Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪತಿಯ ಚಿತ್ರಕ್ಕೆ ಪತ್ನಿಯೇ ನಿರ್ದೇಶಕಿ: ಇದು ‘ಸ್ಟಾರ್’ ದುನಿಯಾ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಪತಿಯ ಚಿತ್ರಕ್ಕೆ ಪತ್ನಿಯೇ ನಿರ್ದೇಶಕಿ: ಇದು ‘ಸ್ಟಾರ್’ ದುನಿಯಾ

Cinema

ಪತಿಯ ಚಿತ್ರಕ್ಕೆ ಪತ್ನಿಯೇ ನಿರ್ದೇಶಕಿ: ಇದು ‘ಸ್ಟಾರ್’ ದುನಿಯಾ

Public TV
Last updated: May 23, 2023 9:30 am
Public TV
Share
2 Min Read
Star 3
SHARE

ಈ ಹಿಂದೆ ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಓಂ, ಸ್ವಸ್ತಿಕ್, ಸೂಪರ್ ನಂಥ ಚಿತ್ರಗಳು ಮಾಡಿದ ದಾಖಲೆ ನಿಮಗೆಲ್ಲ ಗೊತ್ತೇ ಇದೆ. ಅದೇ ರೀತಿಯ ಟೈಟಲ್ ಇರುವ ಮತ್ತೊಂದು ಚಿತ್ರಕ್ಕೆ ಇತ್ತೀಚೆಗೆ ಚಾಲನೆ ದೊರೆತಿದೆ. ಅದರ ಹೆಸರು ಸ್ಟಾರ್ (Star). ನಕ್ಷತ್ರದ ಗುರುತನ್ನೇ ತಮ್ಮ ಚಿತ್ರದ ಶೀರ್ಷಿಕೆಯಾಗಿಟ್ಟುಕೊಂಡು ಚಿತ್ರ ಮಾಡಲು ಹೊರಟಿರುವವರು ನಿರ್ಮಾಪಕ ಶರತ್, ಅವರೇ ಚಿತ್ರದ ಹೀರೋ ಕೂಡ. ಈ ಚಿತ್ರಕ್ಕೆ ಪತಿ, ಪತ್ನಿ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ, ಅನು (Anu) ಹಾಗೂ ಮಂಜು ವಿಜಯಸೂರ್ಯ (Manju Vijayasurya) ಸೇರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ರೀನಿವಾಸ ನಗರದ ಕೆಂಪೇಗೌಡ ಆಟದ ಮೈದಾನದಲ್ಲಿ ನಡೆದ ಈ ಚಿತ್ರದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ರವಿ ಸುಬ್ರಮಣ್ಯ ಅವರು ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Star 1

ಈ ಸಂದರ್ಭದಲ್ಲಿ  ಚಿತ್ರದ ನಾಯಕ ಹಾಗೂ ನಿರ್ಮಾಪಕರೂ ಆದ ಶರತ್ (Sarath) ಮಾತನಾಡಿ ನಮ್ಮ ತಂದೆ ಪ್ರಕಾಶ್ ಫೈಟರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅದೇ ನಾನು ಚಿತ್ರರಂಗಕ್ಕೆ ಬರಲು ಕಾರಣ, ಈ ಹಿಂದೆ ನಾನು ಪ್ಯಾಟಿ ಮಂದಿ ಕಾಡಿಗ್ ಬಂದ್ರು ಶೋನಲ್ಲಿ ಭಾಗವಹಿಸಿ ವಿನ್ನರ್ ಆಗಿದ್ದೆ, ಥೇಟರ್ ಹಿನ್ನಲೆಯೂ ನನಗಿದೆ. ಇದೊಂದು ರೌಡಿಸಂ ಬೇಸ್ ಸಬ್ಜೆಕ್ಟ್. ನಿರ್ದೇಶಕರು ತುಂಬಾ ಚೆನ್ನಾಗಿ ಪ್ಲಾನ್ ಮಾಡಿಕೊಂಡಿದ್ದಾರೆ,  ವಿಭಿನ್ನವಾದ ಕಥೆ,  ಕ್ಲೈಮ್ಯಾಕ್ಸ್ ನೋಡಿ ಹೊರಬರುವಾದ ಎಂಥವರ ಕಣ್ಣಲ್ಲಾದರೂ ನೀರು ಬರುತ್ತದೆ, ಚಿತ್ರದಲ್ಲಿ ಒಂದಷ್ಟು ನೈಜ ಘಟನೆಗಳನ್ನು ಹೇಳಿದರೂ, ಯಾರ ಹೆಸರನ್ನೂ ಸಹ  ಬಳಸಿಕೊಳ್ಳುವುದಿಲ್ಲ ಎಂದು ಹೇಳಿದರು.  ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

