ವಿಧೇಯಕಗಳು ರಾಷ್ಟ್ರಪತಿಗಳ ಸಹಿಗೆ ರಾಷ್ಟಪತಿ ಭವನಕ್ಕೆ ರವಾನೆ ಆಗಿದ್ದು ಇನ್ನೂ ಸಹಿ ಆಗದೆ ಬಾಕಿ ಉಳಿದಿವೆ. ಬಾಕಿ ಇರುವ ವಿಧೇಯಕಗಳಿಗೆ ಸಹಿ ಹಾಕುವಂತೆ ಮನವಿ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ತುಂಬಿ ತುಳುಕುತ್ತಿದ್ದು, ಸದ್ಯ ಐಸಿಯುಲ್ಲಿದೆ – ಯತ್ನಾಳ್
ಮಂಗಳವಾರ ಸಂಜೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಹ ಭೇಟಿಯಾಗಲು ಸಿಎಂ ನಿರ್ಧರಿಸಿದ್ದಾರೆ. ಬುಧವಾರ ಪ್ರಧಾನಿ ಮೋದಿ ಭೇಟಿಗೆ ಸಮಯ ಕೇಳಿದ್ದಾರೆ. ಅವಕಾಶ ಸಿಕ್ಕರೆ ಬುಧವಾರ ಪ್ರಧಾನಿ ಭೇಟಿ ಆಗಲಿರುವ ಸಿಎಂ ಅಂದೇ ರಾಹುಲ್ ಗಾಂಧಿ ಭೇಟಿಗೂ ಸಮಯ ಹೇಳಿದ್ದಾರೆ.
ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ವಾಪಸ್ ಆದರೆ ಬುಧವಾರ ಅವರನ್ನು ಭೇಟಿ ಮಾಡಿ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಡಿಕೆಶಿ V/S ಹೆಚ್ಡಿಕೆ ನಡುವೆ ಬಟ್ಟೆ ಫೈಟ್ – ಗಿಫ್ಟ್ ಕೊಡೋಣ ಅಂತ ಹೇಳಿದ್ದೆ ಎಂದು ಮತ್ತೆ ಕೆಣಕಿದ ಡಿಸಿಎಂ