Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಾರಣ ಪ್ರಿಯರಿಗೆ ಗುಡ್ ನ್ಯೂಸ್ – ಟ್ರಕ್ಕಿಂಗ್ ಹಬ್ ಆಗಲಿದೆ ಉತ್ತರ ಕನ್ನಡ ಜಿಲ್ಲೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಚಾರಣ ಪ್ರಿಯರಿಗೆ ಗುಡ್ ನ್ಯೂಸ್ – ಟ್ರಕ್ಕಿಂಗ್ ಹಬ್ ಆಗಲಿದೆ ಉತ್ತರ ಕನ್ನಡ ಜಿಲ್ಲೆ

Latest

ಚಾರಣ ಪ್ರಿಯರಿಗೆ ಗುಡ್ ನ್ಯೂಸ್ – ಟ್ರಕ್ಕಿಂಗ್ ಹಬ್ ಆಗಲಿದೆ ಉತ್ತರ ಕನ್ನಡ ಜಿಲ್ಲೆ

Public TV
Last updated: April 9, 2025 10:58 pm
Public TV
Share
2 Min Read
uttara kannada trekking
SHARE

– ಜಿಲ್ಲೆಯ 32 ಸ್ಥಳಗಳಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಲು ಸಿದ್ಧತೆ

ಕಾರವಾರ: ರಾಜ್ಯದಲ್ಲಿ ಅನೇಕ ಸುಂದರ ತಾಣಗಳಿವೆ. ಆದರೆ, ಸುರಕ್ಷತೆಯ ದೃಷ್ಟಿಯಿಂದ ವಿಧಿಸಲಾಗಿರುವ ನಿರ್ಬಂಧಗಳಿಂದ ಆಕರ್ಷಣಿಯ ನೈಸರ್ಗಿಕ ಸ್ಥಳಗಳನ್ನು ನೋಡಲಾಗದ ಪರಿಸ್ಥಿತಿ ಇದೆ. ಇಂತಹ ನಿರ್ಬಂಧಗಳಿಗೆ ಕೊಂಚ ಬ್ರೇಕ್ ಹಾಕಿ, ಚಾರಣ ಪ್ರಿಯರಿಗೆ ಹೊಸ ಸ್ಥಳಗಳಿಗೆ ಅವಕಾಶ ಕಲ್ಪಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಮುಂದಾಗಿದೆ.

ಕರ್ನಾಟಕದ ಕಾಶ್ಮೀರ ಎಂದೇ ಹೆಸರು ಪಡೆದ ಉತ್ತರ ಕನ್ನಡ ಜಿಲ್ಲೆ ಸುಂದರ ಬೆಟ್ಟ ಗುಡ್ಡಗಳು, ಕಡಲತೀರಗಳನ್ನು ಹೊಂದಿದ ನಾಡು. ರಾಜ್ಯದಲ್ಲೇ ಅತೀ ಹೆಚ್ಚು ಪರಿಸರ ಸೌಂದರ್ಯ ಹೊಂದಿದ ಜಿಲ್ಲೆ ಕೂಡ. ದೇಶದ ಯಾವ ಮೂಲೆಯಲ್ಲೂ ಕಾಣದ ಸುಂದರ, ಸುರಕ್ಷಿತ ಮತ್ತು ಸಮೃದ್ಧವಾದ ನೈಸರ್ಗಿಕ ತಾಣಗಳು ಈ ಜಿಲ್ಲೆಯಲ್ಲಿವೆ. ಆದರೂ ಹೊರ ರಾಜ್ಯ ಹಾಗೂ ಹೊರ ದೇಶದಲ್ಲಿ ಚಾರಣಕ್ಕೆ ಹೋಗುವ ಅದೆಷ್ಟೋ ಕನ್ನಡಿಗರಿಗೆ ಉತ್ತರ ಕನ್ನಡ ಜಿಲ್ಲೆಯ ಆಕರ್ಷಣೀಯ ಸುಂದರ ಸ್ಥಳಗಳಲ್ಲಿ ಟ್ರಕ್ಕಿಂಗ್ ಮಾಡಲು ಅವಕಾಶ ಸಿಕ್ಕಿಲ್ಲ ಎಂಬ ಅಳಲು ಇತ್ತು. ಟ್ರಕ್ಕಿಂಗ್ ಪ್ರಿಯರಿಗೆ ಅಧಿಕೃತವಾಗಿ ಅವಕಾಶ ಕಲ್ಪಿಸಿ ಕೊಡುವ ಉದ್ದೇಶದಿಂದ ಕಳೆದ ಕೆಲವು ತಿಂಗಳ ಕಾಲ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಸುತ್ತಾಡಿ ಸರ್ವೇ ಮಾಡಿರುವ ಉತ್ತರ ಕನ್ನಡ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಹಾಗೂ ತಂಡ ಸುಮಾರು ಜಿಲ್ಲೆಯ 32 ಸ್ಥಳಗಳು ಚಾರಣ ಮಾಡಲು ಸೂಕ್ತ ಎಂದು ಗುರುತಿಸಿದೆ.

