ಬಿಗ್ ಬಾಸ್ ಮನೆಯ (Bigg Boss House) ಅಸಲಿ ಆಟ ಈಗ ಶುರುವಾಗಿದೆ. ಇಶಾನಿಗಾಗಿ (Eshani) ಮೈಕಲ್ (Michael) ಡಬಲ್ ಗೇಮ್ ಮಾಡಲು ಆಡಲು ಶುರು ಮಾಡಿದ್ದಾರೆ. ಇಶಾನಿ ತಂಡದ ಗೆಲುವಿಗಾಗಿ ತನ್ನ ತಂಡ ‘ಗಂಧದ ಗುಡಿ’ಗೆ ದ್ರೋಹ ಬಗೆಯುತ್ತಿದ್ದಾರೆ.
ಟಾಸ್ಕ್ ವಿಚಾರದಲ್ಲಿ ಮೈಕಲ್ ಸ್ಟ್ರಾಂಗ್ ಇರುವಾಗಲೂ ಡಬಲ್ ಗೇಮ್ ಶುರು ಮಾಡಿದ್ದಾರೆ. ಅದು ಗಂಧದ ಗುಡಿ ತಂಡದಲ್ಲಿದ್ದುಕೊಂಡು ವಜ್ರಕಾಯ ತಂಡಕ್ಕೆ ಬೆಂಬಲ ನೀಡಿದ್ದಾರೆ. ಗೆಲುವು ಸಾಧಿಸುವುದು ಹೇಗೆ ಎಂದು ಸ್ಟ್ಯಾಟರ್ ಜಿ ಹೇಳಿಕೊಟ್ಟಿದ್ದಾರೆ. ಇದನ್ನೂ ಓದಿ:ಮಗಳ ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ: ನಟಿ ಸನ್ನಿ ಲಿಯೋನ್


ಇಶಾನಿ ಎರಡು ಟೀಂ ಅನ್ನು ಟೈ ಮಾಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಸಿಟ್ಟಾಗಿದ್ದಾರೆ. ಕ್ಲಾಸ್ ತೆಗೆದುಕೊಂಡಿದ್ದಾರೆ. ಆಗ ಮೈಕೆಲ್, ನಂಗೆ ಚೀಟ್ ಮಾಡುವುದಕ್ಕೆ ಬರಲ್ಲ. ನಿಯಮದಲ್ಲಿ ಎಲ್ಲಿ ಬರೆದಿದೆ. ಕೈಯಲ್ಲಿ ಒಡೆಯಬಾರದು ಅಂತ. ಒಂದು ಬಲೂನ್ ಹಾಕಬೇಕು ಅಂದ್ರೆ ಹಾಕು ಎಂದು ಮೈಕೆಲ್ ಹೇಳಿದರೆ, ಆಗ ಇಶಾನಿ ಇದು ಚೀಟ್ ಅಲ್ಲ. ಮ್ಯಾಜಿಕ್ ಎಂದಿದ್ದಾರೆ.
ಈಗ ಗೊತ್ತಾಯ್ತು ನಿನ್ನ ನಿಜ ಮುಖ ಏನು ಅಂತ. ಈಗ ಬಲೂನ್ ಹಾಕುವುದಕ್ಕೆ ಏನು ಉಳಿಸಿದ್ದೀಯಾ. ಈಗಾಗಲೇ ಅನೌನ್ಸ್ ಮಾಡಿದ್ದೀಯಲ್ಲ ಎಂದು ರೇಗಾಡಿದ್ದಾರೆ. ಬಿಗ್ ಬಾಸ್ ಕೋಪ ಮಾಡಿಕೊಂಡಿದ್ದಕ್ಕೆ, ಉಸ್ತುವಾರಿಗಳು ನಡೆದುಕೊಂಡ ರೀತಿ ಸರಿ ಇಲ್ಲ ಎಂದು ಹೇಳಿದ್ದು, ಗಂಧದ ಗುಡಿ ತಂಡಕ್ಕೂ ಬೇಸರ ಆಗಿದೆ.