Star 2

ನಂತರ ನಿರ್ದೇಶಕ ಮಂಜು ವಿಜಯಸೂರ್ಯ ಮಾತನಾಡಿ 16 ವರ್ಷಗಳ ಹಿಂದೆ ನಾನು ಒಬ್ಬ ಲೈಟ್ ಬಾಯ್ ಆಗಿ ಸಿನಿ ಜರ್ನಿ ಆರಂಭಿಸಿ, ಬರವಣೆಗೆಯಲ್ಲೇ ಹೆಚ್ಚು ಸಮಯ ಕಳೆದೆ. ಈಗ ನಿರ್ದೇಶಕನಾಗುತ್ತಿದ್ದೇನೆ.  ನಮ್ಮ ಚಿತ್ರದ ಟೈಟಲ್ಲೇ ಕಥೆ ಹೇಳುತ್ತದೆ. ಇದು ಅಂಡರ್‌ ವರ್ಲ್ಡ್ ಸಬ್ಜೆಕ್ಟ್. ಹೀರೋಗೆ ನಾಯಕಿ ಹೇಗೆ ಬೆಂಬಲವಾಗಿ ನಿಲ್ತಾರೆ ಅಂತ ಹೇಳಿದ್ದೇವೆ. ನ್ಯಾಚುರಲ್ ಆದಂಥ ಫೈಟ್ಸ್ ಚಿತ್ರದಲ್ಲಿರುತ್ತವೆ. ಇದೊಂದು ಲೋಕಲ್ ಸಬ್ಜೆಕ್ಟ್ ಆಗಿರುವುದರಿಂದ ಬೆಂಗಳೂರಿನಲ್ಲೇ ಹೆಚ್ಚು ಭಾಗದ ಶೂಟಿಂಗ್ ಮಾಡುತ್ತೇವೆ. ಹೊಡೆದಾಟಕ್ಕಿಂತ ಹೆಚ್ಚಾಗಿ ಥ್ರಿಲ್ಲರ್ ಮೇಲೆ ಹೆಚ್ಚು ಫೋಕಸ್ ಮಾಡಿದ್ದೇವೆ. ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿಕೊಂಡು ಹೋಗುವ ಕಂಟೆಂಟ್ ಎಂದು ಹೇಳಿದರು.