ಸದ್ಯ ಚಾರಣಕ್ಕೆ ಜಿಲ್ಲಾಡಳಿತದಿಂದ ಬೆಂಬಲ ಸಿಕ್ಕಿರುವ ಹಿನ್ನೆಲೆಯಲ್ಲಿ 32 ಸ್ಥಳಗಳಲ್ಲಿ ಟ್ರಕ್ಕಿಂಗ್ ಮಾಡಲು ಅಧಿಕೃತ ಅನುಮತಿಗಾಗಿ ಕರ್ನಾಟಕ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಮೀನಾಕ್ಷಿ ನೆಗಿಗೆ ಉತ್ತರ ಕನ್ನಡ ಸಿ.ಸಿ.ಎಫ್ ವಸಂತ ರೆಡ್ಡಿ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಅನುಮತಿ ಸಿಕ್ಕಿದ್ದೇ ಆದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒಂದು ಹೊಸ ಆಯಾಮ ಬರುವುದರ ಜೊತೆಗೆ ಜಿಲ್ಲೆ ಟ್ರಕ್ಕಿಂಗ್ ಹಬ್ ಆಗಲಿದೆ.

32 ಟ್ರಕ್ಕಿಂಗ್ ಸ್ಥಳಗಳಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿರುವುದನ್ನ ಸ್ವಾಗತಿಸಿರುವ ಪರಿಸರ ಪ್ರೇಮಿಗಳು ಟ್ರಕ್ಕಿಂಗ್‌ಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿರುವುದು ನಿಸರ್ಗ ಪ್ರಿಯರು ಹಾಗೂ ಅಧ್ಯಯನ ಮಾಡುವವರಿಗೆ ನಿಜಕ್ಕೂ ಪ್ರೇರಣೆ ಕೊಟ್ಟಂತಾಗುತ್ತದೆ. ಆದರೆ, ಟ್ರಕ್ಕಿಂಗ್ ಸಂಪೂರ್ಣವಾಗಿ ಅರಣ್ಯ ಇಲಾಖೆಯವರ ಮೂಲಕವೇ ನಡೆಯಬೇಕು ಎಂದಿರುವ ಪರಿಸರ ಪ್ರೇಮಿಗಳು, ಟ್ರಕ್ಕಿಂಗ್ ಸ್ಥಳಗಳ ಸುರಕ್ಷತೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡುವುದರ ಜೊತೆಗೆ ಮೋಜು ಮಸ್ತಿ ಹಾಗೂ ಅನೈತಿಕ ಚಟುವಟಿಕೆಗಳ ಮೇಲೆ ಸಂಪೂರ್ಣವಾಗಿ ನಿಗಾವಹಿಸಬೇಕೆಂದು ಆಗ್ರಹ ಮಾಡಿದ್ದಾರೆ.

ಕಾಳಿ ಟೈಗರ್ ರಿಸರ್ವ್ ಫಾರೆಸ್ಟ್ ಪ್ರದೇಶದಲ್ಲಿನ ಸುಮಾರು 39 ಪ್ರದೇಶಗಳಲ್ಲಿ ಟ್ರಕ್ಕಿಂಗ್‌ಗೆ ಅವಕಾಶ ಕಲ್ಪಿಸುವಂತೆ ಅರಣ್ಯ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ, ಅದಕ್ಕೆ ಒಪ್ಪಿಗೆ ಸಿಕ್ಕಿಲ್ಲ. ಈ 32 ಸ್ಥಳಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿದ್ದು, ಒಂದುವೇಳೆ ಅವಕಾಶ ಸಿಕ್ಕಲ್ಲಿ ಚಾರಣಿಗರಿಗೆ ವಿಶೇಷ ಸ್ಥಳಗಳ ಪರಿಚಯದ ಜೊತೆಗೆ ಜಿಲ್ಲಾ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ.

