Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Kotekar Bank Robbery; ಕೇವಲ 4 ದಿನದಲ್ಲಿ ಪ್ರಕರಣ ಭೇದಿಸಿ ಎಲ್ಲಾ ಚಿನ್ನಾಭರಣ ವಶಕ್ಕೆ: ಗುಂಡೂರಾವ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | Kotekar Bank Robbery; ಕೇವಲ 4 ದಿನದಲ್ಲಿ ಪ್ರಕರಣ ಭೇದಿಸಿ ಎಲ್ಲಾ ಚಿನ್ನಾಭರಣ ವಶಕ್ಕೆ: ಗುಂಡೂರಾವ್

Dakshina Kannada

Kotekar Bank Robbery; ಕೇವಲ 4 ದಿನದಲ್ಲಿ ಪ್ರಕರಣ ಭೇದಿಸಿ ಎಲ್ಲಾ ಚಿನ್ನಾಭರಣ ವಶಕ್ಕೆ: ಗುಂಡೂರಾವ್

Public TV
Last updated: January 26, 2025 11:54 am
Public TV
Share
2 Min Read
Dinesh Gundu Rao
SHARE

ಮಂಗಳೂರು: ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ‌ (Kotekar Bank Robbery) ಪ್ರಕರಣವನ್ನು ಕೇವಲ ನಾಲ್ಕು ದಿನದಲ್ಲಿ ಭೇದಿಸಿ ಎಲ್ಲಾ ಚಿನ್ನಾಭರಣವನ್ನ ವಶಪಡಿಸಿಕೊಂಡಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ.

ಪ್ರಕರಣದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಕರಣ ಭೇದಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅತೀ ಶೀಘ್ರದಲ್ಲೇ ಪೊಲೀಸರು ಈ ದರೋಡೆ ಪ್ರಕರಣವನ್ನ ಭೇದಿಸಿದ್ದಾರೆ. ಇಂತಹ ಸಮಾಜಘಾತುಕ ಶಕ್ತಿಗಳನ್ನ ನಿಯಂತ್ರಿಸುವುದು, ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವುದು ಸರ್ಕಾರದ ಕರ್ತವ್ಯ. ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಸುರಕ್ಷತೆಯ ಬಗ್ಗೆ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಸುರಕ್ಷತೆಯ ಮಾರ್ಗಸೂಚಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ,ಹಿಂದಿರುವವರು ಯಾರು ಎಲ್ಲವನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂದರು. ಇದನ್ನೂ ಓದಿ: ರಾಜ್ಯಗಳ ಒಟ್ಟು ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ – ಥಾವರ್ ಚಂದ್ ಗೆಹ್ಲೋಟ್

Mangaluru Kotekaru Bank Theft

ಮಸಾಜ್ ಪಾರ್ಲರ್ ಮೇಲೆ ರಾಮ್ ಸೇನೆ ಕಾರ್ಯಕರ್ತರ ದಾಳಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಏನಾದರೂ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕು. ಈ ರೀತಿ ಗೂಂಡಾಗಿರಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತರೋದು ಸರಿಯಲ್ಲ. ಈ ರೀತಿಯ ಘಟನೆಗಳು ನಡೆದಾಗ ಬಂಡವಾಳ ಹೂಡಿಕೆ, ಧಾರ್ಮಿಕ ಕ್ಷೇತ್ರಗಳಿಗೆ ಬರುವುದರ ಮೇಲೆ ಪರಿಣಾಮ ಬೀಳುತ್ತದೆ. ಬಂಡವಾಳ ಹೂಡುವವರು ಇಲ್ಲಿ ಸುರಕ್ಷತೆ ಇದ್ಯಾ ಎಂದು ಕೇಳುತ್ತಾರೆ. ಇತ್ತೀಚೆಗೆ ಬೆಂಗಳೂರಿಗೆ ಬಂದ ಬಂಡವಾಳ ಹೂಡಿಕೆದಾರರು ಇಲ್ಲಿ ಸುರಕ್ಷತೆ ಇದ್ಯಾ ಎಂದು ಕೇಳಿದ್ದರು. ರಾಮ್ ಸೆಮಿರಲಿ, ಶ್ರೀರಾಮ ಸೇನೆ ಇರಲಿ, ಈ ರೀತಿ ಮಾಡೋದು ಖಂಡಿತ ಸರಿಯಲ್ಲ. ಅವರ ಮೇಲೆ ಕಟ್ಟು ನಿಟ್ಟಿನ ಕ್ರಮ ಆಗುತ್ತದೆ. ಇಂಥವರ ವಿರುದ್ಧ ಎಲ್ಲರೂ ಧ್ವನಿ ಎತ್ತುವ ಅವಶ್ಯಕತೆ ಇದೆ. ಕೆಲವರು ಈ ಘಟನೆಯನ್ನು ಇನ್ನೂ ಖಂಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: 76ನೇ ಗಣರಾಜ್ಯೋತ್ಸವದ ಸಂಭ್ರಮ – ರಾಷ್ಟ್ರಪತಿಯಿಂದ ಧ್ವಜಾರೋಹಣ