Star 4

ಚಿತ್ರದ ನಾಯಕಿಯಾಗಿ ನಟಿಸುತ್ತಿರುವ ನಟಿ ರಜತ ರಕ್ಷ (Rajata Raksha) ಮಾತನಾಡಿ ಈಹಿಂದೆ ಸದ್ದು ವಿಚಾರಣೆ ನಡೆಯುತ್ತಿದೆ, ತಲವಾರ್ ಸೇರಿ ಮೂರು  ಚಿತ್ರಗಳಲ್ಲಿ ನಟಿಸಿದ್ದೆ. ನಾಯಕಿಯಾಗಿ ಇದೇ ಮೊದಲ ಚಿತ್ರ. ನಾಯಕನಿಗೆ ಸಪೋರ್ಟ್ ಆಗಿರುವಂಥ ಪಾತ್ರ, ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಛಾಯಾಗ್ರಾಹಕ ಪ್ರವೀಣ್ ಎಂ, ಪ್ರಭು ಮಾತನಾಡಿ ಕಪಾಲ ನಂತರ ಮೂರನೇ ಚಿತ್ರ. ರಿಯಲಿಸ್ಟಿಕ್ ಆಗಿ ಸಿನಿಮಾವನ್ನು  ಶೂಟ್ ಮಾಡೋಣ ಅಂತ ಪ್ಲಾನ್ ಮಾಡಿಕೊಂಡಿದ್ದೇನೆ, ನಿರ್ದೇಶಕರ ಜೊತೆ ಈ ಹಿಂದೆ ಶಾರ್ಟ್ ಫಿಲಂಸ್ ಮಾಡಿದ್ದೆ ಎಂದರು. ಮತ್ತೊಬ್ಬ ನಿರ್ದೇಶಕಿ ಅನು ಮಾತನಾಡಿ ಸ್ಕ್ರಿಪ್ಟ್ ಕೆಲಸದಲ್ಲಿ ನಾನು ಜಾಸ್ತಿ ಇನ್‌ವಾಲ್ ಆಗಿದ್ದೇನೆ. ರಿಯಲಿಸ್ಟಿಕ್ ಆಗಿ ಚಿತ್ರವನ್ನು ತೆರೆಮೇಲೆ ತರಬೇಕು ಎಂದುಕೊಂಡಿದ್ದೇವೆ ಎಂದರು. ಒಂದು ಪ್ಯಾಥೋ, ಒಂದು ಮಾಸ್ ಹಾಗೂ ಎರಡು ಲವ್ ಸಾಂಗ್ ಸೇರಿ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿಕಾಸ್ ವಸಿಷ್ಠ ಸಂಗೀತ ನೀಡುತ್ತಿದ್ದಾರೆ.

TAGGED:AnuManju VijayasuryaRajata RakshaSarathStarಅನುಮಂಝು ವಿಜಯಸೂರ್ಯರಜತ ರಕ್ಷಾಶರತ್ಸ್ಟಾರ್
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

virat kohli 1
Cricket

ಮೊದಲ ಪಂದ್ಯದಲ್ಲೇ ದಾಖಲೆ ಬರೆದ ವಿರಾಟ್‌ ಕೊಹ್ಲಿ!

Public TV
By Public TV
1 minute ago
Pradeep Eshwar
Davanagere

ತೊಡೆ ತಟ್ಟಿದ್ದ ಪ್ರದೀಪ್‌ ಈಶ್ವರ್‌ಗೆ ಚಪ್ಪಲಿ, ಪೊರಕೆ ಪ್ರದರ್ಶಿಸಿದ ಬಿಜೆಪಿಗರು

Public TV
By Public TV
4 minutes ago
Nelamangala Death
Bengaluru City

ಈಜಲು ತೆರಳಿದ್ದ ಇಬ್ಬರು ಯುವಕರು ಕೃಷಿ ಹೊಂಡದಲ್ಲಿ ಮುಳುಗಿ ಸಾವು

Public TV
By Public TV
38 minutes ago
CRIME
Bengaluru City

ಬೆಂಗಳೂರಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ

Public TV
By Public TV
57 minutes ago
arecanut truck overturn at thirthahalli
Districts

ರಸ್ತೆಯಲ್ಲಿ ಕಾಳಿಂಗ ಅಡ್ಡ ಬಂದಿದ್ದಕ್ಕೆ ಕಕ್ಕಾಬಿಕ್ಕಿಯಾದ ಚಾಲಕ – ಅಡಿಕೆ ಸಾಗಿಸುತ್ತಿದ್ದ ಲಾರಿ ಪಲ್ಟಿ

Public TV
By Public TV
59 minutes ago
lakshmi hebbalkar
Districts

ಮಗಳಿಗೆ ಸುಮ್ಮನಿರು ಎನ್ನಬೇಡಿ, ಮಾತನಾಡು ಎನ್ನಿ: ಲಕ್ಷ್ಮಿ ಹೆಬ್ಬಾಳ್ಕರ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?