TAGGED:karwarTrekking HubUttara Kannadaಉತ್ತರ ಕನ್ನಡಕಾರವಾರಟ್ರಕ್ಕಿಂಗ್‌ ಹಬ್
Share This Article
Facebook Whatsapp Whatsapp Telegram

Cinema news

vijay thalapathy
ನಟ ವಿಜಯ್‌ ವಿರುದ್ಧ ಪ್ರಕರಣ ದಾಖಲು
Cinema Latest South cinema Top Stories
Delhi Rain
ದೆಹಲಿ-ಎನ್‌ಸಿಆರ್‌ನ ಹಲವೆಡೆ ಭಾರೀ ಮಳೆ – ಯೆಲ್ಲೋ ಅಲರ್ಟ್ ಜಾರಿ
Cinema Latest National Top Stories
Rishabh Shetty
Chandanavana Film Critics Awards 2026 | ರಿಷಬ್ ಅತ್ಯುತ್ತಮ ನಟ, ಆಶಿಕಾ ರಂಗನಾಥ್ ಅತ್ಯುತ್ತಮ ನಟಿ
Bengaluru City Cinema Latest Sandalwood Top Stories
lyari in pakistan dhurandhar
ಧುರಂಧರ್‌ ಸಿನಿಮಾದಲ್ಲಿ ನಮಗೆ 500 ಕೋಟಿ ಕೊಡಿ – ಹಿಟ್‌ ಬೆನ್ನಲ್ಲೇ ಪಾಲು ಕೇಳಿದ ಪಾಕ್‌
Cinema Latest Top Stories

You Might Also Like

Tourist Killed 6 Others Injured In Terrorist Attack In Jammu and Kashmir Pahalgam
Latest

ಆಪರೇಷನ್ ಅರಹಮಾ | ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಪಾಕ್‌ ಉಗ್ರನ ಹತ್ಯೆ

Public TV
By Public TV
5 minutes ago
Shell Petrol Bunk
Bengaluru City

ಮತ್ತೆ ಶಾಕ್ ಕೊಟ್ಟ ಶೆಲ್ ಪೆಟ್ರೋಲ್ ಬಂಕ್ – ಪೆಟ್ರೋಲ್ 7 ರೂ., ಡೀಸೆಲ್ 25 ರೂ. ಹೆಚ್ಚಳ

Public TV
By Public TV
35 minutes ago
Train Ticket Cancel Refund Policy
Latest

ರೈಲು ಹೊರಡುವ 8 ಗಂಟೆಯೊಳಗೆ ಟಿಕೆಟ್‌ ರದ್ದು ಮಾಡಿದ್ರೆ ಸಿಗಲ್ಲ ಹಣ – ಇಂದಿನಿಂದ ಹೊಸ ನಿಯಮ ಜಾರಿ, ಏನೇನು ಬದಲಾವಣೆ?

Public TV
By Public TV
54 minutes ago
bengaluru mysuru expressway e1677512075362
Districts

ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಇಂದಿನಿಂದ ಟೋಲ್‌ ದರ ಏರಿಕೆ; ಯಾವ ವಾಹನಕ್ಕೆ ಎಷ್ಟು?

Public TV
By Public TV
1 hour ago
Tumakuru Siddaganga Math Shivakumara Swamiji birth anniversary
Districts

ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜಯಂತ್ಯೋತ್ಸವ – ಸಿದ್ದಗಂಗಾ ಮಠದಲ್ಲಿ ಕಳೆಗಟ್ಟಿದ ಸಂಭ್ರಮ

Public TV
By Public TV
1 hour ago
April Price Hike 3
Bengaluru City

ಇಂದಿನಿಂದ ʻದುಬಾರಿ ದುನಿಯಾʼ; ಕರ್ನಾಟಕದಲ್ಲಿ ಯಾವುದೆಲ್ಲಾ ಏರಿಕೆ? ನಗದು ವ್ಯವಹಾರ ಹೇಗೆ..?

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?