Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿದ್ದರಾಮಯ್ಯ, ಡಿಕೆಶಿಗೆ ತಾಕತ್‌ ಇದ್ರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿ: ಯತ್ನಾಳ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಸಿದ್ದರಾಮಯ್ಯ, ಡಿಕೆಶಿಗೆ ತಾಕತ್‌ ಇದ್ರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿ: ಯತ್ನಾಳ್‌

Latest

ಸಿದ್ದರಾಮಯ್ಯ, ಡಿಕೆಶಿಗೆ ತಾಕತ್‌ ಇದ್ರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿ: ಯತ್ನಾಳ್‌

Public TV
Last updated: August 3, 2024 4:57 pm
Public TV
Share
2 Min Read
basanagouda patil yatnal vijayapura
SHARE

– ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರ ವಿರುದ್ಧ ನಡೆಸುತ್ತಿರೋ ಹೋರಾಟಕ್ಕೆ ಬೆಂಬಲ ಇಲ್ಲ: ಬಿಜೆಪಿ ಶಾಸಕ

ವಿಜಯಪುರ: ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಧಮ್‌, ತಾಕತ್‌ ಇದ್ರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagouda Patil Yatnal) ಸವಾಲು ಹಾಕಿದರು.

ವಿಜಯಪುರದಲ್ಲಿ (Vijayapura) ಮಾತನಾಡಿದ ಅವರು, ವಿಜಯೇಂದ್ರ ಕೊರೊನಾ ಸಂದರ್ಭದಲ್ಲಿ ಮಾಡಿದ ಭ್ರಷ್ಟಾಚಾರ ಹೊರಗೆ ಬರಲಿ. ಭ್ರಷ್ಟಾಚಾರ ಮಾಡಿದವರು ಭ್ರಷ್ಟಾಚಾರ ವಿರುದ್ಧ ಮಾಡುತ್ತಿರುವ ಹೋರಾಟಕ್ಕೆ ಬೆಂಬಲ‌ ಇಲ್ಲ ಎಂದು ಬಿಜೆಪಿ ಪಾದಯಾತ್ರೆಗೆ ಟಾಂಗ್ ನೀಡಿದರು. ಇದನ್ನೂ ಓದಿ: ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ: ಎಚ್‌ಡಿಕೆ ಸವಾಲು

SIDDU DKSHI

ಡಿಕೆಶಿ-ವಿಜಯೇಂದ್ರ ನಡುವೆ ಅಡ್ಜೆಸ್ಟ್‌ಮೆಂಟ್‌ ಇದೆ. ಅಡ್ಜೆಸ್ಟ್‌ಮೆಂಟ್‌ ಇದೆ ಅನ್ನೋದು 100% ನಿಜ. ಭೋವಿ, ತಾಂಡಾ ನಿಗಮಗಳ ತನಿಖೆ ಆಗಲಿ. ಭ್ರಷ್ಟ ಕುಟುಂಬವನ್ನ ಬಿಜೆಪಿ ಅಧ್ಯಕ್ಷರನ್ನಾಗಿ ಮುಂದುವರಿಸಬೇಡಿ. ಸಿದ್ದರಾಮಯ್ಯ, ಡಿಕೆಶಿಗೆ ಧಮ್, ತಾಕತ್‌ ಇದ್ದರೆ ವಿಜಯೇಂದ್ರ ಭ್ರಷ್ಟಾಚಾರ ಹೊರಗೆ ತರಲಿ ಎಂದು ಸವಾಲೆಸೆದರು.

ವಿಜಯೇಂದ್ರ ಹಾಗೂ ಡಿಕೆಶಿ ಇಬ್ಬರೂ ಭ್ರಷ್ಟರು. ಇಬ್ಬರು ಸೇರಿಯೇ ಬಿಜಿನೆಸ್ ಮಾಡ್ತಿದ್ದಾರೆ. ಯಡಿಯೂರಪ್ಪ ಸಹ ಯಾವುದೇ ಪಕ್ಷದ ವೇದಿಕೆಗೆ ಬರಬಾರದು. ಯಡಿಯೂರಪ್ಪ ಮೇಲೆ ಗಂಭೀರ ಆರೋಪಗಳಿವೆ. ಅವರು ವೇದಿಕೆಗೆ ಬರಲೇಬಾರದು ಎಂದು ಕಿಡಿಕಾರಿದರು. ಇದನ್ನೂ ಓದಿ: Wayanad LandSlides | ಕರ್ನಾಟಕದಿಂದ 100 ಮನೆ ನಿರ್ಮಾಣ: ಸಿದ್ದರಾಮಯ್ಯಗೆ ಕೃತಜ್ಞತೆ ಸಲ್ಲಿಸಿದ ರಾಹುಲ್‌