ಸಿಎಂ ಬದಲಾವಣೆ ವಿಚಾರದ ಕುರಿತು ಮಾತನಾಡಿ, ಇದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಒಬ್ಬರು ಸಿಎಂ ಇರುವಾಗ ಇನ್ನೊಬ್ಬರು ಸಿಎಂ ಆಗುವ ಪ್ರಶ್ನೆ ಬರೋದಿಲ್ಲ. ಈ ಬಗ್ಗೆ ಏನೇ ಇದ್ದರೂ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಿದ್ದರಾಮಯ್ಯ ಎಲ್ಲರಿಗೂ 100% ವಿಶ್ವಾಸ ಇರೋ ನಾಯಕ ಎಂದರು. ಇದನ್ನೂ ಓದಿ: 76ನೇ ಗಣರಾಜ್ಯೋತ್ಸವದ ಸಂಭ್ರಮ – ಬೆಂಗಳೂರಿನಲ್ಲಿ ರಾಜ್ಯಪಾಲ ಗ್ಲೆಹ್ಲೋಟ್‌ರಿಂದ ಧ್ವಜಾರೋಹಣ

ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಉಲ್ಲೇಖ ವಿಚಾರವಾಗಿ ಪ್ರತಿಕ್ರಿಯಿಸಿ, ದೇಶದಲ್ಲಿ ಯಾವುದೇ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡು ನಾಲ್ಕೇ ತಿಂಗಳಲ್ಲಿ ಎಲ್ಲವನ್ನೂ ಅನುಷ್ಠಾನಗೊಳಿಸಿದೆ. ಎಷ್ಟೇ ಜನ ಟೀಕೆಗಳು ಮಾಡಿದರೂ, ನಾವು ನಮ್ಮ ಬದ್ಧತೆಯನ್ನ ತೋರಿಸಿದ್ದೇವೆ. ಈ ಗ್ಯಾರಂಟಿಗಳನ್ನು ಅಷ್ಟು ಬೇಗ ಜಾರಿಗೆ ಹೇಗೆ ತಂದಿರೀ ಎಂದು ಕೇಂದ್ರ ಸರ್ಕಾರದವರೇ ಕೇಳಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ತಾಯ್ನಾಡಿಗೆ ಬಂದಿಳಿದ ಶಿವಣ್ಣ

TAGGED:dakshina kannadadinesh gundu raoKotekar Bank RobberyMangaluruಕೋಟೆಕಾರು ಬ್ಯಾಂಕ್‌ ದರೋಡೆದಕ್ಷಿಣ ಕನ್ನಡದಿನೇಶ್ ಗುಂಡೂರಾವ್ಮಂಗಳೂರು
Share This Article
Facebook Whatsapp Whatsapp Telegram

Cinema news

MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood
Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories
Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post

You Might Also Like

forest officials raid bhatkal 21 kg of deer meat found in fridge
Crime

ಭಟ್ಕಳ | ಅರಣ್ಯಾಧಿಕಾರಿಗಳ ದಾಳಿ – ಫ್ರಿಡ್ಜ್‌ಲ್ಲಿ 21 ಕೆಜಿ ಜಿಂಕೆ ಮಾಂಸ ಪತ್ತೆ

Public TV
By Public TV
2 minutes ago
Contractors Association Manjunath
Belgaum

ಬೆಳಗಾವಿಯಲ್ಲೇ 3,458 ಕೋಟಿ ಬಾಕಿ, ಪಾವತಿಸದಿದ್ರೆ ಬೆಂಗಳೂರಿನಲ್ಲಿ ಕುಟುಂಬದರೊಂದಿಗೆ ಪ್ರತಿಭಟನೆ: ಗುತ್ತಿಗೆದಾರರ ಸಂಘ

Public TV
By Public TV
10 minutes ago
Andrew Mountbatten Windsor
Latest

ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಸಂಬಂಧ – ಬ್ರಿಟನ್ ಮಾಜಿ ರಾಜಕುಮಾರ ಆಂಡ್ರ್ಯೂ ಅರೆಸ್ಟ್‌

Public TV
By Public TV
18 minutes ago
Ranji Trophy 2025 26 draw against Uttarakhand Karnataka to face Jammu and Kashmir final in Hubballi
Cricket

11 ವರ್ಷದ ಬಳಿಕ ರಣಜಿ ಫೈನಲ್‌ಗೆ ಕರ್ನಾಟಕ – ಹುಬ್ಬಳ್ಳಿಯಲ್ಲಿ ಪಂದ್ಯ

Public TV
By Public TV
28 minutes ago
Al Mirath Real Estates Dubai 2
Latest

Al Mirath Real Estates Dubai – ವಾರ್ಷಿಕೋತ್ಸವ ಆಚರಣೆ

Public TV
By Public TV
1 hour ago
CRIME
Crime

ತಿಂಡಿ ಆಸೆ ತೋರಿಸಿ 3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ – ಕಾಮುಕ ಅರೆಸ್ಟ್

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?