ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರು ದರ್ಶನ್‌ರನ್ನು (Darshan) ನೆನಪಿಸಿಕೊಂಡಿದ್ದಾರೆ. ‘ಬುಲ್ ಬುಲ್’ ಅಂತ ತಮಗೆ ಟೈಟಲ್ ಕೊಟ್ಟಿದ್ದಕ್ಕೆ ದರ್ಶನ್‌ಗೆ ಯಾವಾಗಲೂ ಋಣಿ ಆಗಿರುತ್ತೇನೆ ಎಂದಿರುವ ರಚಿತಾ, ಜೀವ ಇರೋತನಕ ನಾನು ‘ಬುಲ್ ಬುಲ್’ (Bul Bul) ಆಗಿಯೇ ಇರುತ್ತೇನೆ ಎಂದಿದ್ದಾರೆ. ಜೊತೆಗೆ ದರ್ಶನ್ ಅಭಿಮಾನಿಗಳಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.

ದರ್ಶನ್ ಸೇರಿದಂತೆ ‘ಬುಲ್ ಬುಲ್’ ಸಿನಿಮಾ ತಂಡಕ್ಕೆ ಧನ್ಯವಾದ ಹೇಳಿದ ರಚಿತಾ ರಾಮ್, ದರ್ಶನ್ ಎಲ್ಲ ಸಿನಿಮಾಗಳೂ ಹೀರೋ ಬೇಸ್ ಹೆಸರುಗಳಿರುತ್ತವೆ. ಆದರೆ ಫಸ್ಟ್ ಟೈಮ್ ಹೀರೋಯಿನ್ ಬೇಸ್ ಟೈಟಲನ್ನು ‘ಬುಲ್ ಬುಲ್’ಗೆ ಇಡಲಾಗಿತ್ತು. ಅದನ್ನು ದರ್ಶನ್ ಕೂಡ ಹೇಳಿದ್ದರು ಎಂದು ರಚಿತಾ ಹೇಳಿಕೊಂಡಿದ್ದಾರೆ. ‘ಬುಲ್ ಬುಲ್’ ಹೆಸರಿನಿಂದಲೇ ನಾನು ಗುರುತಿಸಿಕೊಂಡಿದ್ದೇನೆ. ನನ್ನನ್ನು ಸಿನಿಮಾ ಬಂದ ಕೆಲ ವರ್ಷ ಮಾತ್ರವಲ್ಲ ಈಗಲೂ ‘ಬುಲ್ ಬುಲ್’ ಅಂತಾನೆ ಜನ ಕರೆಯುತ್ತಾರೆ. ನಾನು ಇರೋವರೆಗೂ, ನನ್ನ ಉಸಿರಿರುವವರೆಗೂ ನನ್ನನ್ನು ‘ಬುಲ್ ಬುಲ್’ ಅಂತ ಕರೆದರೆ ನನಗೆ ಖುಷಿ ಎಂದು ರಚಿತಾ ಹೇಳಿದ್ದಾರೆ. ಈ ವೇಳೆ, ದರ್ಶನ್ ಅಭಿಮಾನಿಗಳಿಗೆ ನಮಸ್ಕಾರ ಮಾಡಿ ತಮ್ಮ ಧನ್ಯವಾದ ತಿಳಿಸಿದ್ದಾರೆ. ಆಗ ರಚಿತಾ ಭಾವುಕರಾಗಿದ್ದನ್ನು ನೋಡಬಹುದು.
ಅಂದಹಾಗೆ, 2013ರಲ್ಲಿ ‘ಬುಲ್ ಬುಲ್’ ಸಿನಿಮಾ ಮೂಲಕ ದರ್ಶನ್‌ಗೆ ನಾಯಕಿಯಾಗಿ ರಚಿತಾ ರಾಮ್ ನಟನೆಗೆ ಪಾದಾರ್ಪಣೆ ಮಾಡಿದರು. ಸಿನಿಮಾ ರಿಲೀಸ್ ಆಗಿ ಹಲವು ವರ್ಷಗಳು ಕಳೆದರೂ ರಚಿತಾ ಮೇಲಿನ ಅಭಿಮಾನಿಗಳ ಕ್ರೇಜ್ ಕಮ್ಮಿಯಾಗಿಲ್ಲ. ಬೇಡಿಕೆಯ ನಟಿಯಾಗಿ ಸದ್ದು ಮಾಡುತ್ತಿದ್ದಾರೆ.