BJP JDS Yediyurappa HD Kumaraswamy MUDA Scam 4

ಬಿಜೆಪಿ ವಾಲ್ಮೀಕಿ ಹಗರಣದ ಬಗ್ಗೆ ಯಾಕೆ ಮೌನವಾಗಿದೆ? ವಾಲ್ಮೀಕಿಯಲ್ಲಿ ಡಿಕೆಶಿ ಇದ್ದಾರೆ. ರಾಹುಲ್ ಗಾಂಧಿ ಡೈರೆಕ್ಷನ್ ಇದೆ. ಇದೆ ಕಾರಣಕ್ಕೆ ವಾಲ್ಮೀಕಿ ಹಗರಣ ಮುಚ್ಚಿಡಲಾಗ್ತಿದೆ.‌ ಯಡಿಯೂರಪ್ಪ ಶಿಷ್ಯ ರಾಜು ಪ್ರಕರಣದಲ್ಲಿದ್ದಾನೆ. ಇದನ್ನ ಬಿಟ್ಟು ಮೈಸೂರು ಹಗರಣಕ್ಕೆ ಬೆನ್ನು ಹತ್ತಿದ್ದಾರೆ ಎಂದು ಬಿಎಸ್‌ವೈ ಕುಟುಂಬದ ವಿರುದ್ಧ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಹತ್ಯೆ ಸಿದ್ದು ಸರ್ಕಾರದಲ್ಲೇ ಹೆಚ್ಚಾಗುತ್ತಿದೆ. ವಾಲ್ಮೀಕಿ ಹಗರಣದಲ್ಲಿ ಅಧಿಕಾರಿ ಸಾವಿಗೆ ಶರಣಾದ. ಈಗ ಪಿಎಸ್‌ಐ ನೇಣಿಗೆ ಶರಣಾದ. ಶಾಸಕರ ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಪೊಲೀಸ್‌ ಅಧಿಕಾರಿಗಳೇ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಇತರರ ಗತಿ ಏನು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಡಾ ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು: ಬಿಎಸ್‌ವೈ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ರಾಜೀನಾಮೆ ನೀಡಬೇಕು. ಸಿಎಂ ಮಾತ್ರ ರಾಜೀನಾಮೆ ನೀಡಿದರೆ ಸಾಲದು. ಸಿಎಂ ರಾಜೀನಾಮೆ ಕೊಟ್ಟರೆ, ಡಿಕೆ ಶಿವಕುಮಾರ್‌ ಸಿಎಂ ಆಗಲು ಅನುಕೂಲವಾಗುತ್ತದೆ. ಹಾಗಾಗಿ ಇಡೀ ಸರ್ಕಾರವೇ ಅಧಿಕಾರದಿಂದ ಹಿಂದೆ ಸರಿದು ರಾಜೀನಾಮೆ ನೀಡಬೇಕು. ಮತ್ತೆ ಚುನಾವಣೆಗೆ ಹೋಗೋಣ. ನಾವೂ ನಮ್ಮ ಭ್ರಷ್ಟ ರಾಜ್ಯಾಧ್ಯಕ್ಷರು ಬೇಡಾ ಎಂದು ಹೇಳುತ್ತೇವೆಂದು ವಿಜಯೇಂದ್ರ ವಿರುದ್ಧವೂ ಕಿಡಿಕಾರಿದರು.

TAGGED:Basanagouda Patil Yatnald k shivakumarsiddaramaiahVijayendraಡಿ.ಕೆ.ಶಿವಕುಮಾರ್ಬಸನಗೌಡ ಪಾಟೀಲ್ ಯತ್ನಾಳ್ವಿಜಯೇಂದ್ರಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

Srinanda
Chikkamagaluru

ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ

Public TV
By Public TV
15 minutes ago
Red Corner Notice Mangaluru
Crime

ವಿದೇಶದಲ್ಲಿ ತಲೆಮರೆಸಿಕೊಂಡ ಇಬ್ಬರು ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ

Public TV
By Public TV
17 minutes ago
Siddaramaiah HD Kumaraswamy
Latest

ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಕ ಮಾಡಿಕೊಂಡಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ

Public TV
By Public TV
44 minutes ago
seemanth kumar singh 2
Bengaluru City

ಯುವಕ ಝಾಂಬಿ ಡ್ರಗ್‌ ಸೇವನೆ ಮಾಡಿಲ್ಲ – ದುನಿಯಾ ವಿಜಯ್‌ ಸೇರಿದಂತೆ 25 ಮಂದಿಗೆ ಪೊಲೀಸರ ನೋಟಿಸ್‌

Public TV
By Public TV
1 hour ago
nitish kumar
Latest

ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್‌ ಕುಮಾರ್‌ – ಶೀಘ್ರವೇ ಬಿಹಾರಕ್ಕೆ ನೂತನ ಸಿಎಂ

Public TV
By Public TV
1 hour ago
Delhi Judge House Fire
Court

ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ ಕೇಸ್‌ – ಹೈಕೋರ್ಟ್‌ ನ್ಯಾ.ಯಶವಂತ್ ವರ್ಮಾ ರಾಜೀನಾಮೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?